ಹೊಸ ಪ್ರಯತ್ನವನ್ನು ಮೆಚ್ಚಿಕೊಂಡ ಭಟ್ರು, ಶೆಟ್ರು
Recommended Video

''ಬೇರೆಯವರ ಮುಂದೆ ಗೆದ್ದು ಖುಷಿ ಪಡಬೇಕು..ನಮ್ಮವರ ಮುಂದೆ ಸೋತು ಖುಷಿ ಪಡಬೇಕು'' ಇಂತಹ ಅದ್ಬುತ ಸಾಲು ಇರುವುದು 'ಇರುವುದೆಲ್ಲವ ಬಿಟ್ಟು' ಸಿನಿಮಾ ಟ್ರೇಲರ್ ನಲ್ಲಿ.
ಸದ್ಯ 'ಇರುವುದೆಲ್ಲವ ಬಿಟ್ಟು' ಸಿನಿಮಾ ದಿನೇ ದಿನೇ ಕುತೂಹಲವನ್ನು ಹೆಚ್ಚು ಮಾಡುತ್ತಿದೆ. ಈಗ ಸಿನಿಮಾದ ಟ್ರೇಲರ್ ನೋಡಿ ಕನ್ನಡ ಚಿತ್ರರಂಗದ ಇಬ್ಬರು ಪ್ರತಿಭಾವಂತ ನಿರ್ದೇಶಕರು ಮೆಚ್ಚಿಕೊಂಡಿದ್ದಾರೆ.
ಟ್ರೇಲರ್ ವೀಕ್ಷಿಸಿ ಮಾತನಾಡಿದ ಯೋಗರಾಜ್ ಭಟ್ ''ಇರುವುದೆಲ್ಲವ ಬಿಟ್ಟು ಗೋಪಾಲಕೃಷ್ಣ ಅಡಿಗರ ಸಾಲು. ನಾನು ಅವರ ಭಕ್ತ. ಟೈಟೆಲ್ ಕೇಳಿದಾಗಲೇ ಕಂಟೆಂಟ್ ಏನು ಮಾಡಿಕೊಂಡಿದ್ದಾರೆ ಎಂದು ಕೇಳಿದೆ. ನಾನು ಚಿತ್ರಕ್ಕೆ ಪ್ರಮೋಷನಲ್ ಹಾಡನ್ನು ಬರೆದಿದ್ದೇನೆ. ನಿರ್ದೇಶಕ ಕಾಂತ ಕನ್ನಲ್ಲಿ ಒಳ್ಳೆಯ ನನಗೆ ಸ್ನೇಹಿತರು. ಅವರ ಎರಡನೇ ಸಿನಿಮಾ ಇದು. ಸದ್ಯದಲ್ಲಿಯೇ ಸಿನಿಮಾ ರಿಲೀಸ್ ಆಗುತ್ತದೆ. ಸಿನಿಮಾವನ್ನು ನೋಡಿ ಹರಸಿ.'' ಎಂದಿದ್ದಾರೆ.
ಚಿತ್ರದ ಟ್ರೇಲರ್ ಬಗ್ಗೆ ಮಾತನಾಡಿರುವ ರಿಷಬ್ ಶೆಟ್ಟಿ ''ನಾನು ಸಿನಿಮಾದ ಟ್ರೇಲರ್ ನೋಡಿದೆ. ತುಂಬ ನೀಟ್ ಆಗಿ ಈ ಸಿನಿಮಾ ಮಾಡಿದ್ದಾರೆ. ಈ ರೀತಿಯ ಜಾನರ್ ಕನ್ನಡದಲ್ಲಿ ಬರುತ್ತಿಲ್ಲ. ಎಲ್ಲರೂ ಸಿನಿಮಾವನ್ನು ನೋಡಿ'' ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಅಂದಹಾಗೆ, 'ಇರುವುದೆಲ್ಲವ ಬಿಟ್ಟು' ಸಿನಿಮಾದಲ್ಲಿ ನಟಿ ಮೇಘನಾ ರಾಜ್, ತಿಲಕ್ ಹಾಗೂ ಶ್ರೀ ಮಹದೇವ್ ನಟಿಸಿದ್ದಾರೆ. ಇತ್ತೀಚಿಗಷ್ಟೆ ದರ್ಶನ್ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದು, ಟ್ರೇಲರ್ ಯೂ ಟ್ಯೂಬ್ ನಲ್ಲಿ ದೊಡ್ಡ ಹಿಟ್ ಆಗಿದೆ.


Click it and Unblock the Notifications











