ಅಂದು ಸೆಪ್ಟೆಂಬರ್ ಇಂದು ಅಕ್ಟೋಬರ್, ಭಾರತದೆಲ್ಲೆಡೆ ಈ ದಿನದಿಂದ ಮತ್ತೊಮ್ಮೆ ಹರಡಲಿದೆ 'ಕಾಂತಾರ' ಕಂಪು...!

ಸದಭಿರುಚಿಯ ಚಿತ್ರಗಳನ್ನು ಮಾಡುತ್ತಲೇ ಸೈ ಎನ್ನಿಸಿಕೊಂಡು, ಸ್ಯಾಂಡಲ್ ವುಡ್ ನ ಭರವಸೆಯ ನಿರ್ದೇಶಕ ಕಮ್ ನಾಯಕನಾಗಿ ಗುರುತಿಸಿಕೊಂಡಿರುವವರು ರಿಷಬ್ ಶೆಟ್ಟಿ. ಕಥೆ ಸ್ಟ್ರಾಂಗಾಗಿದ್ದರೆ ಚಿತ್ರ ಗೆಲ್ಲುತ್ತೆ ಎನ್ನುವುದನ್ನು ಮೇಲಿಂದ ಮೇಲೆ ನಿರೂಪಿಸುತ್ತಾ ಬಂದ ರಿಷಬ್, ಸದ್ಯ ಕಾಂತಾರದ ಧ್ಯಾನದಲ್ಲಿದ್ದಾರೆ. ಶ್ರದ್ಧೆ ಮತ್ತು ಭಕ್ತಿಯಿಂದ ಚಿತ್ರ ಮತ್ತು ಪಾತ್ರಕ್ಕೆ ಜೀವ ತುಂಬಲು ಶ್ರಮಿಸುತ್ತಿದ್ದಾರೆ.

ಇನ್ನೂ ಕಾಂತಾರ ಚಿತ್ರದ ಪ್ರಿಕ್ವೆಲ್‌ನ ರಿಷಬ್ ಘೋಷಿಸಿದ ದಿನದಿಂದನೇ ಈ ಚಿತ್ರದ ಬಿಡುಗಡೆಯ ದಿನದ ಕುರಿತು ಪ್ರಶ್ನೆಗಳು ಎದ್ದಿದ್ದವು. ಯಾಕೆಂದರೆ.. ರಿಷಬ್ ಈ ಹಿಂದೆ ಕಾಂತಾರ ಮಾಡಿದಾಗ ಯಾರು ಈ ಚಿತ್ರ ಚರಿತ್ರೆ ಸೃಷ್ಟಿಸುತ್ತೆ ಎಂದುಕೊಂಡಿರಲಿಲ್ಲ. ಖುದ್ದು ನಿರ್ದೇಶಕ ರಿಷಬ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ಅವರಲ್ಲಿಯೇ ಕಾಂತಾರ ಮೈಲಿಗಲ್ಲಾಗುತ್ತೆ ಎನ್ನುವ ನಂಬಿಕೆ ಇರಲಿಲ್ಲ.

Rishab Shetty s Kantara Chapter 1 Gets a Release Date Much-Awaited Pan-India Film to Release on

ಆದರೆ. ದೈವ ಕೃಪೆ.. ಕಾಂತಾರ ಚಿತ್ರವನ್ನು ಭಾಷೆಯ ಭೇದ ಭಾವ ಇಲ್ಲದೇ ಎಲ್ಲರು ನೋಡಿದರು. ಭಾರತದೆಲ್ಲೆಡೆ ವ್ಯಕ್ತವಾದ ಬೇಡಿಕೆಯಿಂದ ಚಿತ್ರವನ್ನು ಆ ನಂತರ ಆಯಾ ಭಾಷೆಗೆ ಡಬ್ ಮಾಡಿ ಚಿತ್ರವನ್ನು ರಿಷಬ್ ಮತ್ತು ವಿಜಯ್ ಕಿರಗಂದೂರ್ ಬಿಡುಗಡೆಯನ್ನು ಮಾಡಿದರು. ಇನ್ನೂ ಏಳೆಂಟು ಕೋಟಿ ಖರ್ಚು ಮಾಡಿ ಬರೋಬ್ಬರಿ ನಾನ್ನೂರು ಕೋಟಿ ಲಾಭ ಮಾಡಿದ ಹೊಂಬಾಳೆ ಸಂಸ್ಥೆ ಕೂಡ ಈ ನಿರೀಕ್ಷೆಗಳಿಗೆ ಪೂರಕವಾಗಿ ಚಿತ್ರವನ್ನು ಈ ಬಾರಿ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ.

ಇನ್ನೂ ಹಿಂದೆ ಹೇಳಿದಂತೆ ಕಾಂತಾರ ಕೇವಲ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಆದರೆ ಕಾಂತಾರ ಚಾಪ್ಟರ್ 1 ಹಾಗಲ್ಲ. ಕನ್ನಡದ ಜೊತೆ ಜೊತೆಯಲ್ಲಿ ಇಂಗ್ಲೀಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಬೆಂಗಾಲಿಯಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈ ಕಾರಣಕ್ಕೆ ಕಾಂತಾರ ಚಿತ್ರದ ಮೊದಲ ಭಾಗದ ಮೇಲೀಗ ವಿಪರೀತ ನಿರೀಕ್ಷೆಗಳಿವೆ. ರಿಷಬ್ ಮತ್ತು ಹೊಂಬಾಳೆ ಮೇಲೆ ಜವಾಬ್ಧಾರಿ ಕೂಡ ಹೆಚ್ಚಿದೆ.

ಈ ಎಲ್ಲ ಕಾರಣಗಳಿಂದ ಈ ಬಾರಿ ಕಾಂತಾರ ಚಾಪ್ಟರ್ 1 ಚಿತ್ರದ ಬಿಡುಗಡೆಯ ದಿನಾಂಕವನ್ನು ಅಳೆದು ತೂಗಿ ನಿರ್ಧಾರವನ್ನು ಮಾಡುತ್ತಾರೆ ಎಂದು ಎಲ್ಲರು ಅಂದುಕೊಂಡಿದ್ದರು. ಕುತೂಹಲದಿಂದ ಚಿತ್ರದ ಬಿಡುಗಡೆಯ ದಿನ ತಿಳಿಯಲು ಕಾದು ಕುಳಿತುಕೊಂಡಿದ್ದರು. ಈ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಕಾಂತಾರ ಮೊದಲ ಭಾಗ ಗಾಂಧಿ ಜಯಂತಿ ಮತ್ತು ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 2-2025ರಂದು ಬಿಡುಗಡೆಯಾಗಲಿದೆ.

ಸಹಜವಾಗಿ ಈ ಸುದ್ದಿಯನ್ನು ಕೇಳಿದ ಕಲಾಪ್ರಿಯರು ಖುಷಿಯಾಗಿದ್ದಾರೆ. ಇವರ ಈ ಸಂಭ್ರಮಕ್ಕೆ ಕೈಗನ್ನಡಿ ಎನ್ನುವಂತೆ ಬಿಹಾರದಲ್ಲಿ ಪುಷ್ಪ ಜಾತ್ರೆ ನಡೆಯುತ್ತಿದ್ದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಕಾಂತಾರ ಟ್ರೆಂಡ್ ಆಗಿದೆ. #KantaraChapter1onOct2 ಎಂಬ ಹ್ಯಾಶ್ ಟ್ಯಾಗ್‌ ಎಲ್ಲೆಂದರಲ್ಲಿ ಕಾಣಿಸುತ್ತಿದೆ.

ಅಂದ್ಹಾಗೇ 2022ರಲ್ಲಿ ಕಾಂತಾರ ಚಿತ್ರ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿತ್ತು. ಐತಿಹಾಸಿಕ ದಾಖಲೆಯನ್ನು ಬರೆದಿತ್ತು. ಈಗ ಮೂರು ವರ್ಷದ ನಂತರ ಎರಡು ದಿನ ತಡವಾಗಿ ಅಂದರೆ ಅಕ್ಟೋಬರ್ 2ರಂದು ಕಾಂತಾರದ ಮೊದಲ ಅಧ್ಯಾಯ ಬಿಡುಗಡೆಯಾಗುತ್ತಿದೆ. ಆಗ ಸೃಷ್ಟಿಯಾದ ಇತಿಹಾಸ ಈಗ ಇನ್ನೊಮ್ಮೆ ಸೃಷ್ಟಿಯಾಗುತ್ತಾ ಅನ್ನುವ ಪ್ರಶ್ನೆ ಕೂಡ ಈಗ ಅನೇಕರನ್ನು ಕಾಡುತ್ತಿದೆ.

ಇನ್ನುಳಿದಂತೆ ಕೆರಾಡಿಯಲ್ಲಿ ಭಾರೀ ಸೆಟ್ ನಿರ್ಮಾಣ ಮಾಡಿ ಪ್ರೀಕ್ವೆಲ್ ಚಿತ್ರೀಕರಣ ನಡೆಸಲಾಗುತ್ತಿದೆ. ಕುಂದಾಪುರದಲ್ಲಿ 22 ಸಾವಿರ ಚದರ ಅಡಿ ವಿಸ್ತೀರ್ಣದ ಶೂಟಿಂಗ್ ಫ್ಲೋರ್ ನಿರ್ಮಿಸಿ 'ಕಾಂತಾರ' ಚಾಪ್ಟರ್-1 ಚಿತ್ರೀಕರಣ ನಡೆಸಲಾಗುತ್ತಿದೆ. ಅದರ ಒಳಗೆ ನಾಲ್ಕೈದು ಸೆಟ್‌ಗಳನ್ನು ನಿರ್ಮಿಸಲಾಗಿದೆ.ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಎರಡನೇ ಭಾಗ ಪ್ರೇಕ್ಷಕರ ಮುಂದೆ ಬರಲಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ.

ಒಟ್ನಲ್ಲಿ ಸಿನಿಮಾವೊಂದು ಪೋಸ್ಟರ್ ಮೂಲಕವೇ ಕ್ರೇಜು ಕ್ರಿಯೇಟ್ ಮಾಡಿ, ಈ ಸಿನಿಮಾದಲ್ಲಿ ಏನೋ ಇದೆ ಎನ್ನುವ ಕುತೂಹಲ ಹುಟ್ಟಿಸೋದು ಅಂದರೆ ಅದೊಂದು ಸಾಧನೆಯಂತೆಯೇ. ಈ ಸಾಧನೆಯನ್ನು ರಿಷಬ್ ಶೆಟ್ಟಿ ಸದ್ಯಕ್ಕೆ ತಮ್ಮ ಕಾಂತಾರ ಚಿತ್ರದ ಪೋಸ್ಟರ್ ಮೂಲಕ ಮಾಡಿದ್ದಾರೆ ಎಂದರೆ ಅದು ಅತಿಶಯೋಕ್ತಿಯಲ್ಲ.

More from Filmibeat

Read more about: rishab shetty hombale sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X