ರಿಷಬ್ 'ಕಾಂತಾರ' ಪ್ರಪಂಚ ನೋಡಿದ್ರಾ? ಬರೆದಿಟ್ಕೊಳ್ಳಿ ₹1000 ಕೋಟಿ ಕಲೆಕ್ಷನ್ ಗ್ಯಾರಂಟಿ

ಹೊಂಬಾಳೆ ಹಾಗೂ ರಿಷಬ್ ಶೆಟ್ಟಿ ಕನಸು ನನಸಾಗುವ ಸಮಯ ಹತ್ತಿರ ಬರ್ತಿದೆ. 'ಕಾಂತಾರ' ಚಾಪ್ಟರ್- 1 ಚಿತ್ರೀಕಣ ಮುಕ್ತಾಯವಾಗಿದೆ. ಚಿತ್ರದ ಅದ್ಭುತ ಮೇಕಿಂಗ್ ವೀಡಿಯೋ ಇದೀಗ ರಿಲೀಸ್ ಆಗಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ನಿರ್ಮಾಣವಾಗುತ್ತಿರುವುದು ಗೊತ್ತಾಗುತ್ತಿದೆ. ಸಾವಿರಾರು ಜನ ಸಹ ಕಲಾವಿದರನ್ನು ಬಳಸಿಕೊಂಡು ಸಿನಿಮಾ ಸೆರೆ ಹಿಡಿಯಲಾಗಿದೆ.

ತಮ್ಮದೇ ಧ್ವನಿಯಲ್ಲಿ 'ಕಾಂತಾರ' ಪ್ರಪಂಚವನ್ನು ರಿಷಬ್ ಶೆಟ್ಟಿ ವರ್ಣಿಸಿದ್ದಾರೆ. ಸಾಕಷ್ಟು ಸಂಕಷ್ಟಗಳ ನಡುವೆಯೂ ದೈವಶಕ್ತಿಯ ಬಲದಿಂದ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದನ್ನು ಮೆಲುಕು ಹಾಕಿದ್ದಾರೆ. ನಿಜಕ್ಕೂ ಚಿತ್ರಕ್ಕಾಗಿ ಇಡೀ ತಂಡ ಬಹಳ ಶ್ರಮಪಟ್ಟಿದೆ. ಇನ್ನು ಹೊಂಬಾಳೆ ಸಂಸ್ಥೆ ನೀರಿನಂತೆ ಹಣ ಚೆಲ್ಲಿ ಸಿನಿಮಾ ನಿರ್ಮಾಣ ಮಾಡಿರುವುದು ಗೊತ್ತಾಗುತ್ತಿದೆ. ಬರೀ ಮೇಕಿಂಗ್ ವೀಡಿಯೋವನ್ನು ಒಂದು ಸಿನಿಮಾ ರೀತಿ ಕಟ್ಟಿಕೊಟ್ಟಿದ್ದಾರೆ.

Rishab Shetty s Kantara Chapter -1 Shoot Wrapped making Glimpse out

ಪಾತ್ರಕ್ಕಾಗಿ ರಿಷಬ್ ಶೆಟ್ಟಿ ತಯಾರಾಗಿರುವುದು, ಸೆಟ್ ನಿರ್ಮಾಣ, ಕಾಸ್ಟ್ಯೂಮ್ ಡಿಸೈನ್ ಎಲ್ಲವನ್ನು ಮೇಕಿಂಗ್ ವೀಡಿಯೋದಲ್ಲಿ ತೆರೆದಿಟ್ಟಿದ್ದಾರೆ. ಚಿತ್ರಕ್ಕಾಗಿ ಒಂದು ಊರಿನ ಸೆಟ್ ಅನ್ನೇ ಹಾಕಿದ್ದಾರೆ. ನಡುವೆ ದೊಡ್ಡದೊಂದು ದೇವಾಲಯ ಸೆಟ್ ಕೂಡ ಇದೆ. ಅದೇ ಚಿತ್ರದ ಹೈಲೆಟ್ ಆಗುವಂತೆ ಕಾಣುತ್ತಿದೆ. ಸಾಮಾನ್ಯವಾಗಿ ರಾಜಮೌಳಿ ತಮ್ಮ ಸಿನಿಮಾಗಳಿಗೆ ಹೀಗೆ ದೊಡ್ಡ ಸೆಟ್‌ಗಳನ್ನು ಹಾಕಿ ಸಾವಿರಾರು ಜನರನ್ನು ಬಳಸಿಕೊಂಡು ಚಿತ್ರೀಕರಣ ನಡೆಸುತ್ತಾರೆ. ಅದೇ ರೀತಿ 'ಕಾಂತಾರ' ತಂಡ ಕೂಡ ದೊಡ್ಡದಾಗಿ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳಲು ಶ್ರಮಿಸಿದ್ದಾರೆ.

ನನ್ನದೊಂದು ಕನಸು.. ನಮ್ಮ ಮಣ್ಣಿನ ಕಥೆಯನ್ನು ಇಡೀ ಪ್ರಪಂಚಕ್ಕೆ ಹೇಳಬೇಕು ಅಂತ. ನಮ್ಮ ಊರು, ನಮ್ಮ ಜನ, ನಮ್ಮ ನಂಬಿಕೆಗಳು. ಆ ಕನಸಿನ ಬೆನ್ನತ್ತಲು ಶುರು ಮಾಡಿದಾಗ ಸಾವಿರಾರು ಜನ ನನ್ನ ಬೆನ್ನಿಗೆ ನಿಂತರು. 3 ವರ್ಷಗಳ ಪರಿಶ್ರಮ. 250 ದಿನಗಳ ಚಿತ್ರೀಕರಣ. ಎಷ್ಟೇ ಕಷ್ಟ ಬಂದರೂ ನಾನು ನಂಬಿದ ದೈವ ನನ್ನ ಕೈಬಿಡಲಿಲ್ಲ. ನನ್ನ ಇಡೀ ತಂಡ ನನ್ನ ನಿರ್ಮಾಪಕರು ನನ್ನ ಬೆನ್ನೆಲುಬಾಗಿ ಇದ್ದರು. ಪ್ರತಿದಿನ ಸೆಟ್‌ನಲ್ಲಿ ಸಾವಿರಾರು ಜನರನ್ನು ನೋಡಿದಾಗ ನನಗೆ ಕಾಡುತ್ತಿದ್ದ ವಿಷಯ ಒಂದೇ. ಇದು ಕೇವಲ ಸಿನಿಮಾ ಅಲ್ಲ.. ಇದೊಂದು ಶಕ್ತಿ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

Rishab Shetty s Kantara Chapter -1 Shoot Wrapped making Glimpse out

ಕೊನೆ ದಿನ ಚಿತ್ರೀಕರಣ ಮುಗಿದ ಬಳಿಕ ತಂಡದ ಎಲ್ಲರಿಗೂ ಧನ್ಯವಾದ ತಿಳಿಸಿ ರಿಷಬ್ ಶೆಟ್ಟಿ ಪ್ಯಾಕಪ್ ಹೇಳಿದ್ದಾರೆ. "ಕಾಂತಾರದ ಪ್ರಪಂಚಕ್ಕೆ ನಿಮ್ಮಗೆಲ್ಲರಿಗೂ ಸ್ವಾಗತ" ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ. ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬರುವುದು ಗ್ಯಾರಂಟಿ ಎಂದು ಚಿತ್ರತಂಡ ಮತ್ತೊಮ್ಮೆ ಖಚಿತಪಡಿಸಿದೆ. ಕೇವಲ 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಕಾಂತಾರ' ಸಿನಿಮಾ 3 ವರ್ಷಗಳ ಹಿಂದೆ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಆದರೆ 'ಕಾಂತಾರ' ಪ್ರೀಕ್ವೆಲ್ ಅದನ್ನು ಮೀರಿ ಗೆಲ್ಲುವ ಸುಳಿವು ಸಿಕ್ಕಿದೆ.

'ಕಾಂತಾರ' ಚಾಪ್ಟರ್-1 ಬಜೆಟ್ ಎಷ್ಟು ಎನ್ನುವುದು ಗೊತ್ತಿಲ್ಲ. ಆದರೆ ಚಿತ್ರಕ್ಕಾಗಿ ಹಾಕಿರುವ ಸೆಟ್, ಚಿತ್ರೀಕರಣ ನಡೆಸಿರುವ ಪರಿ ನೋಡಿದರೆ ಬಹಳ ದೊಡ್ಡಮಟ್ಟದಲ್ಲೇ ಸಿನಿಮಾ ನಿರ್ಮಾಣವಾಗಿರುವುದಯ ಗೊತ್ತಾಗುತ್ತಿದೆ. ಸದ್ಯ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳ ಟಾರ್ಗೆಟ್ 1000 ಕೋಟಿ ರೂ. ಎನ್ನುವಂತಾಗಿದೆ. ಈಗಾಗಲೇ 'ಕಾಂತಾರ' ಗೆದ್ದಿರುವುದರಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೀಕ್ವೆಲ್ ಸದ್ದು ಮಾಡಲಿದೆ. ಅನಾಯಾಸವಾಗಿ 1000 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ಸಿನಿರಸಿಕರು ಅಂದಾಜಿಸುತ್ತಿದ್ದಾರೆ.

'ಕಾಂತಾರ' ಚಿತ್ರಕ್ಕೆ ಕೆಲಸ ಮಾಡಿದ್ದ ಅದೇ ತಂಡ ಈಗ ಪ್ರೀಕ್ವೆಲ್‌ಗೆ ಕೈ ಜೋಡಿಸಿದೆ. ರಿಷಬ್ ಶೆಟ್ಟಿ ಮತ್ತೊಮ್ಮೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.

More from Filmibeat

English summary
kantara chapter 1 movie making video out now
Read more about: rishab shetty kantara sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X