ಕಾಂತಾರಗೆ ಮತ್ತೊಂದು ಕಿರೀಟ: ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೂಪರ್ ಹಿಟ್ 'ಕಾಂತಾರ'

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಪ್ರತಿ ವರ್ಷ ನವೆಂಬರ್ ಅಂತ್ಯದಲ್ಲಿ ನಡೆಯಲಿದ್ದು, ಈ ಬಾರಿ ನವೆಂಬರ್ 20 ರಿಂದ ನವೆಂಬರ್ 28 ರ ನಡುವೆ ನಡೆಯಲಿದೆ. ಈ ಉತ್ಸವದಲ್ಲಿ ಪ್ರಪಂಚದಾದ್ಯಂತದ ವಿವಿಧ ಚಲನಚಿತ್ರಗಳ ಜೊತೆಗೆ ನಮ್ಮದೇ ಪ್ರಾದೇಶಿಕ ಚಲನಚಿತ್ರಗಳು ಕೂಡ ಪ್ರದರ್ಶನವಾಗಲಿದೆ. ಹೀಗಾಗಿ ಸಿನಿಮಾ ಪ್ರೇಮಿಗಳಿಗೆ, ಚಿತ್ರರಂಗಗಳಿಗೆ ಇದೊಂದು ಅತ್ಯುತ್ತಮ ಕಾರ್ಯಕ್ರಮ.

ಈ ಬಾರಿ 54ನೇ ಐಎಫ್‌ಎಫ್‌ಐನಲ್ಲಿ ತಮಿಳು, ಮಲಯಾಳಂ ಮತ್ತು ಕನ್ನಡ ಸಿನಿರಂಗಗಳ ಹಲವಾರು ಸಿನಿಮಾಗಳು ಪ್ರದರ್ಶನವಾಗಲಿವೆ. ಕನ್ನಡದ ಸೀಪರ್ ಹಿಟ್ ಸಿನಿಮಾ ರಿಷಬ್ ಶೆಟ್ಟಿ ಅವರ 'ಕಾಂತಾರ' ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದ್ದು, ಕಾಂತಾರಕ್ಕೆ ಮತ್ತೊಂದು ಗರಿ ಸಿಕ್ಕಿದೆ.

Rishab Shettys Kantara Selected for The 54th International Film Festival Of India

54ನೇ ಐಎಫ್‌ಎಫ್‌ಐನಲ್ಲಿ ರಿಷಬ್ ಶೆಟ್ಟಿಯ 'ಕಾಂತಾರ'

2022 ರಲ್ಲಿ ಬಿಡುಗಡೆಯಾದ ರಿಷಬ್ ಶೆಟ್ಟಿಯವರ ನಿರ್ದೇಶನ ಮತ್ತು ನಟನೆಯ ಸಿನಿಮಾ ಕಾಂತಾರ. ಈ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಿ ಬಳಿಕ ಬೇರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಿದೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಕಮಾಲ್ ಮಾಡಿದ ಸಿನಿಮಾ ಇದು. ಈ ಚಿತ್ರದಿಂದ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು. ನಟಿ ಸಪ್ತಮಿ ಗೌಡ ಬಾಲಿವುಡ್ ಅಂಗಳಕ್ಕೂ ಕಾಲಿರಿಸಿದರು.

ಕರಾವಳಿ ಭಾಗದ ಭೂತ ಕೋಲದ ಕಲಾ ಪ್ರಕಾರವು ಚಿತ್ರದಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿದ್ದು, ಭೂತ ಕೋಲ ಮತ್ತು ನಟರ ಅಭಿನಯಕ್ಕೆ ಇಡೀ ದೇಶದ ಜನರೇ ತಲೆದೂಗಿದ್ದರು. ಸದ್ಯ ಈ ಸಿನಿಮಾ 54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರತಿಷ್ಠಿತ ಭಾರತೀಯ ಪನೋರಮಾದಲ್ಲಿ ಅಧಿಕೃತ ಆಯ್ಕೆಯಾಗಿದೆ.

Rishab Shettys Kantara Selected for The 54th International Film Festival Of India

ಭಾರತೀಯ ಪನೋರಮಾವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಯ ಪ್ರಮುಖ ವಿಭಾಗವಾಗಿದ್ದು. ಅದು ಭಾರತೀಯ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳನ್ನು ಪ್ರದರ್ಶಿಸುತ್ತದೆ. ಇದು ಭಾರತೀಯ ಚಲನಚಿತ್ರದ ವೈವಿಧ್ಯತೆಯನ್ನು ಪ್ರತಿನಿಧಿಸುವ ಫೀಚರ್ ಮತ್ತು ನಾನ್-ಫೀಚರ್ ಚಲನಚಿತ್ರಗಳನ್ನು ಆಯ್ಕೆ ಮಾಡಿ ಪ್ರದರ್ಶಿಸುತ್ತದೆ.

ಕಾಂತಾರ

ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿರುವ 'ಕಾಂತಾರ' ಕರಾವಳಿ ಕರ್ನಾಟಕ ಪ್ರದೇಶದ ಗ್ರಾಮೀಣ ಭಾಗವನ್ನು ಪ್ರತಿನಿಧಿಸುವ ಸಿನಿಮಾ. ಇದು ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಸಂಘರ್ಷದಲ್ಲಿ ಸಿಲುಕಿರುವ ಯುವಕ ಶಿವನ ಕಥೆಯನ್ನು ಹೇಳುತ್ತದೆ. ಸಿನಿಮಾದ ಅದ್ಭುತ ದೃಶ್ಯಗಳು, ಗಟ್ಟಿ ಕಥೆ, ಸಂಸ್ಕೃತಿ ಮತ್ತು ದೈವದ ಮೇಲಿನ ನಂಬಿಕೆಯಂತಹ ವಿಷಯಗಳಿಗೆ ಒತ್ತು ನೀಡಿದೆ.

ಸಿನಿಮಾವೂ ಭಾರತೀಯ ಪನೋರಮಾಕ್ಕೆ ಆಯ್ಕೆಯಾಗಿರುವುದು ಚಿತ್ರದ ಗುಣಮಟ್ಟ ಮತ್ತು ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹೊಂಬಾಳೆ ಫಿಲ್ಮ್ಸ್ ಕಾಂತಾರ ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ ನಡೆಯಲಿರುವ ಭಾರತದ 54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ.

2018 ಮತ್ತು ಪೊನ್ನಿಯಿನ್ ಸೆಲ್ವನ್ II

ಕಾಂತಾರ ಸಿನಿಮಾದ ಜೊತೆಗೆ ಕೇರಳ ಪ್ರವಾಹವನ್ನು ಆಧರಿಸಿದ ಮಲಯಾಳಂ ಸಿನಿಮಾ 2018 ಕೂಡ ಆಯ್ಕೆಯಾಗಿದೆ. ಚಿತ್ರದಲ್ಲಿ ಟೊವಿನೋ ಥಾಮಸ್, ಕುಂಚಾಕೊ ಬೋಬನ್, ಆಸಿಫ್ ಅಲಿ, ಅಪರ್ಣಾ ಬಾಲಮುರಳಿ, ನರೇನ್ ನಟಿಸಿದ್ದಾರೆ. ಈ ಚಲನಚಿತ್ರವು 96 ನೇ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕಾಗಿ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿದೆ.

ಪೊನ್ನಿಯಿನ್ ಸೆಲ್ವನ್ II

ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ II ಕೂಡ ಗೋವಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ. ಸಿನಿಮಾದಲ್ಲಿ ವಿಕ್ರಮ್, ಜಯಂ ರವಿ, ಕಾರ್ತಿ, ಐಶ್ವರ್ಯ ರೈ ಬಚ್ಚನ್, ತ್ರಿಶಾ, ಸೋಭಿತಾ ದುಲಿಪಾಲ, ಕಿಶೋರ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.

More from Filmibeat

English summary
Kantara Selected for 54th international film festival of India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X