twitter
    For Quick Alerts
    ALLOW NOTIFICATIONS  
    For Daily Alerts

    ಲೈಂಗಿಕ ದೌರ್ಜನ್ಯ ವಿರುದ್ಧದ Metoo ಬಗ್ಗೆ ರಿಷಬ್ ಹೇಳೋದೆ ಬೇರೆ

    |

    Recommended Video

    ಮೀ ಟೂ ಬಗ್ಗೆ ಏನಂತಾರೆ ನೋಡಿ ರಿಷಬ್ ಶೆಟ್ಟಿ..! | FILMIBEAT KANNADA

    ಇದೀಗ ಚಿತ್ರರಂಗದಲ್ಲಿ Metoo ಬಗ್ಗೆಯೇ ಚರ್ಚೆ ಶುರುವಾಗಿದೆ. ಎಷ್ಟೋ ವರ್ಷಗಳಿಂದ ಹೊರಬರದ ಎಷ್ಟೋ ಘಟನೆಗಳು ಈಗ ಎಲ್ಲರಿಗೆ ತಿಳಿಯುತ್ತಿವೆ. ಲೈಂಗಿಕ ದೌರ್ಜನ್ಯದ ಅನೇಕ ಪ್ರಕರಣಗಳು ಬಹಿರಂಗ ಆಗುತ್ತಿವೆ.

    ಬಾಲಿವುಡ್ ನಲ್ಲಿ ಶುರುವಾದ Metoo ನಂತರ ಸೌತ್ ಇಂಡಸ್ಟ್ರಿಯನ್ನು ಪ್ರವೇಶ ಮಾಡಿತು. ಕನ್ನಡದಲ್ಲಿಯೂ ಈಗ ಈ ವಿಷಯ ಚರ್ಚೆ ಆಗುತ್ತಿದೆ.

    ನಿನ್ನೆ ಸಂಗೀತ ನಿರ್ದೇಶಕ ರಘು ದೀಕ್ಷಿತ್ ತಮ್ಮ ಮೇಲೆ ಬಂದ ಆರೋಪವನ್ನು ತಾವೇ ಒಪ್ಪಿಕೊಂಡಿದ್ದರು. ರಘು ದೀಕ್ಷಿತ್ ಪ್ರಕರಣ ಹೊರತು ಪಡಿಸಿದರೆ ಕನ್ನಡದಲ್ಲಿ ಯಾರ ಬಗ್ಗೆ ಕೂಡ ಇಂತಹ ಆರೋಪ ಕೇಳಿ ಬಂದಿಲ್ಲ.

    'ತಬ್ಬಿಕೊಂಡು, ಮುತ್ತುಕೊಡಲು ಪ್ರಯತ್ನ ಮಾಡಿದ್ದು ನಿಜ', ಆದರೆ.. : ರಘು ದೀಕ್ಷಿತ್ ನೇರ ಸ್ಪಷ್ಟನೆ 'ತಬ್ಬಿಕೊಂಡು, ಮುತ್ತುಕೊಡಲು ಪ್ರಯತ್ನ ಮಾಡಿದ್ದು ನಿಜ', ಆದರೆ.. : ರಘು ದೀಕ್ಷಿತ್ ನೇರ ಸ್ಪಷ್ಟನೆ

    ಅಂದಹಾಗೆ, ಇದೀಗ, Metoo ಅಭಿಯಾನದ ಬಗ್ಗೆ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

    ಘಟನೆ ನಡೆದಾಗಲೇ ಹೇಳಬೇಕು

    ಘಟನೆ ನಡೆದಾಗಲೇ ಹೇಳಬೇಕು

    ''Metoo ಅಭಿಯಾನದ ಬಗ್ಗೆ ನನಗೆ ಐಡಿಯಾ ಇಲ್ಲ. ಅದರ ಬಗ್ಗೆ ಅಭಿಯಾನ ಮಾಡುವವರಿಗೆ ನಾನು ಹೇಳುವುದು ಏನೆಂದರೆ, ಇದೊಂದು ಸೀಸನ್... ಪ್ರತಿ ಸಲ ಕೂಡ ಒಂದೊಂದು ಹ್ಯಾಶ್ ಟ್ಯಾಗ್ ಹಾಕಿ ಒಂದು ಸೀಸನ್ ಬರುತ್ತವೆ. ಮೀಟೂ ಬಂದಿದೆ ಎಂದು ಈಗ ಅದನ್ನು ಹೇಳುವ ಬದಲು ತಮ್ಮ ಮೇಲೆ ಆ ರೀತಿಯ ಘಟನೆ ನಡೆದಾಗಲೇ ಹೇಳಬೇಕು.'' - ರಿಷಬ್ ಶೆಟ್ಟಿ, ನಿರ್ದೇಶಕ

    ವಿಚ್ಛೇದನ, ಲೈಂಗಿಕ ದೌರ್ಜನ್ಯದ ಬಗ್ಗೆ ರಘು ದೀಕ್ಷಿತ್ ಪತ್ನಿ ಮಯೂರಿ ಟ್ವೀಟ್! ವಿಚ್ಛೇದನ, ಲೈಂಗಿಕ ದೌರ್ಜನ್ಯದ ಬಗ್ಗೆ ರಘು ದೀಕ್ಷಿತ್ ಪತ್ನಿ ಮಯೂರಿ ಟ್ವೀಟ್!

    ಫಲಿತಾಂಶ ಕೂಡ ಬೇಗ ಸಿಗುತ್ತದೆ

    ಫಲಿತಾಂಶ ಕೂಡ ಬೇಗ ಸಿಗುತ್ತದೆ

    ''ಘಟನೆಗಳು ನಡೆದ ಕೂಡಲೇ ಹೇಳಿದರೆ ಅದಕ್ಕೆ ಫಲಿತಾಂಶ ಕೂಡ ಬೇಗ ಸಿಗುತ್ತದೆ. ಟ್ರೆಂಡ್ ಆಗಲಿ.. ವಿಷಯ ಈಗ ಆಚೆ ಬರಲಿ.. ಎಂದು ಹೇಳುವುರಿಂದ ಮೀಡಿಯಾ ಅವಕಾಶ ಸಿಗಬಹುದು, ನಾವೂ ಹ್ಯಾಶ್ ಟ್ಯಾಗ್ ಹಾಕಿಕೊಂಡು ಹೋಗಬಹುದು ಅಷ್ಟೇ.'' - ರಿಷಬ್ ಶೆಟ್ಟಿ, ನಿರ್ದೇಶಕ

    ಘಟನೆ ಆದಗಲೇ ಮೀಡಿಯಾ ಬಳಿ ಹೇಳಬೇಕು

    ಘಟನೆ ಆದಗಲೇ ಮೀಡಿಯಾ ಬಳಿ ಹೇಳಬೇಕು

    ''ಎಲ್ಲೋ ಏನಾದರೂ ಆಯ್ತು ಎಂದ ತಕ್ಷಣ ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ ತಮ್ಮ ಜಾಗವನ್ನು ಸೃಷ್ಟಿ ಮಾಡುತ್ತಾರೆ. ಯಾವಾಗಲೋ 10 ವರ್ಷ ಬಿಟ್ಟು ಹೇಳುವುದಕ್ಕಿಂತ ಘಟನೆ ಆದಗಲೇ ಮೀಡಿಯಾ ಬಳಿ ಹೇಳಬೇಕು. ಆಗಲೇ ಕೇಸ್ ಹಾಕಿದರೆ ತಕ್ಷಣ ಪ್ರತಿಕ್ರಿಯೆ ಸಿಗುತ್ತದೆ. ಆಗಾಗ ಆಗುವ ಕೆಲಸಗಳನ್ನು ಆಗಲೇ ಮಾಡಿದರೆ ಒಳ್ಳೆಯದು ಅಂತ ಅನಿಸುತ್ತದೆ. - ರಿಷಬ್ ಶೆಟ್ಟಿ, ನಿರ್ದೇಶಕ

    50ನೇ ದಿನದ ಸಂಭ್ರಮಾಚರಣೆಯಲ್ಲಿ

    50ನೇ ದಿನದ ಸಂಭ್ರಮಾಚರಣೆಯಲ್ಲಿ

    ರಿಷಬ್ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾದ 50ನೇ ದಿನದ ಸಂಭ್ರಮಾಚರಣೆ ಕಾರ್ಯಕ್ರಮ ನಿನ್ನೆ ನಡೆಯಿತು. ಈ ಕಾರ್ಯಕ್ರಮದ ವೇಳೆ ಮಾಧ್ಯಮದಿಂದ ಬಂದ ಮೀಟೂ ಅಭಿಯಾನದ ಪ್ರಶ್ನೆಗೆ ರಿಷಬ್ ಈ ರೀತಿ ಉತ್ತರ ನೀಡಿದರು.

    ಯಾರು ಹೆಚ್ಚಾಗಿ ಪ್ರತಿಕ್ರಿಯೆ ನೀಡಿಲ್ಲ

    ಯಾರು ಹೆಚ್ಚಾಗಿ ಪ್ರತಿಕ್ರಿಯೆ ನೀಡಿಲ್ಲ

    ರಘು ದೀಕ್ಷಿತ್ ತಮ್ಮ ಮೇಲೆ ಆದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಆದಾದ ಮೇಲೆ ಐಂದ್ರಿತಾ ರೇ ಹಾಗೂ ರಿಷಬ್ ಶೆಟ್ಟಿ ಮೀಟೂ ಅಭಿಯಾನದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಇವರನ್ನು ಬಿಟ್ಟರೆ ಕನ್ನಡದಲ್ಲಿ ಹೆಚ್ಚಾಗಿ ಯಾರು ಈ ಅಭಿಯಾನದ ಬಗ್ಗೆ ಮಾತನಾಡಿಲ್ಲ.

    English summary
    Kannada director Rishab Shetty's spoke about MeToo movement in india.
    Friday, October 12, 2018, 12:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X