ಶಿವಣ್ಣ ಭೇಟಿ ಮಾಡಿದ ರಿಷಬ್ ಶೆಟ್ಟಿ: 126ನೇ ಸಿನಿಮಾ ಅಧಿಕೃತ

ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್ ನಟ ಶಿವರಾಜ್ ಕುಮಾರ್ ಮತ್ತೊಂದು ಹೊಸ ಚಿತ್ರಕ್ಕೆ ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ 124ನೇ ಸಿನಿಮಾಗೆ ಚಾಲನೆ ಕೊಟ್ಟಿದ್ದ ಕರುನಾಡ ಚಕ್ರವರ್ತಿ ಈಗ 126ನೇ ಪ್ರಾಜೆಕ್ಟ್‌ಗೆ ಕೈಗೆತ್ತಿಕೊಂಡಿದ್ದಾರೆ. ಬಹಳ ದಿನಗಳಿಂದ ನಟ ಶಿವರಾಜ್ ಕುಮಾರ್ ಅವರಿಗೆ ರಿಷಬ್ ಶೆಟ್ಟಿ ನಿರ್ದೇಶನ ಮಾಡ್ತಾರೆ ಎಂದು ಮಾತು ಕೇಳಿ ಬರ್ತಿದೆ. ಈ ಸುದ್ದಿ ಈಗ ನಿಜವಾಗಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಅವರನ್ನು ಆಗಸ್ಟ್ 19 ರಂದು ಬೆಳಗ್ಗೆ ಭೇಟಿ ಮಾಡಿದ ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸುದ್ದಿ ಕೊಟ್ಟಿದ್ದಾರೆ.

Recommended Video

ಶಿವಣ್ಣನ ಭೇಟಿ ಮಾಡಿ ನಾನೆ ಅದೃಷ್ಟವಂತ ಎಂದ ರಿಷಬ್ ಶೆಟ್ಟಿ

''ಇಂದು ಬೆಳ್ಳಂಬೆಳಗ್ಗೆ ಶಿವಣ್ಣ ಅವರನ್ನು ಭೇಟಿ ಮಾಡುವ ಭಾಗ್ಯ ನನ್ನದಾಯ್ತು. ಹೊಸ ಹೆಜ್ಜೆಯೊಂದು ಇಡುವ ಬಗ್ಗೆ ಉತ್ಸುಕನಾಗಿದ್ದೇನೆ'' ಎಂದು ಕ್ಯಾಪ್ಸನ್ ಹಾಕಿ ಫೋಟೋಗಳನ್ನು ಹಾಕಿದ್ದಾರೆ. ಅಲ್ಲಿಗೆ ಶಿವಣ್ಣನ ಮುಂದಿನ ಚಿತ್ರಕ್ಕೆ ರಿಷಬ್ ಡೈರೆಕ್ಷನ್ ಮಾಡೋದು ಖಚಿತವಾಗಿದೆ. ಈ ಚಿತ್ರಕ್ಕೆ ಜಯಣ್ಣ ಬಂಡವಾಳ ಹಾಕುತ್ತಿದ್ದು, ಶಿವಣ್ಣ ಭೇಟಿ ಸಮಯದಲ್ಲಿ ಜಯಣ್ಣ ಸಹ ಇದ್ದರು.

ಇನ್ನುಳಿದಂತೆ ಈ ಚಿತ್ರ ಅಧಿಕೃತವಾಗಿ ಯಾವಾಗ ಆರಂಭವಾಗಲಿದೆ, ಹೆಸರೇನು? ನಾಯಕಿ ಯಾರು ಎನ್ನುವ ವಿಷಯಗಳು ಮುಂದಿನ ದಿನದಲ್ಲಿ ಬಹಿರಂಗವಾಗಲಿದೆ. ಸೆಂಚುರಿ 126ನೇ ಸಿನಿಮಾ ಶುರು ಮಾಡುವುದಕ್ಕೂ ಮುಂಚೆ 123ನೇ, 124ನೇ, 125ನೇ ಸಿನಿಮಾ ಮುಗಿಸಬೇಕು. ಆ ಕಡೆ ಹೊಂಬಾಳೆ ಫಿಲಂಸ್ ಜೊತೆ ಕಮಿಟ್ ಆಗಿರುವ ರಿಷಬ್ ಶೆಟ್ಟಿ ಸಹ 'ಕಾಂತಾರ' ಚಿತ್ರ ಮುಗಿಸಬೇಕಾಗಿದೆ. ಮುಂದೆ ಓದಿ...

123ನೇ ಚಿತ್ರ 'ಬೈರಾಗಿ'

123ನೇ ಚಿತ್ರ 'ಬೈರಾಗಿ'

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟಿಸುತ್ತಿರುವ 123ನೇ ಸಿನಿಮಾ ಬೈರಾಗಿ. ತಮಿಳಿನ ವಿಜಯ್ ಮಿಲ್ಟನ್ ನಿರ್ದೇಶನ ಮಾಡ್ತಿದ್ದು, ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ನಿರ್ದೇಶಕ ಈಗ ಕೊನೆಯ ಹಂತದ ಕೆಲಸ ಬಾಕಿ ಉಳಿಸಿಕೊಂಡಿದ್ದಾರೆ. 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಸಹ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅಂದ್ಹಾಗೆ, ಈ ಚಿತ್ರಕ್ಕೆ ಕೃಷ್ಣ ಸಮರ್ಥ್ ಬಂಡವಾಳ ಹಾಕಿದ್ದಾರೆ.

124ನೇ ಸಿನಿಮಾ 'ನೀ ಸಿಗೋವರೆಗೂ'

124ನೇ ಸಿನಿಮಾ 'ನೀ ಸಿಗೋವರೆಗೂ'

ತೆಲುಗು ನಿರ್ದೇಶಕ ರಾಮ್ ಧುಲಿಪುಡಿ ಜೊತೆ 124ನೇ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ 'ನೀ ಸಿಗೋವರೆಗೂ' ಎಂದು ಹೆಸರಿಡಲಾಗಿದೆ. ತೆಲುಗು ನಟಿ ಮೆಹ್ರಿನ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕಿಚ್ಚ ಸುದೀಪ್ ಈ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಶುಭಹಾರೈಸಿದ್ದರು. ನಾರಾಲ ಶ್ರೀನಿವಾಸ ರೆಡ್ಡಿ, ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ, ಕುಡುಪುಡಿ ವಿಜಯಕುಮಾರ್ ಬಂಡವಾಳ ಹಾಕುತ್ತಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ವಾರಣಾಸಿ, ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವ ಯೋಜನೆ ಇದೆ. ಈಗ ಆಗಸ್ಟ್ 19 ರಂದು ಶೂಟಿಂಗ್ ಶುರುವಾಗುತ್ತದೆ. ಆಮೇಲೆ ಅಕ್ಟೋಬರ್‌ನಲ್ಲಿ ಮತ್ತೆ ಚಿತ್ರೀಕರಣ ಮಾಡಲಾಗುತ್ತೆ. ಏಪ್ರಿಲ್ ತಿಂಗಳೊಳಗೆ ಸಿನಿಮಾ ತೆರೆಗೆ ಬರಬಹುದು.

125ನೇ ಚಿತ್ರಕ್ಕೆ ಹರ್ಷ ಡೈರೆಕ್ಟರ್

125ನೇ ಚಿತ್ರಕ್ಕೆ ಹರ್ಷ ಡೈರೆಕ್ಟರ್

ನಿರ್ದೇಶಕ ಹರ್ಷ ಜೊತೆ ನಟ ಶಿವರಾಜ್ ಕುಮಾರ್ ಇನ್ನೊಂದು ಸಿನಿಮಾ ಮಾಡಲಿದ್ದಾರೆ. ಭಜರಂಗಿ 2 ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ಸಜ್ಜಾಗಿದೆ. ಈ ಪ್ರಾಜೆಕ್ಟ್ ಆದ್ಮೇಲೆ ಶಿವಣ್ಣ ಮತ್ತೊಮ್ಮೆ ಹರ್ಷ ಜೊತೆ ಕೈ ಜೋಡಿಸಿದ್ದು, ಆ ಚಿತ್ರಕ್ಕೆ 'ವೇದ' ಎಂದು ಹೆಸರಿಡಲಾಗಿದೆ. ಇದು ಶಿವಣ್ಣನ 125ನೇ ಸಿನಿಮಾ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

'ಕಾಂತಾರ' ಚಿತ್ರದಲ್ಲಿ ರಿಷಬ್

'ಕಾಂತಾರ' ಚಿತ್ರದಲ್ಲಿ ರಿಷಬ್

ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿರುವ ಕಾಂತಾರ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಜೊತೆಗೆ ನಾಯಕನಾಗಿಯೂ ನಟಿಸುತ್ತಿದ್ದಾರೆ. ಆಗಸ್ಟ್ 6 ರಂದು 'ಕಾಂತಾರ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ಆಗಸ್ಟ್ 27 ರಂದು ಚಿತ್ರದ ಮುಹೂರ್ತ ನಡೆಯಲಿದ್ದು, ಅಂದಿನಿಂದಲೇ ಚಿತ್ರೀಕರಣವೂ ಶುರುವಾಗಲಿದೆ. ಇನ್ನು ಕುಂದಾಪುರ ಸುತ್ತಮುತ್ತಾ ಚಿತ್ರೀಕರಣ ನಡೆಯಲಿದೆ. ಕಾಂತಾರ ಚಿತ್ರದಲ್ಲಿ ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. 25 ವರ್ಷದ ನಂತರ 'ಒಂದು ಮುತ್ತಿನ ಕಥೆ' ಚಿತ್ರದ ನಟಿ ಅರ್ಚನಾ ಸಹ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Actor-Director Rishab Shetty to direct Shiva Rajkumar's 126th film; produced by Jayanna Films. Rishab meets shivanna today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X