ರಕ್ಷಿತ್ ಶೆಟ್ಟಿ ಕನಸಿನ 'ರಿಚರ್ಡ್ ಆಂಟನಿ' ಬಗ್ಗೆ ಅಪ್‌ಡೇಟ್ ಕೊಟ್ಟ ರಿಷಬ್ ಶೆಟ್ಟಿ

ಸ್ಯಾಂಡಲ್‌ವುಡ್‌ನಲ್ಲಿ ರಿಷಬ್ ಶೆಟ್ಟಿ ಹಾಗೂ ರಾಜ್‌ ಬಿ ಶೆಟ್ಟಿ ಕಾರುಬಾರು ಜೋರಾಗಿದೆ. 'ಸು ಫ್ರಮ್ ಸೋ' ಸಿನಿಮಾ ನಿರ್ಮಿಸಿ ನಟಿಸಿ ರಾಜ್‌. ಬಿ ಶೆಟ್ಟಿ ಸೂಪರ್ ಸಕ್ಸಸ್ ಕಂಡಿದ್ದರು. ಇದೀಗ ರಿಷಬ್ ಶೆಟ್ಟಿ 'ಕಾಂತಾರ- 1' ಕಿಚ್ಚು ಜೋರಾಗಿದೆ. ಆದರೆ ಇಬ್ಬರ ನಡುವೆ ರಕ್ಷಿತ್ ಶೆಟ್ಟಿ ಸೈಲೆಂಟ್ ಆಗಿಬಿಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ರಕ್ಷಿತ್, ರಿಷಬ್, ರಾಜ್ ಮೂವರನ್ನು 'RRR' ಎಂದೇ ಅಭಿಮಾನಿಗಳು ಕರೆಯುತ್ತಾರೆ. ಇಬ್ಬರ ಸಿನಿಮಾಗಳು ದಾಖಲೆ ಬರೆದಿವೆ. ಆದರೆ ರಕ್ಷಿತ್ ಶೆಟ್ಟಿ ಮಾತ್ರ 'ರಿಚರ್ಡ್ ಆಂಟನಿ' ಸಿನಿಮಾ ಶುರು ಮಾಡ್ಲಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 4 ವರ್ಷಗಳ ಹಿಂದೆ ಸಿನಿಮಾ ಘೋಷಣೆ ಮಾಡಿದ್ದರು. ಆದರೆ ಬಳಿಕ ಯಾವುದೇ ಅಪ್‌ಡೇಟ್ ಸಿಗಲಿಲ್ಲ.

Rishabh Shetty Reveals Rakshit Shetty Is in the US Working on Richard Anthony Script

ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಕಲ್ಟ್ ಕ್ಲಾಸಿಕ್ 'ಉಳಿದವರು ಕಂಡಂತೆ' ಚಿತ್ರದ ಸೀಕ್ವೆಲ್ 'ರಿಚರ್ಡ್ ಆಂಟನಿ'. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಬೇಕಿದೆ. 'ಸಪ್ತ ಸಾಗರದಾಚೆ ಎಲ್ಲೋ' ಸರಣಿ ಚಿತ್ರಗಳ ಬಳಿಕ 'ರಿಚರ್ಡ್ ಆಂಟನಿ' ಸಿನಿಮಾ ಮಾಡುವುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದರು. ಆದರೆ ಯಾಕೋ ಸದ್ಯಕ್ಕೆ ಸಿನಿಮಾ ಬರುವಂತೆ ಕಾಣುತ್ತಿಲ್ಲ.

'ಉಳಿದವರು ಕಂಡಂತೆ' ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡ ಒಂದು ಪಾತ್ರ ಮಾಡಿದ್ದರು. ಸದ್ಯ 'ಕಾಂತಾರ- 1' ಸಕ್ಸಸ್ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ಊರೂರು ಸುತ್ತುತ್ತಿದ್ದಾರೆ. ಹಿಂದಿ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಸೂರಜ್ ಕುಮಾರ್ ಯೂಟ್ಯೂಬ್ ಸಂದರ್ಶನದಲ್ಲಿ ಭಾಗಿ ಆಗಿದ್ದು 'ರಿಚರ್ಡ್ ಆಂಟನಿ' ಚಿತ್ರದ ಬಗ್ಗೆ ಪ್ರಶ್ನೆ ಎದುರಾಗಿದೆ. ನಿಮ್ಮ ಸ್ನೇಹಿತ ಸಿನಿಮಾ ಘೋಷಿಸಿ 4 ವರ್ಷ ಆಯ್ತು. ಇನ್ನು ಆ ಬಗ್ಗೆ ಅಪ್‌ಡೇಟ್ ಇಲ್ಲ. ಎಲ್ಲಿಗೆ ಬಂತು ಸಿನಿಮಾ ಹೇಳಿ ಎನ್ನುವ ಪ್ರಶ್ನೆಗೆ ರಿಷಬ್ ಶೆಟ್ಟಿ ಉತ್ತರಿಸಿದ್ದಾರೆ.

"ರಕ್ಷಿತ್ ಎಲ್ಲಿದ್ದಾನೆ ನನಗೂ ಗೊತ್ತಿಲ್ಲ. ನಾನು ಕಾಯುತ್ತಿದ್ದೀನಿ.. ಸದ್ಯ ಯುಎಸ್‌ನಲ್ಲಿ ಸ್ಕ್ರಿಪ್ಟ್ ಕೆಲಸದಲ್ಲಿ ರಕ್ಷಿತ್‌ ಶೆಟ್ಟಿ ಬ್ಯುಸಿಯಾಗಿದ್ದಾನೆ. ಆದಷ್ಟು ಬೇಗ ಸಿನಿಮಾ ಶುರು ಮಾಡುತ್ತಾನೆ. 'ರಿಚರ್ಡ್ ಆಂಟನಿ' ಜೊತೆಗೆ ಮತ್ತೊಂದು ಸ್ಕ್ರಿಪ್ಟ್ ಮಾಡುತ್ತಿದ್ದಾನೆ. ಬಹಳ ಒಳ್ಳೆಯ ಟೆಕ್ನಿಷಿಯನ್ ಅವ್ನು" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

More from Filmibeat

Read more about: rishab shetty rakshit shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X