ರಕ್ಷಿತ್‌ ಶೆಟ್ಟಿ ಸೇರಿ ಎಲ್ಲರನ್ನು ಒಮ್ಮೆಲೆ ಅನ್‌ಫಾಲೋ ಮಾಡಿದ ರಿಷಬ್ ಶೆಟ್ಟಿ

ಇತ್ತೀಚೆಗೆ ರಿಷಬ್ ಶೆಟ್ಟಿ ಕ್ಯಾಂಪ್‌ನಲ್ಲಿ ಏನಾಗ್ತಿದೆ ಎನ್ನುವುದು ಅರ್ಥವಾಗ್ತಿಲ್ಲ. 'ಕಾಂತಾರ- 1' ಸಕ್ಸಸ್ ಬಳಿಕ ಡಿವೈನ್ ಸ್ಟಾರ್ ಬದಲಾಗಿಬಿಟ್ರಾ ಎನ್ನುವ ಚರ್ಚೆ ಜೋರಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅದು ಸ್ಪಷ್ಟವಾಗಿ ಅರ್ಥವಾಗ್ತಿದೆ. ಒಬ್ಬೊಬ್ಬರನ್ನೇ ಅನ್‌ಫಾಲೋ ಮಾಡುತ್ತಾ ಸಾಕಷ್ಟು ಊಹಾಪೋಹಗಳಿಗೆ ಇಂಬು ಕೊಟ್ಟಿದ್ದರು.

ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ನಡುವೆ ಬಿರುಕು ಮೂಡಿದೆ. ಆತ್ಮೀಯ ಗೆಳೆಯ ರಾಜ್ ಬಿ. ಶೆಟ್ಟಿ ಅವರಿಂದಲೂ ದೂರಾಗಿದ್ದಾರೆ. 'ಕಾಂತಾರ- 1' ಸಿನಿಮಾ ನಾಯಕಿ ರುಕ್ಮಿಣಿ ವಸಂತ್ ಜೊತೆಗೂ ಭಿನ್ನಾಭಿಪ್ರಾಯ ಮೂಡಿದೆ ಎನ್ನುವುದು ಇತ್ತೀಚೆಗೆ ಸ್ಪಷ್ಟವಾಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಅವರನ್ನೆಲ್ಲಾ ಅನ್‌ಫಾಲೋ ಮಾಡಿ ಈ ಬಗ್ಗೆ ಸುಳಿವು ನೀಡಿದ್ದರು. ರಿಷಬ್ ಈ ನಡೆಗೆ ಕಾರಣ ಏನು ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿತ್ತು. ಯಾರು ಹೆಚ್ಚು, ಯಾರು ಕಡಿಮೆ, ಯಾರು ಆಪ್ತರು, ಯಾರು ಬೇಡದವರು ಹೀಗೆ ಎಲ್ಲಾ ಊಹಾಪೋಹಗಳಿಗೆಲ್ಲಾ ಫುಲ್ ಸ್ಟಾಪ್ ಇಡಲು ಎಲ್ಲರನ್ನು ಅನ್‌ಫಾಲೋ ಮಾಡಿ ಸುಮ್ಮನಾಗಿದ್ದಾರೆ.

Rishabh Shetty Unfollows 137 Including Rakshit Shetty Sparking Rift Buzz in Kantara Camp

ಪತ್ನಿ ಪ್ರಗತಿ ಶೆಟ್ಟಿ ಅವರ ಇನ್‌ಸ್ಟಾಗ್ರಾಮ್ ಖಾತೆ, ತಮ್ಮದೇ ರಿಷಬ್ ಶೆಟ್ಟಿ ಫಿಲ್ಮ್ಸ್ ಚಿತ್ರ ನಿರ್ಮಾಣ ಸಂಸ್ಥೆಯ ಖಾತೆ ಹಾಗೂ ರಿಷಬ್ ಶೆಟ್ಟಿ ಫೌಂಡೇಷನ್ ಖಾತೆಯನ್ನು ಮಾತ್ರ ಈಗ ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಸ್ನೇಹಿತ ರಕ್ಷಿತ್ ಶೆಟ್ಟಿ ಅವರನ್ನು ಕೂಡ ಅನ್‌ಫಾಲೋ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ರಿಷಬ್ ಶೆಟ್ಟಿ ನೇರವಾಗಿ ಇನ್‌ಸ್ಟಾಗ್ರಾಮ್ ಅಕೌಂಟ್ ಹ್ಯಾಂಡಲ್ ಮಾಡ್ತಿಲ್ಲ. ಅವರ ಡಿಜಿಟಲ್ ಟೀಮ್ ಅದನ್ನು ನೋಡಿಕೊಳ್ತಿದೆ. 15 ದಿನಗಳ ಹಿಂದೆ ರಿಷಬ್ 140ಕ್ಕೂ ಅಧಿಕ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಫಾಲೋ ಮಾಡುತ್ತಿದ್ದರು. ಈಗ ಆ ಸಂಖ್ಯೆ 3ಕ್ಕೆ ಇಳಿದಿದೆ.

ಅಂದಹಾಗೆ ರಿಷಬ್ ಶೆಟ್ಟಿ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ 1.7 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದಾರೆ. ಈವರೆಗೆ ಅವರು 453 ಪೋಸ್ಟ್‌ಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಕಾಂತಾರ' ಸರಣಿ ಸಿನಿಮಾಗಳ ಜನಪ್ರಿಯತೆ ಅವರನ್ನು ಉತ್ತುಂಗಕ್ಕೆ ಏರಿಸಿದೆ. ನೇಮು ಫೇಮು ಎಲ್ಲವನ್ನು ನೂರಾರು ಪಟ್ಟು ಹಿಗ್ಗಿಸಿದೆ. ಅದೇ ರೀತಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿದ್ದು ಸುಳ್ಳಲ್ಲ.

Rishabh Shetty Unfollows 137 Including Rakshit Shetty Sparking Rift Buzz in Kantara Camp

ರಿಷಬ್ ಶೆಟ್ಟಿ ಇವರನ್ನೆಲ್ಲಾ ಅನ್‌ಫಾಲೋ ಮಾಡುವರಲ್ಲಿ ಏನಿದೆ. ಒಂದು ಕ್ಲಿಕ್‌ನಲ್ಲಿ ನಾನಾ ಅರ್ಥಗಳಿವೆ. ಸೋಶಿಯಲ್ ಮೀಡಿಯಾ ಇವತ್ತು ಬರೀ ಆನ್ಲೈನ್‌ ವೇದಿಕೆ ಮಾತ್ರ ಅಲ್ಲ. ವ್ಯಕ್ತಿಯ ಜೀವನದ ಪ್ರತಿಬಿಂಬ ಎನ್ನುವಂತಾಗಿದೆ. ಯಾರು ಯಾರ ಜೊತೆಗಿನ ಒಡನಾಟ ಹೇಗಿದೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ. ನೀವು ಯಾರನ್ನು ಫಾಲೋ ಮಾಡ್ತಿದ್ದೀರಾ ಎನ್ನುವುದು ಅವರೊಟ್ಟಿಗೆ ಹೇಗಿದ್ದೀರಾ? ಎನ್ನುವುದರ ದಿಕ್ಸೂಚಿಯಾಗಿದೆ. ಅದೇ ರೀತಿ ಅನ್‌ಫಾಲೋ ಮಾಡಿದಾಗ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಸಂದೇಶ ರವಾನಿಸುತ್ತದೆ. ಇದೇ ಕಾರಣಕ್ಕೋ ಏನೋ ಕೆಲ ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾದಲ್ಲಿ ಯಾರನ್ನು ಫಾಲೋ ಮಾಡುವ ಗೋಜಿಗೆ ಹೋಗಲ್ಲ.

ನಟ ಯಶ್ ಪತ್ನಿ ರಾಧಿಕಾ ಪಂಡಿತ್ ಅವರನ್ನು ಮಾತ್ರ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಟ್ವಿಟ್ಟರ್‌ನಲ್ಲಿ ರಾಧಿಕಾ ಪಂಡಿತ್ ಅವರು ಆಕ್ಟೀವ್ ಆಗಿಲ್ಲ. ಹಾಗಾಗಿ ಟ್ವಿಟ್ಟರ್‌ನಲ್ಲಿ ಯಶ್ ಯಾರನ್ನು ಫಾಲೋ ಮಾಡ್ತಿಲ್ಲ. ತೆಲುಗು ನಟ ವಿಜಯ್ ದೇವರಕೊಂಡ ಇವತ್ತಿಗೂ ಯಾರೊಬ್ಬರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿಲ್ಲ. ಮದುವೆಯಾದ ಬಳಿಕ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್ ಖಾತೆಯನ್ನು ಕೂಡ.

ಸದ್ಯ 'ಜೈಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. ಪ್ರಶಾಂತ್ ವರ್ಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ಕೆಲ ದಿನಗಳ ಹಿಂದೆ ಹಂಪಿಯಲ್ಲಿ ಸಿನಿಮಾ ಸೆಟ್ಟೇರಿತ್ತು. ತಮ್ಮದೇ ಬ್ಯಾನರ್‌ನಲ್ಲಿ ಹೊಸ ಸಿನಿಮಾ ಮಾಡಲು ರಿಷಬ್ ಕೆಲಸ ಆರಂಭಿಸಿದ್ದಾರೆ. ತೆರೆಮರೆಯಲ್ಲಿ ಒಂದು ಪೌರಾಣಿಕ ಸಿನಿಮಾ ನಿರ್ದೇಶನಕ್ಕೆ ಸಿದ್ಧತೆ ನಡೆಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X