ರುಕ್ಮಿಣಿ ವಸಂತ್ ಅವರನ್ನು ಅನ್‌ಫಾಲೋ ಮಾಡಿದ ರಿಷಬ್ ಶೆಟ್ಟಿ; ಅಷ್ಟಕ್ಕೂ ಏನಾಯ್ತು?
ಅದ್ಯಾಕೋ 'ಕಾಂತಾರ' ಚಿತ್ರತಂಡ ಗೊಂದಲದ ಗೂಡಾಗಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ, ರಿಷಬ್ ಶೆಟ್ಟಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ. 'ಹೊಂಬಾಳೆ ಫಿಲ್ಮ್ಸ್' ಹಾಗೂ 'ಕಾಂತಾರ' ಇನ್‌ಸ್ಟಾಗ್ರಾಮ್ ಖಾತೆಗಳನ್ನು ರಿಷಬ್ ಶೆಟ್ಟಿ ಅನ್‌ಫಾಲೋ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಜೊತೆಗೂ ಅಷ್ಟಕ್ಕಷ್ಟೆ, ಎನ್ನುವಂತಾಗಿದೆ. ಅದಕ್ಕೆ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎನ್ನುವ ಚರ್ಚೆ ನಡೀತಿದೆ.
ಅಚ್ಚರಿ ಎನ್ನುವಂತೆ ಇದೀಗ ನಟಿ ರುಕ್ಮಿಣಿ ವಸಂತ್ ಅವರನ್ನು ಕೂಡ ರಿಷಬ್ ಶೆಟ್ಟಿ ಅನ್‌ಫಾಲೋ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕೆಲವರು ಪೋಸ್ಟ್ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ- 1' ಚಿತ್ರದಲ್ಲಿ ರುಕ್ಮಿಣಿ ನಾಯಕಿಯಾಗಿ ನಟಿಸಿದ್ದರು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ರಿಷಬ್ ಶೆಟ್ಟಿ ಅವರ ಡಿಜಿಟಲ್ ಟೀಂ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಂಡಲ್ ಮಾಡ್ತಿದೆ.

ರಿಷಬ್ ಶೆಟ್ಟಿ ಈ ಮೊದಲು ರುಕ್ಮಿಣಿ ವಸಂತ್ ಅವರನ್ನು ಫಾಲೋ ಮಾಡ್ತಿದ್ರಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡ್ತಿದೆ. ರುಕ್ಮಿಣಿ, ಹೊಂಬಾಳೆ, ರಾಜ್. ಬಿ ಶೆಟ್ಟಿ ಮಾತ್ರವಲ್ಲ ಇನ್ನು 40 ಅಕೌಂಟ್‌ಗಳನ್ನು ರಿಷಬ್ ಅನ್‌ಫಾಲೋ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ಸಿಕ್ಕಿಲ್ಲ. ಹೊಂಬಾಳೆ ಹಾಗೂ ರಾಜ್. ಬಿ ಶೆಟ್ಟಿ ಖಾತೆಯನ್ನು ರಿಷಬ್ ಅನ್‌ಫಾಲೋ ಮಾಡಿರುವುದು ಖಚಿತವಾಗ್ತಿದೆ. 'ಕಾಂತಾರ' ಚಿತ್ರದ ನಾಯಕಿ ಸಪ್ತಮಿ ಗೌಡ ಇನ್‌ಸ್ಟಾ ಅಕೌಂಟ್ ಅನ್ನು ರಿಷಬ್ ಫಾಲೋ ಮಾಡ್ತಿಲ್ಲ. ಹಾಗಾಗಿ ಮೊದಲಿನಿಂದ ರುಕ್ಮಿಣಿ ಅವರ ಅಕೌಂಟ್ ಕೂಡ ಫಾಲೋ ಮಾಡ್ತಿಲ್ವಾ? ಎನ್ನುವ ಅನುಮಾನ ಕೂಡ ಕೆಲವರನ್ನು ಕಾಡುತ್ತಿದೆ.
ಸದ್ಯ ರಿಷಬ್ ಶೆಟ್ಟಿ ಮಾಧ್ಯಮದವರ ಸಂಪರ್ಕಕ್ಕೆ ಸಿಗುತ್ತಿಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಊಹಾಪೋಹಗಳು ಗರಿಗೆದರುತ್ತಲೇ ಇದೆ. ಯಾವುದಕ್ಕೂ ಸ್ಪಷ್ಟ ಉತ್ತರ ಇಲ್ಲ. 'ಕಾಂತಾರ'-1 ಬಳಿ ರಿಷಬ್ ಬದಲಾಗಿಬಿಟ್ರಾ? ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಸದ್ಯ 'ಜೈಹನುಮಾನ್' ಸಿನಿಮಾದಲ್ಲಿ ನಟಿಸುತ್ತಿರುವ ರಿಷಬ್ ಶೆಟ್ಟಿ ತಮ್ಮದೇ ಬ್ಯಾನರ್ ಅಡಿಯಲ್ಲಿ ಹೊಸ ಸಿನಿಮಾ ಕೆಲಸಗಳನ್ನು ಆರಂಭಿಸಿದ್ದಾರೆ. ಯುಗಾದಿ ಸಂಭ್ರಮದಲ್ಲಿ "2ನೇ ಅಧ್ಯಾಯ ಆರಂಭ" ಎಂದು ಪೋಸ್ಟ್ ಮಾಡಿ ಕುತೂಹಲ ಮೂಡಿಸಿದ್ದರು.
'ಕಾಂತಾರ- 1' ಬಳಿಕ ಕಾಲಿವುಡ್, ಟಾಲಿವುಡ್ ಕಡೆ ರುಕ್ಮಿಣಿ ವಸಂತ್ ಫೋಕಸ್ ಮಾಡಿದ್ದಾರೆ. ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದಾರೆ. ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್' ಚಿತ್ರದಲ್ಲಿ ಬೆಂಗಳೂರು ಬೆಡಗಿ ನಟಿಸುತ್ತಿದ್ದಾರೆ. ಜ್ಯೂ. ಎನ್‌ಟಿಆರ್ ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.
ಈ ಹಿಂದೆ ರಿಷಬ್ ಶೆಟ್ಟಿ ಹಾಗೂ ರಾಜ್. ಬಿ ಶೆಟ್ಟಿ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನುವ ವದಂತಿ ಹರಿದಾಡಿತ್ತು. ಈ ಬಗ್ಗೆ ಸ್ವತಃ ರಾಜ್. ಬಿ ಶೆಟ್ಟಿ ಪ್ರತಿಕ್ರಿಯಿಸಿದ್ದರು. ಆ ರೀತಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಇನ್‌ಸ್ಟಾಗ್ರಾಮ್ ಅವರನ್ನು ಅನ್‌ಫಾಲೋ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈಗ ರುಕ್ಮಿಣಿ ಅವರನ್ನು ಅನ್‌ಫಾಲೋ ಮಾಡಿದ್ರಾ? ಎನ್ನುವ ಪ್ರಶ್ನೆ ಮೂಡಿದೆ.
ಕಳೆದ ತಿಂಗಳು ಹಂಪಿಯಲ್ಲಿ 'ಜೈ ಹನುಮಾನ್' ಸಿನಿಮಾ ಸೆಟ್ಟೇರಿತ್ತು. ಪ್ರಶಾಂತ್ ವರ್ಮಾ ನಿರ್ದೇಶನದ ಸಿನಿಮಾ ಚಿತ್ರೀಕರಣ ಶುರುವಾಗಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಜೊತೆಗೆ ಒಂದು ಪೌರಾಣಿಕ ಸಿನಿಮಾ ನಿರ್ದೇಶಿಸಿ, ನಟಿಸಲು ಸ್ಕ್ರಿಪ್ಟ್ ಕೆಲಸಗಳು ಆರಂಭವಾಗಿದೆ ಎಂದು ತಿಳಿಸಿದ್ದಾರೆ.


Click it and Unblock the Notifications











