ಪ್ರಜ್ವಲ್ ದೇವರಾಜ್ ಪತ್ನಿಯ ಕಿರುಚಿತ್ರಕ್ಕೆ ಮೂರು 'ಸೈಮಾ' ಪ್ರಶಸ್ತಿ
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಅಭಿನಯದ ಕಿರುಚಿತ್ರ 'ರಿಷಭಪ್ರಿಯ' 2018ನೇ ಸಾಲಿನ ಸೈಮಾ ಸಮಾರಂಭದಲ್ಲಿ ಮೂರು ಪ್ರಶಸ್ತಿ ಪಡೆದುಕೊಂಡಿದೆ.
ಸೈಮಾ ಕಿರುಚಿತ್ರ ವಿಭಾಗದಲ್ಲಿ ರಿಷಭಪ್ರಿಯ ಸಿನಿಮಾ ಅತ್ಯುತ್ತಮ ಸಾಧನೆ ಮಾಡಿದೆ. ಮೊದಲ ನಿರ್ದೇಶನಕ್ಕಾಗಿ ಆರ್.ಜೆ ಮಯೂರ್ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಅವಾರ್ಡ್ ಪಡೆದುಕೊಂಡಿದ್ದಾರೆ.

ನಿರ್ದೇಶಕನ ಜೊತೆ ನಾಯಕನಟನಾಗಿ ಅಭಿನಯಿಸಿದ್ದ ಮಹದೇವ್ ಬೆಸ್ಟ್ ಆಕ್ಟರ್ ಅವಾರ್ಡ್ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಮೂರನೇ ಪ್ರಶಸ್ತಿ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಸಿಕ್ಕಿದೆ. ಚರಣ್ ರಾಜ್ ಮತ್ತು ನಕುಲ್ ಅಭಯಂಕರ್ ಈ ಕಿರುಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದರು.
ಅಂದ್ಹಾಗೆ, ರಿಷಭಪ್ರಿಯ ಕಿರುಚಿತ್ರವನ್ನ ನಿರ್ಮಾಣ ಮಾಡಿರುವುದು ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್. ರಚಿತಾ ನಿರ್ಮಾಣದ ಮೊದಲ ಕಿರುಚಿತ್ರವೇ ಸೈಮಾದಲ್ಲಿ ಮೂರು ಪ್ರಶಸ್ತಿ ಪಡೆದಿರುವುದು ನಿಜಕ್ಕೂ ವಿಶೇಷವೇ ಸರಿ.

ಇನ್ನುಳಿದಂತೆ ಆರ್.ಜೆ ಮಯೂರ್ ನಿರ್ದೇಶನದ ಈ ಸಿನಿಮಾದಲ್ಲಿ ಜೊತೆ ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ, ಸೋಮಶೇಖರ್ ಜೋಯಿಸ್, ಚಿನ್ಮಯಿ ಆಥ್ರೇಯಸ್, ಸ್ಪರ್ಶಾ ಆರ್.ಕೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಚರಣ್ ರಾಜ್ ಸಂಗೀತ ನಿರ್ದೇಶನ ಈ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಎರಡೂ ಹಾಡುಗಳು ಮೆಲೋಡಿಯಿಂದ ಕೂಡಿರುವುದು ವಿಶೇಷ. ಒಂದು ಹಾಡಿಗೆ ಚರಣ್ ರಾಜ್ ಇನ್ನೊಂದು ಹಾಡಿಗೆ ನಕುಲ್ ಅಭಯಂಕರ್ ಮ್ಯುಸಿಕ್ ಕಂಪೋಸ್ ಮಾಡಿದ್ದಾರೆ.


Click it and Unblock the Notifications











