ಹೈದರಾಬಾದ್ ನಲ್ಲಿ ನಿಶ್ಚಿತಾರ್ಥ, ಚೆನ್ನೈನಲ್ಲಿ ಮದುವೆ, ಬೆಂಗಳೂರಿನಲ್ಲಿ ಆರತಕ್ಷತೆ

'ಆಪರೇಶನ್ ಅಲಮೇಲಮ್ಮ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟ ರಿಷಿ ಈಗ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ರಿಷಿ ಬಹುಕಾಲದ ಗೆಳತಿ ಸ್ವಾತಿ ಜೊತೆ ಹೈದರಾಬಾದ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ರಿಷಿ ಮದುವೆ ದಿನಾಂಕ ಫಿಕ್ಸ್ ಆಗಿದೆ.

ಎಂಗೇಜ್ ಆಗಿದ್ದ ಈ ಜೋಡಿ ಮದುವೆ ದಿನಾಂಕವನ್ನು ಬಹಿರಂಗಪಡಿಸಿರಲಿಲ್ಲ. ಆದರೀಗ ರಿಷಿ ಮತ್ತು ಸ್ವಾತಿ ಮದುವೆ ದಿನಾಂಕ ರಿವೀಲ್ ಆಗಿದೆ. ಹೈದರಾಬಾದ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ಚೆನ್ನೈನಲ್ಲಿ ಹಸೆಮಣೆ ಏರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವೃತ್ತಿಯಲ್ಲಿ ಬರಹಗಾರ್ತಿಯಾಗಿರುವ ಸ್ವಾತಿ ಜೊತೆ ನಟ ರಿಷಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ನವೆಂಬರ್ ನಲ್ಲಿ ಹಸೆಮಣೆ ಏರಲಿದ್ದಾರೆ ರಿಷಿ

ನವೆಂಬರ್ ನಲ್ಲಿ ಹಸೆಮಣೆ ಏರಲಿದ್ದಾರೆ ರಿಷಿ

ಏಪ್ರಿಲ್ ನಲ್ಲಿ ಎಂಗೇಜ್ ಆಗಿದ್ದ ರಿಷಿ ಮತ್ತು ಸ್ವಾತಿ ನವೆಂಬರ್ ನಲ್ಲಿ ಸಪ್ತಪದಿ ತುಳಿಯುತ್ತಿದ್ದಾರೆ. ನವೆಂಬರ್ ಮೂಲಗಳ ಪ್ರಕಾರ ರಿಷಿ ಮತ್ತು ಸ್ವಾತಿ ಮದುವೆ ನವೆಂಬರ್ 10 ರಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ. ವಿಶೇಷ ಅಂದ್ರೆ ಇಬ್ಬರ ಮದುವೆ ಚೆನ್ನೈನಲ್ಲಿ ಜರುಗಲಿದೆ. ಕುಟುಂಬದವರಿಗೆ ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ನಿಶ್ಚಿತಾರ್ಥ ಕೂಡ ಸರಳವಾಗಿ ಮಾಡಿಕೊಂಡಿದ್ದರು ರಿಷಿ ಮತ್ತು ಸ್ವಾತಿ.

Recommended Video

ತಮಿಳು, ತೆಲುಗಿನಲ್ಲಿ ರಿಮೇಕ್‍ಗೆ ಹೆಚ್ಚಿತು ಡಿಮ್ಯಾಂಡ್ | FILMIBEAT KANNADA
ಬೆಂಗಳೂರಿನಲ್ಲಿ ಆರತಕ್ಷತೆ

ಬೆಂಗಳೂರಿನಲ್ಲಿ ಆರತಕ್ಷತೆ

ರಿಷಿ ಮತ್ತು ಸ್ವಾತಿ ಮದುವೆ ಚೆನ್ನೈನಲ್ಲಿ ನಡೆದರೆ, ಆರತಕ್ಷತೆಯನ್ನು ಬೆಂಗಳೂರಿನಲ್ಲಿ ಮಾಡಲು ಪ್ಲಾನ್ ಮಾಡಿದ್ದಾರಂತೆ. ನವೆಂಬರ್ 10ಕ್ಕೆ ಮದುವೆ ನಡೆದರೆ, 10 ದಿನಗಳ ನಂತರ ಬೆಂಗಳೂರಿನಲ್ಲಿ ಆರತಕ್ಷತೆ ಸಮಾರಂಭ ಮಾಡುತ್ತಿದ್ದಾರಂತೆ. ಬೆಂಗಳೂರಿನ ಸ್ನೇಹಿತರು ಮತ್ತು ಚಿತ್ರರಂಗದ ಸ್ನೇಹಿತರಿಗಾಗಿ ಬೆಂಗಳೂರಿನಲ್ಲಿ ಆರತಕ್ಷತೆ ಸಮಾರಂಭ ಏರ್ಪಡಿಸಲಾಗುತ್ತಿದೆ.

ಹೈದರಾಬಾದ್ ನಲ್ಲಿ ನಡೆದ ನಿಶ್ಚಿತಾರ್ಥ

ಹೈದರಾಬಾದ್ ನಲ್ಲಿ ನಡೆದ ನಿಶ್ಚಿತಾರ್ಥ

ಕಳೆದ ಏಪ್ರಿಲ್ ನಲ್ಲಿ ಇಬ್ಬರ ನಿಶ್ಚಿತಾರ್ಥ ಸಂಭ್ರಮ ಹೈದರಾಬಾದ್ ನಲ್ಲಿ ನೆರವೇರಿತ್ತು. 'ಕವಲುದಾರಿ' ಸಿನಿಮಾ ರಿಲೀಸ್ ನಲ್ಲಿ ಬ್ಯುಸಿಯಿದ್ದ ರಿಷಿ ಈ ವಿಚಾರವನ್ನು ಬಹಿರಂಗ ಪಡಿಸದೆ ಸೈಲೆಂಟ್ ಆಗಿ ಗೆಳತಿ ಸ್ವಾತಿ ಜೊತೆ ಎಂಗೇಜ್ ಆಗಿದ್ದರು. ತೀರಾ ಖಾಸಗಿಯಾಗಿ ನಡೆದ ಈ ಸಮಾರಂಭದಲ್ಲಿ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಈಗ ಎಂಗೇಜ್ ಮೆಂಟ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ನಿಶ್ಚಿತಾರ್ಥದ ವಿಷಯವನ್ನು ಬಹಿರಂಗ ಪಡಿಸಿದ್ದರು.

ರಿಷಿ ಬಳಿ ಇರುವ ಸಿನಿಮಾಗಳು

ರಿಷಿ ಬಳಿ ಇರುವ ಸಿನಿಮಾಗಳು

ಎರಡು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಯಶಸ್ವಿನಟನಾಗಿರುವ ರಿಷಿ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. 'ರಾಮನ ಅವತಾರ', 'ಸಾರ್ವಜನಿಕರಿಗೆ ಸುವರ್ಣಾವಕಾಶ', 'ಸಿಲ್ಕ್ ಸಿದ್ದ', 'ಸಕಲಕಲಾವಲ್ಲಭ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಚಿತ್ರೀಕರಣಗಳ ನಡುವೆಯು ರಿಷಿ ಮುದವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Kannada actor Rishi and Swathi marriage will held in Chennai on November 10th. The reception will be held in Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X