For Quick Alerts
  ALLOW NOTIFICATIONS  
  For Daily Alerts

  ಎಲ್ಲೋ ನೋಡ್ದಂಗಿದೆಯಲ್ಲಾ ಈ ಕಲರ್ ಫುಲ್ ಮುಖ

  By ಜೀವನರಸಿಕ
  |

  ಒಂದ್ಸಾರಿ ಹಾಗೇ ಕಣ್ಣಲ್ಲಿ ಕಣ್ಣಿಟ್ಟು ಈ ಫೋಟೋ ನೋಡಿ. ಅಯ್ಯೋ ಅಂತಹದ್ದೇನಿದೆ ಇಲ್ಲಿ ಅಂತೀರಾ? ಈ ಫೋಟೋದಲ್ಲಿರುವ ವ್ಯಕ್ತಿಯನ್ನ ಎಲ್ಲೋ ನೋಡಿದ್ದೇವಲ್ಲ ಅಂತ ನಿಮಗೆ ಅನ್ನಿಸೋದೇ ಇಲ್ಲ. ಮತ್ತೆ ಮತ್ತೆ ನೋಡಿದ್ರೆ ಆ ವ್ಯಕ್ತಿಯ ಕಣ್ಣನ್ನೇ ನೋಡಿದ್ರೆ ಸೂಕ್ಷ್ಮವಾಗಿ ಗಮನಿಸಿದ್ರೆ.. ಆಗ ಗೊತ್ತಾಗುತ್ತೆ ಎಲ್ಲೋ ನೋಡಿದ ಹಾಗಿದೆ ಅಂತ.

  ಹೌದು ಇದು ನೀವು ನೋಡಿರೋ ಫೇಸೇ ಆದ್ರೆ ನೋಡದೇ ಇರೋ ಹಾಗಿದೆ ಅಷ್ಟೇ. ಅದು ಸಂಪೂರ್ಣವಾಗಿ ಬದಲಾಗಿರೋ ಕಾಳಿಸ್ವಾಮಿ ಗೆಟಪ್ಪು. ಮೂವತ್ತೈದು ನಲವತ್ತರ ಹರೆಯಲ್ಲಿ ನಾಯಕನಾಗೋಕೆ ಹೊರಟಿದ್ದಾರೆ ಕಾಳಿ ಸ್ವಾಮಿ. ['ಕಲಿಯುಗ'ದಲ್ಲಿ ಮತ್ತೆ ಪ್ರತ್ಯಕ್ಷರಾದ ಕಾಳಿ ಸ್ವಾಮಿ]

  ಸದಾ ವಿವಾದಗಳನ್ನ ಬೆನ್ನಿಗೆ ಹಾಕಿಕೊಂಡು ತಿರುಗುವ ಕಾಳಿ ಸ್ವಾಮಿ ಯಾನೆ ಋಷಿಕುಮಾರ ಈಗ 'ಧಂಡಕ' ಅನ್ನೋ ಚಿತ್ರದಲ್ಲಿ ನಾಯಕನಾಗಿ ಈ ಡಿಫ್ರೆಂಟ್ ಗೆಟಪ್ ತೊಟ್ಟಿದ್ದಾರೆ. ತೋಟ್ಟಿರೋದಲ್ಲ. ಇದು ಚೇಂಜ್ ಓವರ್. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  ಪಕ್ಕಾ ಹೀರೋ ತರಹ ಕಾಣ್ತಿರೋ ಕಾಳಿ ಸ್ವಾಮಿಗಳನ್ನ ನೋಡಿ ಸ್ಯಾಂಡಲ್ ವುಡ್ ಹೀರೋಗಳೂ ಒಂದು ಕ್ಷಣ ಬೆಚ್ಚಿ ಬೀಳಲೇಬೇಕು ಹಾಗಿದೆ ಅವರ ಅವತಾರ. ಒಂದಷ್ಟು ದಿನ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಸ್ಟೆಪ್ ಹಾಕಿ ಎಲ್ಲರನ್ನೂ ಚಕಿತಗೊಳಿಸಿದ್ದರು ಈ ಸ್ವಾಮಿಗಳು.

  ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ಶೋನಲ್ಲಿ ತಾವೊಬ್ಬ ಸಕಲಕಲಾ ಪಾರಂಗತ ಎಂಬುದನ್ನು ತೋರಿಸಿಕೊಂಡಿದ್ದರು. ಸೂಪರೋ ರಂಗ ಎಂದು ಡಾನ್ಸ್ ಮಾಡಿ ಎಲ್ಲರ ಗಮನಸೆಳೆದಿದ್ದರು. ಈಗ ಇನ್ನೊಂದು ವರಸೆ ತೋರಿಸಲು 'ಧಂಡಕ' ಚಿತ್ರದ ಮೂಲಕ ಬರುತ್ತಿದ್ದಾರೆ. 'ಗೂಳಿಹಟ್ಟಿ' ಚಿತ್ರದಲ್ಲೂ ಬಣ್ಣ ಹಚ್ಚಿದ್ದರು ಋಷಿಕುಮಾರ ಸ್ವಾಮೀಜಿ. ಪ್ರೇಮ್ ಅವರ 'ಡಿಕೆ' ಚಿತ್ರದಲ್ಲೂ ಸ್ತೀ ವೇಷದಲ್ಲಿ ಕಾಣಿಸಲಿದ್ದಾರೆ ಕಾಳಿಶ್ರೀಗಳು. [ಋಷಿಕುಮಾರ ಸ್ವಾಮಿ ಕಂಠಸಿರಿ '24ಕ್ಯಾರೆಟ್' ಸಾಂಗ್]

  Rishi Kumar Swamiji becomes hero in Dhamdadaka2

  ಈ ಹಿಂದೆ 24 ಕ್ಯಾರೆಟ್ ಚಿತ್ರದಲ್ಲಿ ಹಾಡಿದ್ದರು. ಆ ಬಳಿಕ ಕಲಿಯುಗ ಚಿತ್ರದ ಬಣ್ಣ ಹಚ್ಚಿದರು. ಇದಕ್ಕೂ ಮುನ್ನ ಕಾಳಿ ಸ್ವಾಮಿಗಳಿಗೆ ಬಣ್ಣ ಹಚ್ಚುವ ಚಾನ್ಸ್ ಸಿಕ್ಕಿತ್ತು. ಆದರೆ ಅಷ್ಟರಲ್ಲೇ ಖಾಸಗಿ ವಾಹಿನಿಯ ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕಿಬಿದ್ದು ಮಾನಮರ್ಯಾದೆ ಕಳೆದುಕೊಂಡಿದ್ದರು. ಬಳಿಕ 'ದೇವ್ರಾಣೆ' ಚಿತ್ರದಿಂದ ಋಷಿಕುಮಾರ ಸ್ವಾಮಿಗಳನ್ನು ಬಿಳ್ಕೊಡಲಾಗಿತ್ತು.

  ಋಷಿಕುಮಾರ ಸ್ವಾಮೀಜಿಗಳಲ್ಲೂ ಒಬ್ಬ ಕಲಾವಿದನಿದ್ದಾನೆ ಎಂಬುದು ಗೊತ್ತಾಗಿದ್ದೇ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ. ಅಲ್ಲಿ ಅವರು ಸೂಪರೋ ರಂಗ ಎಂದು ಭರತನಾಟ್ಯ ಶೈಲಿಯಲ್ಲಿ ಕುಣಿದಿದ್ದು, ಕಪ್ಪೆಯಂತೆ ಈಜುಕೊಳಕ್ಕೆ ಡೈವ್ ಹೊಡೆದದ್ದು ನೋಡಿದರೆ ಆಕ್ಷನ್, ಸೆಂಟಿಮೆಂಟ್, ರೊಮ್ಯಾನ್ಸ್ ಎಲ್ಲದರಲ್ಲೂ ಪಳಗಿದ್ದಾರೆ ಎಂಬುದು ಸಾಬೀತಾಗಿತ್ತು.

  English summary
  After doing a different roles in Sandalwood now Kali Mutt seer Rishikumar Swamy becomes hero in his upcoming Kannada movie 'Dhamdadaka'. He plays a chacolate hero role in the movie. His getup raise an eye brow of many.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X