For Quick Alerts
  ALLOW NOTIFICATIONS  
  For Daily Alerts

  ಕವಲುದಾರಿ ಸಿನಿಮಾ ಚಿತ್ರೀಕರಣ ಮುಕ್ತಾಯ

  By Pavithra
  |

  Recommended Video

  ಕಾವಲುದಾರಿ ಹಿಡಿದ ರಿಷಿ | Filmibeat Kannada

  ಹೇಮಂತ್ ಎಂ ರಾವ್ ನಿರ್ದೇಶನದ 'ಕವಲುದಾರಿ' ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಪಿ ಆರ್ ಕೆ' ಬ್ಯಾನರ್ ನಲ್ಲಿ ಕವಲುದಾರಿ ಚಿತ್ರ ನಿರ್ಮಾಣವಾಗಿದೆ.

  ಚಿತ್ರದಲ್ಲಿ 'ಆಪರೇಷನ್ ಅಲಮೇಲಮ್ಮ' ಸಿನಿಮಾ ಖ್ಯಾತಿಯ ರಿಷಿ ಚಿತ್ರಕ್ಕೆ ನಾಯಕನಾಗಿದ್ದು, ನಾಯಕಿಯಾಗಿ ರೋಷನಿ ಪ್ರಕಾಶ್ ಅಭಿನಯ ಮಾಡಿದ್ದಾರೆ. ಅನಂತ್ ನಾಗ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಗೋಧಿಬಣ್ಣ ಸಾದಾರಣ ಮೈಕಟ್ಟು' ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದ ಚರಣ್ ರಾಜ್ ಅವರೇ ಕವಲುದಾರಿಗೂ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

  ಪುನೀತ್ ನಿರ್ಮಾಣದ 'ಕವಲುದಾರಿ' ಚಿತ್ರದಲ್ಲಿದೆ ರೆಟ್ರೋ ಲುಕ್ ಪುನೀತ್ ನಿರ್ಮಾಣದ 'ಕವಲುದಾರಿ' ಚಿತ್ರದಲ್ಲಿದೆ ರೆಟ್ರೋ ಲುಕ್

  ಕೊನೆಯ ದಿನದ ಚಿತ್ರೀಕರಣದ ವೇಳೆ ನಟ ಹಾಗೂ ನಿರ್ಮಾಪಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಭಾಗಿ ಆಗಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಲಿದೆ.

  Rishi starrer Kavaludari movie shooting completed

  ಟೈಟಲ್ ನಿಂದಲೇ ಚಿತ್ರದ ಬಗ್ಗೆ ಕುತೂಹಲ ಮೂಡಿಸಿರುವ ಕವಲುದಾರಿ ಸಿನಿಮಾ ಶ್ರೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಅಪರೇಷನ್ ಅಲಮೇಲಮ್ಮ ಚಿತ್ರದ ಮೂಲಕ ಭರವಸೆ ಮೂಡಿಸಿರುವ ರಿಷಿ, ಗೋಧಿಬಣ್ಣ ಸಾದಾರಣ ಮೈಕಟ್ಟು ಚಿತ್ರದ ಮುಖೇನ ಉತ್ತಮ ನಿರ್ದೇಶಕ ಎನ್ನಿಸಿಕೊಂಡಿರುವ ಹೇಮಂತ್ ರಾವ್ ಅವರ ಹೊಸ ಕಾಂಬಿನೇಶನ್ ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತೆ ಎನ್ನುವುದನ್ನು ಕಾದು ನೋಡಬೇಕು.

  English summary
  Kannada movie Kavaludari shooting completed. Hemanth Rao directing the film Rishi, Roshani and Ananth Nag Acted in the film,Puneeth Rajkumar has produced the film.
  Saturday, April 14, 2018, 9:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X