ಕನ್ನಡದ ಈ ನಟನ ಚಿತ್ರಕ್ಕೆ ಬಂಡವಾಳ ಹಾಕಲು ಬಂದ ಧನುಷ್

By Naveen

Recommended Video

ತಮಿಳು ನಟ ಧನುಷ್ ನಿರ್ಮಾಪಕನಾಗಿ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ | Filmibeat Kannada

ನಟ ಧನುಷ್ ಕಾಲಿವುಡ್ ಚಿತ್ರರಂಗ ಜನಪ್ರಿಯ ನಟ. ನಟನಾಗಿ ಮಾತ್ರವಲ್ಲದೆ ಧನುಷ್ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡಿ ನಿರ್ಮಾಪಕ ಕೂಡ ಆಗಿದ್ದಾರೆ. ಧನುಷ್ ಬ್ಯಾನರ್ ನಲ್ಲಿ ಬಂದ ಒಂದೊಂದು ಸಿನಿಮಾಗಳು ಕೂಡ ವಿಭಿನ್ನ ಕಥೆಯನ್ನು ಹೊಂದಿದೆ. ಕಾಲಿವುಡ್ ನಲ್ಲಿ ಧನುಷ್ ಅವರ ವಂಡರ್ ಬಾರ್ ಸಂಸ್ಥೆಯ ಸಿನಿಮಾಗಳು ಅಂದರೆ ಒಂದು ಬೆಲೆ ಇದೆ.

ತಮಿಳಿನಲ್ಲಿ ನಟನೆ, ನಿರ್ಮಾಣದ ನಂತರ ಈಗ ಕನ್ನಡ ಚಿತ್ರರಂಗದ ಕಡೆ ಧನು‍ಷ್ ಮುಖ ಮಾಡಿದ್ದಾರೆ. ಸ್ಯಾಂಡಲ್ ವುಡ್ ಯುವ ನಟನ ಅಭಿನಯಕ್ಕೆ ಮನಸೋತಿರುವ ಅವರು ಆ ನಟನ ಸಿನಿಮಾಗೆ ಬಂಡವಾಳ ಹಾಕಲು ಮುಂದಾಗಿದ್ದಾರೆ. ನಿರ್ದೇಶಕ ಜೇಕಬ್ ವರ್ಗೀಸ್ ಕೂಡ ಧನುಷ್ ಅವರಿಗೆ ಈ ಚಿತ್ರದಲ್ಲಿ ಸಾಥ್ ನೀಡಲಿದ್ದಾರೆ. ಅಂದಹಾಗೆ, ಧನುಷ್ ನಿರ್ಮಾಣ ಮಾಡುತಿರುವ ಆ ಕನ್ನಡ ಸಿನಿಮಾದ ವಿವತರ ಮುಂದಿದೆ ಓದಿ...

ರಿಷಿ ನಟನೆ

ರಿಷಿ ನಟನೆ

'ಆಪರೇಷನ್ ಅಲಮೇಲಮ್ಮ' ಚಿತ್ರದ ನಾಯಕ ರಿಷಿ ಅವರ ಹೊಸ ಸಿನಿಮಾಗೆ ತಮಿಳು ನಟ ಧನುಷ್ ಹಣ ಹಾಕಲಿದ್ದಾರಂತೆ. ರಿಷಿ ನಟನೆ ನೋಡಿ ಇಷ್ಟ ಪಟ್ಟಿರುವ ಧನುಷ್ ಈ ನಿರ್ಧಾರಕ್ಕೆ ಬಂದಿದ್ದಾರಂತೆ.

ಅನನ್ಯ ಟೀಚರ್ ಹಿಂದೆ ರಿಷಿ

ಅನನ್ಯ ಟೀಚರ್ ಹಿಂದೆ ರಿಷಿ

ವಿಶೇಷ ಅಂದರೆ ಈ ಸಿನಿಮಾದಲ್ಲಿಯೂ 'ಆಪರೇಷನ್ ಅಲಮೇಲಮ್ಮ' ಜೋಡಿ ಮುಂದುವರೆಯಲಿದೆ. ರಿಷಿ ಮತ್ತು ನಟಿ ಶ್ರದ್ಧಾ ಶ್ರೀನಾಥ್ ಈ ಸಿನಿಮಾದಲ್ಲಿಯೂ ಒಂದಾಗಲಿದ್ದಾರಂತೆ. ಈಗಾಗಲೇ ತಮಿಳು ಭಾಷೆಯಲ್ಲಿಯೂ ಶ್ರದ್ಧಾ ನಟಿಸಿದ್ದಾರೆ.

ಜೇಕಬ್ ವರ್ಗೀಸ್

ಜೇಕಬ್ ವರ್ಗೀಸ್

ಈ ಹಿಂದೆ 'ಸವಾರಿ', 'ಪೃಥ್ವಿ' ರೀತಿಯ ಸದಭಿರುಚಿಯ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ಜೇಕಬ್ ವರ್ಗೀಸ್ ಈ ಚಿತ್ರವನ್ನು ಧನುಷ್ ಜೊತೆ ಸೇರಿ ನಿರ್ಮಾಣ ಮಾಡಲಿದ್ದಾರಂತೆ. ಜೇಕಬ್ ವರ್ಗೀಸ್ ಅವರ ಆಪ್ತ ವಲಯದಲ್ಲಿ ಇರುವ ಒಬ್ಬರು ಈ ಚಿತ್ರವನ್ನು ನಿರ್ದೇಶಕ ಮಾಡಲಿದ್ದಾರಂತೆ.

'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರ

'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರ

ಸದ್ಯ ಕನ್ನಡದಲ್ಲಿ ಬರುತ್ತಿರುವ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ತಮಿಳಿನಲ್ಲಿ ಧನುಷ್ ನಿರ್ಮಿಸಿದ್ದರು. ಕನ್ನಡದಲ್ಲಿ ಆ ಚಿತ್ರಕ್ಕೆ ಸುದೀಪ್ ಬಂಡವಾಳ ಹಾಕಿದ್ದು, ಧನುಷ್ ಪಾತ್ರದಲ್ಲಿ ಕಿಚ್ಚ ನಟಿಸುತ್ತಿದ್ದಾರೆ.

'ವಜ್ರಕಾಯ' ಹಾಡು

'ವಜ್ರಕಾಯ' ಹಾಡು

ಈ ಹಿಂದೆ ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಚಿತ್ರಕ್ಕೆ ಧನುಷ್ ಒಂದು ಹಾಡು ಹಾಡಿದ್ದರು. ಈ ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಗಾಯಕನಾಗಿ ಧನುಷ್ ಎಂಟ್ರಿ ಕೊಟ್ಟಿದ್ದರು.

More from Filmibeat

English summary
According to the source Kollywood Actor Dhanush is producing his first Kannada movie. and 'Operation Alamelamma' fame Rishi will be in lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X