ಎರಡೂವರೆ ತಿಂಗಳಿಂದ ಹಾಸಿಗೆ ಹಿಡಿರುವ ನಟಿ ರಿಷಿಕಾ ಸಿಂಗ್ ಸ್ಥಿತಿ ಈಗ ಹೇಗಿದೆ?

By ಫಿಲ್ಮ್ ಡೆಸ್ಕ್

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ, ನಟಿ ರಿಷಿಕಾ ಸಿಂಗ್ ಕಳೆದ ಎರಡೂವರೆ ತಿಂಗಳಿಂದ ಹಾಸಿಗೆ ಹಿಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಜುಲೈ 30ರಂದು ನಡೆದ ಘಟನೆ ರಿಷಿಕಾ ಬದುಕನ್ನು ಕತ್ತಲೆಗೆ ನೂಕಿದೆ.

ಕಳೆದ ಎರಡೂವರೆ ತಿಂಗಳ ಹಿಂದೆ ಅಂದರೆ ಜುಲೈ 30ರಂದು ನಟಿ ರಿಷಿಕಾ ಸಿಂಗ್ ಮತ್ತು ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕಿಡಾಗಿತ್ತು. ಬಳಿಕ ರಿಷಿಕಾ ಸಿಂಗ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂದಿನಿಂದ ಇವತ್ತಿಗೂ ರಿಷಿಕಾ ಆಸ್ಪತ್ರೆಯ ಬೆಡ್ ಮೇಲೆ ಇದ್ದಾರೆ. ಓಡಾಡಲು ಸಾಧ್ಯವಾಗದೆ, ಕುಳಿತುಕೊಳ್ಳಲು ಆಗದೆ ಕಣ್ಣೀರಿಡುತ್ತಿದ್ದಾರೆ. ಮುಂದೆ ಓದಿ...

ಪಾರ್ಟಿ ಮುಗಿಸಿ ಮನೆಗೆ ವಾಪಸ್ ಆಗುವಾಗ ಅಪಘಾತ

ಪಾರ್ಟಿ ಮುಗಿಸಿ ಮನೆಗೆ ವಾಪಸ್ ಆಗುವಾಗ ಅಪಘಾತ

ರಿಷಿಕಾ ಸಿಂಗ್ ಕುಟುಂಬದವರ ಜೊತೆ ಪಾರ್ಟಿ ಮುಗಿಸಿ ಕಾರಿನಲ್ಲಿ ವಾಪಸ್ ಮನೆಗೆ ಬರುವಾಗ ಯಲಹಂಕ ಮತ್ತು ಮಾವಳ್ಳಿ ಸಮೀಪ ಕಾರು ಅಪಘಾತವಾಗಿದೆ. ಕಾರಿನಲ್ಲಿ ಜೈ ಜಗದೀಶ್ ಪುತ್ರಿ ಸಹ ಇದ್ದರು. ಅಪಘಾತದ ಬಳಿಕ ತಕ್ಷಣವನ್ನು ರಿಷಿಕಾ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆನ್ನು ಹುರಿಗೆ ಸರಿಯಾದ ಏಟು ತಗುಲಿದೆ ಎನ್ನುವುದು ಗೊತ್ತಾಗಿದೆ. ಬಳಿಕ ಅವರನ್ನು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡೂವರೆ ತಿಂಗಳಿಂದ ಹಾಸಿಗೆ ಹಿಡಿದಿರುವ ರಿಷಿಕಾ

ಎರಡೂವರೆ ತಿಂಗಳಿಂದ ಹಾಸಿಗೆ ಹಿಡಿದಿರುವ ರಿಷಿಕಾ

ಎರಡೂವರೆ ತಿಂಗಳಿಂದ ರಿಷಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಬೆನ್ನುಹುರಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ರಿಷಿಕಾಗೆ ಕುಳಿತುಕೊಳ್ಳಲು, ನಡೆದಾಡಲು ಆಗುತ್ತಿಲ್ಲ. ಮೂಲಗಳ ಪ್ರಕಾರ ಬೆನ್ನುಹುರಿಗೆ ಬಲವಾದ ಏಟು ಬಿದ್ದಿರುವ ಕಾರಣ ಇನ್ನು ಕೆಲವು ತಿಂಗಳು ರಿಷಿಕಾಗೆ ನಡೆದಾಡಲು ಸಾಧ್ಯವಿಲ್ಲ, ಹಾಸಿಗೆಯಲ್ಲೆ ಇರಬೇಕು ಎಂದು ಹೇಳುತ್ತಿದ್ದಾರೆ.

ಲಕ್ಷಾಂತರ ಹಣ ಖುರ್ಚು ಮಾಡಿರುವ ಕುಟುಂಬದವರು

ಲಕ್ಷಾಂತರ ಹಣ ಖುರ್ಚು ಮಾಡಿರುವ ಕುಟುಂಬದವರು

ಈಗಾಗಲೇ ಚಿಕಿತ್ಸೆಗೆ ಲಕ್ಷಾಂತರ ಹಣ ಖರ್ಚುಮಾಡಲಾಗಿದೆಯಂತೆ. ಸದ್ಯ ಹೀಲಿಂಗ್ ಚಿಕಿತ್ಸೆ ನೀಡಲಾಗುತ್ತಿದೆಯಂತೆ. ಇನ್ನು ಕೆಲವು ತಿಂಗಳು ಚಿಕಿತ್ಸೆ ಮುಂದುವರೆಸಬೇಕು ಎಂದು ವೈದ್ಯರು ಹೇಳಿದ್ದಾರಂತೆ. ನಟಿ ರಿಷಿಕಾ ಸಂತೋಷವಾಗಿ ಪಾರ್ಟಿ ಮುಗಿಸಿ ಮನೆಗೆ ಬರಬೇಕಾಗಿದ್ದ ರಿಷಿಕಾ ಈಗ ಆಸ್ಪತ್ರೆ ಬೆಡ್ ಮೇಲೆ ಕಣ್ಣೀರಾಕುತ್ತಾ ಮಲಗಿದ್ದಾರೆ. ರಿಷಿಕಾ ಮುಂದಿನ ಸಿನಿಮಾ ಬದುಕು ಸಹ ಕಷ್ಟದಲ್ಲಿದೆ.

Recommended Video

ಇದು Darshan ಪತ್ನಿ ಮಾಡಿದ ಸಾಧನೆ | Filmibeat Kannada
ಸಿನಿಮಾಗಳು ಕೈತಪ್ಪಿ ಹೋಗುತ್ತಿವೆ

ಸಿನಿಮಾಗಳು ಕೈತಪ್ಪಿ ಹೋಗುತ್ತಿವೆ

ಈಗಾಗಲೇ ಅಂದರೆ ಅಪಘಾತಕ್ಕೂ ಮೊದಲು ರಿಷಿಕಾ ಒಂದು ಸಿನಿಮಾ ಮತ್ತು ವೆಬ್ ಸೀರಿಸ್ ಗೆ ಸಹಿ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಆದರೀಗ ರಿಷಿಕಾ ಸ್ಥಿತಿ ನೋಡಿ ಆ ಪ್ರಾಜೆಕ್ಟ್ ನಿಂದ ಕೈ ಬಿಡಲಾಗಿದೆಯಂತೆ. ಖುಷಿಖುಷಿಯಾಗಿ ಓಡಾಡಿಕೊಂಡಿದ್ದ ಮಗಳು ಹಾಸಿಗೆ ಹಿಡಿದಿರುವುದು ಕುಟುಂಬಕ್ಕೆ ಆತಂಕ ಮೂಡಿಸಿದೆ. ಮಗಳ ಸ್ಥಿತಿ ನೋಡಿ ಹೆತ್ತವರು ಕಣ್ಣೀರಿಡುತ್ತಿದ್ದಾರೆ.

More from Filmibeat

English summary
Actress Rishika Singh has been in hopsital bed for 2 months After car accident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X