ನಾಯಿಗಿರೋ ನಿಯತ್ತು ನಿಮಗಿಲ್ಲ, ನೀವು ಯಾವೂರ ಡಾಗ್ ; ಡಾಗ್ ಸತೀಶ್ ವಿರುದ್ಧ ಬೆಂಕಿಯಾದ ರಿಷಿಕಾ ಸಿಂಗ್

''ಬಿಗ್ ಬಾಸ್'' ಹಲವರ ಕನಸು. ಸಾಮಾನ್ಯರನ್ನು ಸಾಧಕರನ್ನಾಗಿ ಮಾಡುವ, ಸಾಧಕರ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸುವ ವೇದಿಕೆ. ಆದರೆ ಈಗೀಗ ಈ ವೇದಿಕೆಯ ಮೂಲಕ ಪರಿಚಯವಾದ ಕೆಲವರು ಆ ನಂತರ ತಾವೇ ಸರ್ವಶ್ರೇಷ್ಠರು ಎಂಬಂತೆ ವರ್ತಿಸುತ್ತಿದ್ದಾರೆ. ಅವಕಾಶ ನೀಡಿದವರಿಗೆ ಕೃತಜ್ಞರಾಗಿರುವ ಬದಲು ಅವಕಾಶ ನೀಡಿದವರನ್ನು ಅವಮಾನ ಮಾಡುತ್ತಿದ್ದಾರೆ. ಇವರಲ್ಲಿ ಕೃತಜ್ಞತಾ ಭಾವವೇ ಇರುವುದಿಲ್ಲ. ಉದಾಹರಣೆಗೆ ಡಾಗ್ ಸತೀಶ್.

ಹೌದು, ಡಾಗ್ ಸತೀಶ್ ಅಲಿಯಾಸ್ ಸತೀಶ್ ಕ್ಯಾಡಬಾಮ್ಸ್. ಸಾಮಾಜಿಕ ಜಾಲತಾಣದ ದೃಷ್ಟಿಯಲ್ಲಿ ಬಿಲ್ಡಪ್ ರಾಜಾ. ಕಳೆದ ಬಾರಿ ಮೂರನೇ ಸ್ಪರ್ಧಿಯಾಗಿ ''ಬಿಗ್ ಬಾಸ್'' 12ನೇ ಸೀಸನ್ ಮನೆ ಪ್ರವೇಶ ಮಾಡಿದ್ದ ಖ್ಯಾತ ಡಾಗ್ ಬ್ರೀಡರ್.

A Dog Has More Loyalty Than You Rishika Singh Savages BBK12 s Satish in Viral Rant

ಎಳವೆಯಿಂದಲೇ ನಾಯಿಗಳ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಡಾಗ್ ಸತೀಶ್ ಹತ್ತನೇ ತರಗತಿಯಲ್ಲಿದ್ದಾಗಲೇ ನಾಯಿಗಳ ಮಾರಾಟದಲ್ಲಿ ತೊಡಗಿಕೊಂಡಿದ್ದರು. ಕೋಟ್ಯಂತರ ಮೌಲ್ಯದ ನಾಯಿಗಳನ್ನು ಖರೀದಿಸುವ, ಮಾರಾಟ ಮಾಡುವುದೇ ಇವರ ಉದ್ಯೋಗ. ಖುದ್ದು ಡಾಗ್ ಸತೀಶ್ ''ಬಿಗ್ ಬಾಸ್'' ವೇದಿಕೆಯಲ್ಲಿಈ ಮಾತನ್ನು ಹೇಳಿದ್ದರು. ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದರು.

ಆದರೆ, ಅದ್ಯಾವ ಘಳಿಗೆಯಲ್ಲಿ ''ಬಿಗ್ ಬಾಸ್'' ಮನೆಯಿಂದ ಹೊರ ಬಂದರೋ ಅಲ್ಲಿಂದ ಡಾಗ್ ಸತೀಶ್ ವರಸೆಯೇ ಬದಲಾಯ್ತು. ಕರೆದು ಅವಕಾಶ ನೀಡಿದವರ ವಿರುದ್ಧವೇ ಮಾತನಾಡಲು ಶುರು ಮಾಡಿದ ಡಾಗ್ ಸತೀಶ್ ಅಲಿಯಾಸ್ ಸತೀಶ್ ಕ್ಯಾಡಬಾಮ್ಸ್ ಸುದೀಪ್ ಅವರಿಗೆ ಅಗೌರವ ತೋರಿಸಿದ್ದರು. ಟಾಯ್ಲೆಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ಹಂಚಿಕೊಂಡು, ಆ ವಿಡಿಯೋಗೆ ಸುದೀಪ್ ಅವರ ಹಾಡು ಉಪಯೋಗಿಸಿದ್ದರು. ಈ ಮೂಲಕ ಸುದೀಪ್ ಅವರ ಅಭಿಮಾನಿಗಳನ್ನು ಕೆರಳಿಸಿದ್ದರು. ಇದಿಷ್ಟೇ ಅಲ್ಲ ಅವಕಾಶ ಸಿಕ್ಕಾಗೆಲ್ಲಾ ''ಬಿಗ್ ಬಾಸ್'' ಮತ್ತು ಸುದೀಪ್ ಅವರ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ ಡಾಗ್ ಸತೀಶ್.

ಈಗ ಡಾಗ್ ಸತೀಶ್ ಅವರ ಇದೇ ವರ್ತನೆ ಮತ್ತು ಅವರಾಡುವ ಮಾತುಗಳಿಗೆ ಕನ್ನಡದ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರ ಮಗಳು ರಿಶಿಕಾ ಸಿಂಗ್ ಪ್ರತ್ಯುತ್ತರ ಕೊಟ್ಟಿದ್ದಾರೆ. ಡಾಗ್ ಸತೀಶ್ ವಿರುದ್ಧ ಕಿಡಿ ಕಾರುತ್ತಲೇ ವ್ಯಂಗ್ಯವಾಡಿದ್ದಾರೆ.

ಈ ಕುರಿತು ''TV9 ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಿಶಿಕಾ ಸಿಂಗ್, ''ಬಿಗ್ ಬಾಸ್'' ಎಂಬ ಸ್ಕೂಲ್‌ಗೆ ನೀವು ನಿನ್ನೆ ಮೊನ್ನೆ ಬಂದಿರುವ ಬಚ್ಚಾ. ನಾವು ಹೋಗಿದ್ದು ಮೊದಲ ಸೀಸನ್. ಅಂದರೆ ''ಬಿಗ್ ಬಾಸ್'' ಎಂಬ ಸ್ಕೂಲಿಗೆ ಸೀನಿಯರ್ ಅಲ್ಲಿ ನಾವು ಸೂಪರ್ ಸೀನಿಯರ್ ನಿಮಗೆ ಎಂದು ಹೇಳಿದ್ದಾರೆ.

a-dog-has-more-loyalty-than-you-rishika-singh-savages-bbk12-s-satish-in-viral-rant

ನೀವು ನಿನ್ನೆ ಮೊನ್ನೆ ಬಂದು ಆ ಹೋಸ್ಟ್ ಬಗ್ಗೆ ಮಾತನಾಡ್ತೀರಾ ಅಂದರೆ, ಹೋಸ್ಟ್ ಇಸ್ ಘೋಸ್ಟ್ ಎನ್ನುವುದು ನಿಮಗೆ ಮೊದಲು ಗೊತ್ತಿರಬೇಕು ಎಂದು ಹೇಳಿರುವ ರಿಷಿಕಾ ಸಿಂಗ್ ಡಾಗ್ ಸತೀಶ್ ಅಂದರೆ ಯಾರು..? ''ಬಿಗ್ ಬಾಸ್'' ಮನೆಗೆ ಬರುವವರೆಗೆ ಅವರು ಹೆಸರು ಯಾರಿಗಾದರೂ ಗೊತ್ತಿತ್ತಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಹೆಸರು-ಕೀರ್ತಿ ನೀಡಿದ ವೇದಿಕೆಯನ್ನೇ ಊರ್‍ತುಂಬಾ ಬೈಯ್ಕೊಂಡು, ಸುದೀಪ್ ಅವರ ಬಗ್ಗೆ ಮಾತನಾಡಿಕೊಂಡು ಓಡಾಡ್ತೀರಲ್ಲ, ನೀವೇನು ದೊಡ್ಡವರಾ..? ಎಂದು ಪ್ರಶ್ನೆ ಮಾಡಿರುವ ರಿಷಿಕಾ ಸಿಂಗ್ ಡಾಗ್ ಅಂದರೆ ನಿಯತ್ತು. ಆ ನಿಯತ್ತೇ ನಿಮಗೆ ಇಲ್ಲ ಅಂದ ಮೇಲೆ ಡಾಗ್ ಅಂತ ಹೆಸರು ಇಟ್ಕೊಂಡು ಏನು ಪ್ರಯೋಜನ..? ಎಂದು ಕೇಳಿದ್ದಾರೆ. ಡಾಗ್‌ನ ಉಲ್ಟಾ ಮಾಡಿದ್ರೆ ಗಾಡ್ ಅಂತ ಆಗುತ್ತೆ, ನಿಮಗೆ ಕೆಲಸ ನೀಡಿದ ಆ ಗಾಡ್ ಬಗ್ಗೆಯೇ ನೀವು ಮಾತನಾಡ್ತೀರಾ ಅಂದರೆ ನೀವು ಯಾವ ಊರ ಡಾಗ್ ಹೇಳಿ..? ಎಂದು ಕಿಡಿ ಕಾರಿದ್ದಾರೆ.

ಇನ್ನೂ ಡಾಗ್ ಸತೀಶ್ ಮಾತೆತ್ತಿದರೆ ತಮ್ಮ ಬಳಿ ಇರುವ ನಾಯಿಯ ರೇಟ್ ಹೇಳಲು ಶುರು ಮಾಡುತ್ತಾರೆ. 50 ಕೋಟಿ..100 ಕೋಟಿಯ ನಾಯಿ ಎಂದೆಲ್ಲಾ ಹೇಳುತ್ತಾರೆ. ಈ ಕುರಿತು ಕೂಡ ವ್ಯಂಗ್ಯ ಮಾಡಿರುವ ರಿಷಿಕಾ, ನಿಮ್ಮ ಹತ್ರ ಇರುವ ನಾಯಿ ನೂರು ಕೋಟಿ ನಾಯಿ ಅನ್ನುವುದಕ್ಕೆ ಏನು ಸಾಕ್ಷಿ ಇದೆ..? ಎಂದಿದ್ದಾರೆ.

ನನಗೆ ಸಾಕ್ಷಿ ಬೇಕು, ಸಾಧ್ಯ ಆದರೆ ಬಿಲ್ ಇದ್ದರೆ ತಂದು ತೋರಿಸಿ, ಆಗ ನೋಡೋಣ ಎಂದು ಹೇಳಿರುವ ರಿಷಿಕಾ ಕ್ಯಾಡಾಬಾಮ್ಸ್ ಎಂಬ ಹೆಸರಿನ ತಳಿಯೇ ಇಲ್ಲ, ನೀವು ಸುಮ್ಮನೆ ಎಲ್ಲರಿಗೂ ತಪ್ಪು ಮಾಹಿತಿ ನೀಡಿದ್ದೀರಾ..? ಎಂದಿದ್ದಾರೆ.

ಮುಂದುವರೆದು ಮೊದಲು ಗೌರವ ಕೊಡುವುದು ಕಲಿಯಿರಿ ಎಂದು ಬುದ್ದಿ ಮಾತನ್ನು ಹೇಳಿರುವ ರಿಷಿಕಾ ಸಿಂಗ್, ಅನ್ನ ತಿಂದ ಮನೆಗೆ ಕನ್ನ ಹಾಕಬೇಡಿ ಎಂದು ಕಿಡಿ ಕಾರಿದ್ದಾರೆ. ಸುದೀಪ್ ಅವರೇನೋ ಸುಮ್ಮನೆ ಇದ್ದಾರೆ, ರಿಯ್ಯಾಕ್ಟ್ ಮಾಡಲ್ಲ ಅಂದರೆ ಅದರ ಅರ್ಥ ಕೊಚ್ಚೆ ಹಾರಿಸುವುದು ಅಲ್ಲ ಎಂದು ಹೇಳಿರುವ ರಿಷಿಕಾ ಸಿಂಗ್ ನೀವು ಹಂಗೆಲ್ಲ ಟಾಯ್ಲೆಟ್‌ನಲ್ಲಿ ವರ್ತಿಸಬಹುದಾ ..? ಎಂದು ಕೆಂಡ ಕಾರಿದ್ದಾರೆ.

ಇದೆಲ್ಲ ಹೇಳಿ ನನಗೇನು ಪ್ರಯೋಜನ ಇಲ್ಲ, ಆದರೆ ನಾವೆಲ್ಲ ಒಂದು ಕುಟುಂಬ, ''ಬಿಗ್ ಬಾಸ್'' ದಿಂದ ನನಗೊಂದು ಐಡೆಂಟಿಟಿ ಸಿಕ್ಕಿದೆ ಹೀಗಾಗಿ ನಾನು ಒಳ್ಳೆ ಕೆಲಸ ಮಾಡಿ ಫೇಮಸ್ ಆಗಿ ಅಂತ ಹೇಳ್ತಿದ್ದೀನಿ ಈತ ತರ ಎಲ್ಲ ಕೆಲಸ ಮಾಡಬೇಡಿ ಎಂದು ಹೇಳಿರುವ ರಿಷಿಕಾ ಸಿಂಗ್ ಈ ನೇಮು ಫೇಮು ಒಂದೆರಡು ದಿನ ಆದರೆ ನಿಮ್ಮ ಕ್ಯಾರೆಕ್ಟರ್ ನಿಮ್ಮ ಜೀವನಪೂರ್ತಿ ಇರುತ್ತೆ ಅನ್ನೋದನ್ನು ಮರೆಯಬೇಡಿ ಎಂದಿದ್ಧಾರೆ.

English summary
"Even a dog is more loyal!" Rishika Singh doesn't hold back as she slams BBK12’s Satish in an eye-grabbing call-out. Discover why the Bigg Boss Kannada veteran is furious and what Satish did to spark the fire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X