»   » ರಜತ ಪರದೆ ಮೇಲೆ 'ಹುಚ್ಚುಡುಗ್ರು' ಸಾಹಸಗಳು

ರಜತ ಪರದೆ ಮೇಲೆ 'ಹುಚ್ಚುಡುಗ್ರು' ಸಾಹಸಗಳು

Posted By:
Subscribe to Filmibeat Kannada

ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ 'ಯು' ಸರ್ಟಿಫಿಕೇಟ್ ಪಡೆದ ಕನ್ನಡ ಸಿನೆಮಾ 'ಹುಚ್ಚುಡುಗ್ರು' ಫುಲ್ ಊಟ ಬೀದಿ ಬೆಂಕಿಪಟ್ನಾ... ಈ ವಾರ (ಏಪ್ರಿಲ್ 4) ರಜತ ಪರದೆಯ ಮೇಲೆ ರಾರಾಜಿಸಲಿದೆ. 'ಭಗವತಿ ಪಿಕ್ಚರ್ಸ್' ಚಿತ್ರದಲ್ಲಿ ನಾಲ್ಕು ನಾಯಕರುಗಳ ಒಳಗೊಂಡ ಚಿತ್ರವನ್ನು ವೇದಮೂರ್ತಿ ಹಾಗೂ ರೋಹಿಣಿ ನಿರ್ಮಿಸಿದ್ದಾರೆ.

ರೇಡಿಯೊ ಜಾಕಿ ಆರ್ ವಿ ಪ್ರದೀಪ ಈ 'ಹುಚ್ಚುಡುಗ್ರು' ಮೂಲಕ ನಿರ್ದೇಶನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಯಂಗ್ ಹುಡುಗರು ಯಂಗ್ ಯೆಂಗೋ ಆಡುವುದು ಈ ಚಿತ್ರದ ತಮಾಷೆ ವಿಚಾರ. ನಿರ್ದೇಶಕ ಪ್ರೇಮ್ ಅವರ ಬಳಿ 'ಕರಿಯ' ಸಿನೆಮಾದಿಂದ 'ರಾಜ್ ದಿ ಶೋಮನ್' ವರೆಗೆ ಸಹಾಯಕರಾಗಿ ದುಡಿದ ರಘು ಹಾಸನ್ ಅವರು ಚಿತ್ರದ ಕಥೆ, ಚಿತ್ರಕಥೆ, ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. [ಶಿವ ಶಿವ ಪೋಲಿ ಹುಡುಗ್ರಲ್ಲ ಕನ್ನಡದ 'ಹುಚ್ಚುಡುಗ್ರು']


ಈ ಚಿತ್ರಕ್ಕೆ ಸಾಹಿತ್ಯ ಆನಂದಪ್ರಿಯ, ಕಲ್ಯಾಣ್ ಹಾಗೂ ಸುದರ್ಶನ್ ಇದೆ. ಸಂಭಾಷಣೆಯನ್ನು ಸುದರ್ಶನ್, ಛಾಯಾಗ್ರಹಣ ಶಮನ್ ಮಿತೃ. ಸಂಗೀತ ನಿರ್ದೇಶನ ಜೋಶ್ವಾ ಶ್ರೀಧರ್ ಅವರದು. ಜಾನಿ ಹರ್ಷ ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ ಚಿತ್ರಕ್ಕಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

'ಹುಚ್ಚುಡುಗರು' ಚಿತ್ರದ ಶೀರ್ಷಿಕೆ ಗೀತೆಯನ್ನು ನಿರ್ದೇಶಕ ಪ್ರೇಮ್ ಹಾಡಿದ್ದು ಈಗಾಗಲೆ ಅದು ಜನಪ್ರಿಯ ಆಗಿದೆ. 'ಹರಕಲು ಅಂಗಿ, ತ್ಯಾಪೆ ಚಡ್ಡಿ, ಕುರುಚಲು ಗಡ್ಡ, ಲೂಸು ತಲೆ ಹುಚ್ಚುಡುಗರು...ಎಂಬ ಹಾಡಿನ ಮುಲಕವೇ ಹುಚ್ಚುಡುಗ್ರು ಚಿತ್ರ ಗಮನಸೆಳೆದಿರುವುದು ವಿಶೇಷ. ಚಿತ್ರದ ತಾರಾಗಣದಲ್ಲಿ ಚೇತನ್ ಚಂದ್ರ, ಅಮಿತ್, ಪ್ರತಾಪ್, ದೇವ ನಾಲ್ಕು 'ಹುಚ್ಚು ಹುಡುಗ್ರು'. ಅದಿತಿ ರಾವ್ ಚಿತ್ರದ ನಾಯಕಿ, ರವಿಶಂಕರ್ ಚಿತ್ರದ ಖಳ ನಟ. (ಒನ್ಇಂಡಿಯಾ ಕನ್ನಡ)

English summary
Radio Jockey Pradeepa's debut directional realistic Kannada movie 'Huchchudugru' releases on 4th April, 2014. The movie is all about 4 guys belongs to a small town near Nanjangud. The movie produced by Bhagavathi Pictures and music by Joshua Sridhar. 
Please Wait while comments are loading...