For Quick Alerts
  ALLOW NOTIFICATIONS  
  For Daily Alerts

  ರಾಕ್ ಸ್ಟಾರ್ ರೋಹಿತ್ ಗೆ ಕೂಡಿ ಬಂತು ಕಂಕಣ ಭಾಗ್ಯ

  By Harshitha
  |

  ಎಫ್.ಎಂ ದುನಿಯಾದ 'ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಆರ್.ಜೆ ರೋಹಿತ್ ಅಲಿಯಾಸ್ ರಾಕ್ ಸ್ಟಾರ್ ರೋಹಿತ್ ಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

  ತಮ್ಮ ದೀರ್ಘ ಕಾಲದ ಗೆಳತಿ ಜೊತೆ ಗೃಹಸ್ಥಾಶ್ರಮಕ್ಕೆ ಸೇರುವ ಮನಸ್ಸು ಮಾಡಿದ್ದಾರೆ ರೇಡಿಯೋ ಜಾಕಿ ರೋಹಿತ್.

  92.7 ಬಿಗ್ ಎಫ್.ಎಂ ನಲ್ಲಿ ಮಾತಾಡುತ್ತಾ, ಹುಡುಗಿಯರಿಗೆ 'ಡಾರ್ಲಿಂಗ್' ಎನ್ನುತ್ತ, ಹರಟೆ ಹೊಡೆಯುತ್ತಿದ್ದ ರೋಹಿತ್ ಗೆ ನಿಜ ಜೀವನದಲ್ಲಿ 'ಡಾರ್ಲಿಂಗ್' ಆಗಿರುವವರು ಇವರೇ....

  ರೋಹಿತ್ 'ಡಾರ್ಲಿಂಗ್' ಈಕೆಯೇ....

  ರೋಹಿತ್ 'ಡಾರ್ಲಿಂಗ್' ಈಕೆಯೇ....

  ನಟ ಕಮ್ ರೇಡಿಯೋ ಜಾಕಿ ಆಗಿರುವ ರೋಹಿತ್ ಕೈ ಹಿಡಿಯುತ್ತಿರುವ ಲಕ್ಕಿ ಗರ್ಲ್ ಈಕೆಯೇ...ಹೆಸರು ರೀಮಾ.

  ಲವ್ ಮ್ಯಾರೇಜ್

  ಲವ್ ಮ್ಯಾರೇಜ್

  ರೋಹಿತ್ ಮತ್ತು ರೀಮಾ ರವರದ್ದು ಲವ್ ಮ್ಯಾರೇಜ್. ಐದು ವರ್ಷಗಳ ಹಿಂದೆ ಇಬ್ಬರಿಗೂ ಪರಿಚಯವಾಯ್ತು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ ಈಗ ಲೈಫ್ ಪಾರ್ಟ್ನರ್ಸ್ ಆಗುತ್ತಿದ್ದಾರೆ.

  ರೀಮಾ ಕುರಿತು....

  ರೀಮಾ ಕುರಿತು....

  ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ರೀಮಾಗೆ ಫ್ಯಾಶನ್ ಡಿಸೈನರ್ ಆಗುವ ಬಯಕೆ ಇದೆ.

  ಮದುವೆ ಯಾವಾಗ?

  ಮದುವೆ ಯಾವಾಗ?

  ಸೆಪ್ಟೆಂಬರ್ 10 ರಂದು ರೋಹಿತ್-ರೀಮಾ ವಿವಾಹ ಮಹೋತ್ಸವ ನಡೆಯಲಿದೆ. [ರಾಕ್ ಸ್ಟಾರ್ ರೋಹಿತ್ 'ಕರ್ವ' ಹೀರೋ ಗುರು]

  ಕುಟುಂಬಸ್ಥರು ಮಾತ್ರ ಭಾಗಿ

  ಕುಟುಂಬಸ್ಥರು ಮಾತ್ರ ಭಾಗಿ

  ರೋಹಿತ್-ರೀಮಾ ಮದುವೆ ದೇವಸ್ಥಾನವೊಂದರಲ್ಲಿ ನಡೆಯಲಿದ್ದು, ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಮಾತ್ರ ಆಹ್ವಾನವಿದೆ.

  ರೋಹಿತ್ ಗೆ ಡಬಲ್ ಸಂಭ್ರಮ

  ರೋಹಿತ್ ಗೆ ಡಬಲ್ ಸಂಭ್ರಮ

  ಆರ್.ಜೆ.ರೋಹಿತ್ ಅಭಿನಯಿಸಿದ್ದ 'ಕರ್ವ' ಚಿತ್ರ ಇತ್ತೀಚೆಗಷ್ಟೇ ಶತದಿನೋತ್ಸವ ಆಚರಿಸಿಕೊಂಡಿತ್ತು. ಆ ಖುಷಿಯಲ್ಲೇ ಹೊಸ ಬಾಳಿಗೆ ರೋಹಿತ್ ಕಾಲಿಡುತ್ತಿದ್ದಾರೆ. ['ಕರ್ವ' ವಿಮರ್ಶೆ: ರಾಜ ಬಂಗಲೆ ರಹಸ್ಯ ನೋಡಿ, ಭಯಪಡಿ!]

  ರೋಹಿತ್ ಕುರಿತು.....

  ರೋಹಿತ್ ಕುರಿತು.....

  ರೋಡಿಯೋ ಜಾಕಿ ಆಗಿರುವ ರೋಹಿತ್ ಕಿರುತೆರೆಯ ಜನಪ್ರಿಯ ಶೋ 'ಬಿಗ್ ಬಾಸ್' ಸ್ಪರ್ಧಿ ಆಗಿದ್ದರು. 'ಡಿವೈಡೆಡ್' ಶೋ ಹೋಸ್ಟ್ ಆಗಿದ್ದ ರೋಹಿತ್ 'ಕರ್ವ' ಚಿತ್ರದಲ್ಲಿ ಅಭಿನಯಿಸಿದ್ದಾರೆ. [ರಿಯಾಲಿಟಿ ಶೋ ನಿರೂಪಕರಾಗಿ ಆರ್ ಜೆ ರೋಹಿತ್]

  English summary
  Popular RJ, Rockstar Rohith is getting hitched to his long-time girlfriend Reema on September 10th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X