ದರ್ಶನ್ ಗೆ ವಿಶ್ ಮಾಡಿ ಧನ್ಯವಾದ ತಿಳಿಸಿದ 'ರಾಬರ್ಟ್' ನಾಯಕಿ ಆಶಾ ಭಟ್

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಪಾರ ಸಂಖ್ಯೆಯ ಅಭಿಮಾನಿಗಳ ಜೊತೆಗೆ ಸ್ನೇಹಿತರು ಮತ್ತು ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ.

ದರ್ಶನ್ ಹುಟ್ಟುಹಬ್ಬ ಎಂದರೆ ಜನ ಸಾಗರವೇ ಸೇರುತ್ತಿತ್ತು. ನೆಚ್ಚಿನ ನಟನನ್ನು ನೋಡಲು ಮನೆ ಮುಂದೆ ದೊಡ್ಡದಾದ ಕ್ಯೂ ನಿಂತಿರುತ್ತಿತ್ತು. ಆದರೆ ಈ ಬಾರಿ ಎಲ್ಲಾ ಸಂಭ್ರಮ, ಸಡಗರಕ್ಕೆ ಬ್ರೇಕ್ ಬಿದ್ದಿದೆ. ಆದರೂ ಪ್ರೀತಿಯ ಸಂದೇಶಗಳು ಹರಿದುಬರುತ್ತಿದೆ.

ರಾಬರ್ಟ್ ಸಿನಿಮಾದ ನಾಯಕಿ ಆಶಾ ಭಟ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ವಿಶೇಷವಾಗಿ ವಿಶ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಅಂದಹಾಗೆ ಆಶಾ ಭಟ್ ಗೆ ರಾಬರ್ಟ್ ಮೊದಲ ಕನ್ನಡ ಸಿನಿಮಾ. ದೊಡ್ಡ ಸ್ಟಾರ್ ನಟನ ಜೊತೆ ಆಶಾ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ದರ್ಶನ್ ಜೊತೆ ನಟಿಸಿದ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ಜೊತೆಗೆ, ಪ್ರತಿಯೊಂದು ವಿಚಾರದಲ್ಲೂ ರಾಬರ್ಟ್ ಗೆ ಆಧಾರಸ್ತಂಭವಾಗಿ ನಿಂತಿರುವ ದರ್ಶನ್ ಗೆ ಧನ್ಯವಾದ ತಿಳಿಸಿದ್ದಾರೆ.

 Roberrt Actress Asha Bhat birthday wishes to Darshan

'ಮೊದಲಿನಿಂದನೂ ಇಲ್ಲಿವರೆಗೂ ದರ್ಶನ್ ರಾಬರ್ಟ್ ಚಿತ್ರಕ್ಕೆ ಮುಖ್ಯ ಆಧಾರಸ್ತಂಭವಾಗಿದ್ದಾರೆ. ಗೋಲ್ಡನ್ ಆತ್ಮ ಹೊಂದಿರುವವರು. ಹುಟ್ಟುಹಬ್ಬ ಶುಭಾಶಯಗಳು ಸರ್. ನಿಮ್ಮ ಜೊತೆ ಕೆಲಸ ಮಾಡಿದ್ದು ನನ್ನ ಪುಣ್ಯ. ಧನ್ಯವಾದಗಳು' ಎಂದು ಹೇಳಿದ್ದಾರೆ. ಜೊತೆಗೆ ರಾಬರ್ಟ್ ಸಿನಿಮಾ ಸೆಟ್ ನಲ್ಲಿ ದರ್ಶನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

ನಟಿ ಆಶಾ ಭಟ್ ಅವರ ಮೊದಲ ಕನ್ನಡ ಸಿನಿಮಾ ರಾಬರ್ಟ್ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇಂದು ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಆಶಾ ಭಟ್ ಎರಡು ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಬರ್ಟ್ ಟ್ರೈಲರ್ ಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ಆಶಾ ಭಟ್ ಪಾತ್ರ ಹೇಗಿರಲಿದೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.

More from Filmibeat

English summary
Roberrt Actress Asha Bhat birthday wishes to Darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X