ರಾಕಿ ಭಾಯ್ ಭೇಟಿ ಮಾಡಿದ 'ರಾಬರ್ಟ್' ಕ್ವೀನ್ ಆಶಾ ಭಟ್
Recommended Video
ನಟಿ ಆಶಾ ಭಟ್ ತುಂಬ ಖುಷಿಯಲ್ಲಿ ಇದ್ದಾರೆ. ಅವರ ಸಂತಸಕ್ಕೆ ಕಾರಣ ಆಗಿರುವುದು ರಾಕಿಂಗ್ ಸ್ಟಾರ್ ಯಶ್. ಆಶಾ ಭಟ್ ರಾಕಿಂಗ್ ಸ್ಟಾರ್ ಯಶ್ ರನ್ನು ಭೇಟಿ ಮಾಡಿದ್ದಾರೆ.
ಯಶ್ ಜೊತೆಗಿನ ಫೋಟೋವನ್ನು ಆಶಾ ಭಟ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಶ್ ರನ್ನು ಭೇಟಿ ಮಾಡುವುದು ಹೆಮ್ಮೆ ಎಂದು ಹೇಳಿದ್ದಾರೆ. GQ ಪವರ್ ಲಿಸ್ಟ್ ಕಾರ್ಯಕ್ರಮದಲ್ಲಿ ಆಶಾ ಭಟ್ ಹಾಗೂ ಯಶ್ ಇಬ್ಬರ ಮುಖಾಮುಖಿಯಾಗಿದೆ.
ಮುಂಬೈನಲ್ಲಿ ಕನ್ನಡಿಗರು ಸಮಾಗಮ ಆಗಿದೆ. ಕಾರ್ಯಕ್ರಮದಲ್ಲಿ ಕೆಲ ಕ್ಷಣ ಉಭಯ ಕುಶಲೋಪರಿ ಮಾತನಾಡಿದ ಯಶ್ ಹಾಗೂ ಆಶಾ ಭಟ್ ಫೋಟೋ ತೆಗೆದುಕೊಂಡಿದ್ದಾರೆ. ಕನ್ನಡಿಗರು ಎಂದು ಹ್ಯಾಶ್ ಟ್ಯಾಗ್ ಮೂಲಕ ಫೋಟೋಗಳನ್ನು ಆಶಾ ಭಟ್ ಹಂಚಿಕೊಂಡಿದ್ದಾರೆ.

ಆಶಾ ಭಟ್ ಭದ್ರಾವತಿಯ ಹುಡುಗಿ ಆಗಿದ್ದು, 2014 ರಲ್ಲಿ ಮಿಸ್ ಸುಪ್ರ ಇಂಟರ್ ನ್ಯಾಶನಲ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಆ ಬಳಿಕ 'ಜಂಗಲ್' ಹಿಂದಿ ಸಿನಿಮಾದ ಮೂಲಕ ಲಾಂಚ್ ಆದರು.
ಸದ್ಯ, 'ರಾಬರ್ಟ್' ಚಿತ್ರದ ಮೂಲಕ ಕನ್ನಡದ ಹುಡುಗಿ ಆಶಾ ಭಟ್ ಕನ್ನಡ ಸಿನಿಮಾ ಮಾಡುತ್ತಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜೋಡಿಯಾಗಿದ್ದಾರೆ. ತರುಣ್ ಸುಧೀರ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











