4ನೇ ದಿನವೂ 'ರಾಬರ್ಟ್' ದಾಖಲೆ ಗಳಿಕೆ: 50 ಕೋಟಿ ಕ್ಲಬ್ ಸೇರಿದ ಡಿ ಬಾಸ್ ಸಿನಿಮಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ 4ನೇ ದಿನವೂ ದಾಖಲೆ ಗಳಿಕೆ ಮಾಡಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ರಾಬರ್ಟ್ ಕಡಿಮೆ ಅವಧಿಯಲ್ಲಿ 50 ಕೋಟಿ ಕ್ಲಬ್ ಸೇರಿದ ಸಿನಿಮಾವಾಗಿದೆ. ಭಾನುವಾರವೂ ಸಿನಿಮಾ ಅತೀ ಹೆಚ್ಚು ಗಳಿಕೆ ಮಾಡುವ ಮೂಲಕ ರಾಬರ್ಟ್ ದಾಖಲೆ ಮಾಡಿದೆ.
Recommended Video
ಕರ್ನಾಟಕ ಮತ್ತು ತೆಲುಗು ರಾಜ್ಯಗಳಲ್ಲಿ ಅದ್ದೂರಿಯಾಗಿ ತೆರೆಕಂಡಿರುವ ರಾಬರ್ಟ್ ಸಿನಿಮಾ ಮೊದಲ ದಿನ ಒಟ್ಟು 20 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿತ್ತು. ಸದ್ಯ ಕರ್ನಾಟಕದಲ್ಲಿ ರಾಬರ್ಟ್ 59.8 ಕೋಟಿ ರೂ. ಕಲೆಕ್ಷನ್ ಆಗಿದೆ ಎನ್ನುವ ವರದಿಯನ್ನ ಸಿನಿಮಾತಂಡ ನೀಡಿದೆ.
ರಾಬರ್ಟ್ 4ನೇ ದಿನದ ಕಲೆಕ್ಷನ್
ರಾಬರ್ಟ್ ಸಿನಿಮಾ 4ನೇ ದಿನವೂ ಭರ್ಜರಿ ಕಮಾಯಿ ಮಾಡಿದೆ. ಈಗಾಗಲೇ ಕೋಟಿ ಕೋಟಿ ಜೇಬಿಗಿಳಿಸಿರುವ ನಿರ್ಮಾಪಕರಿಗೆ 4ನೇ ದಿನದ ಗಳಿಕೆ ಸಹ ಸಂತಸ ನೀಡಿದೆ. ಕರ್ನಾಟಕದಲ್ಲಿ ಭಾನುವಾರ ರಾಬರ್ಟ್ ಗಳಿಸಿದ್ದು 15.68 ಕೋಟಿ ರೂ.

ಇದುವರೆಗೂ ಅಂದರೆ ರಿಲೀಸ್ ಆಗಿ 4 ದಿನಗಳಲ್ಲಿ ರಾಬರ್ಟ್ ಕರ್ನಾಟಕದಲ್ಲಿ ಒಟ್ಟು 59.8 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕನ್ನಡ ಸಿನಿಮಾವೊಂದು ಅದರಲ್ಲೂ ಕೊರೊನಾ ಬಳಿಕ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿರುವುದು ಸ್ಯಾಂಡಲ್ ವುಡ್‌ಗೆ ಹೆಮ್ಮೆಯ ವಿಚಾರವಾಗಿದೆ.

ಆಂಧ್ರ-ತೆಲಂಗಾಣದಲ್ಲಿ ರಾಬರ್ಟ್ ಗಳಿಸಿದ್ದೆಷ್ಟು?
ತೆಲುಗಿನಲ್ಲೂ ರಾಬರ್ಟ್ ಉತ್ತಮ ಕಮಾಯಿ ಮಾಡಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ರಾಬರ್ಟ್ 4ನೇ ದಿನ 6.17 ಕೋಟಿ ರೂ. ಕಲೆಕ್ಷನ್ ಮಾಡಿದೆ. ದರ್ಶನ್ ಸಿನಿಮಾ ಪರಭಾಷೆಯಲ್ಲಿ ಇಷ್ಟು ದೊಡ್ಡ ಮಟ್ಟದ ಗಳಿಕೆ ಕಂಡಿರುವುದು ಸಿನಿಮಾತಂಡಕ್ಕೆ ಸಂತಸ ತಂದಿದೆ. 5ನೇ ದಿನವೂ ರಾಬರ್ಟ್ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.


Click it and Unblock the Notifications