ಡಿ ಬಾಸ್ ಮನೆಯಲ್ಲಿ'ರಾಬರ್ಟ್' ಸೂತ್ರಧಾರನ ಬರ್ತಡೇ ಸಂಭ್ರಮ
ಸ್ಯಾಂಡಲ್ ವುಡ್ ನ ನಿರ್ದೇಶಕ ತರುಣ್ ಸುಧೀರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 'ರಾಬರ್ಟ್' ಸಿನಿಮಾ ಮೂಲಕ ಕನ್ನಡ ಸಿನಿಮಾಪ್ರಿಯರ ಗಮನ ಸೆಳೆಯುತ್ತಿರುವ ತರುಣ್ ಸುಧೀರ್ ಗೆ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ. ಡಿ ಬಾಸ್ ದರ್ಶನ್ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಮತ್ತು ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.
Recommended Video
ವಿಶೇಷ ಅಂದರೆ ತರುಣ್ ಸುಧೀರ್ ತನ್ನ ಹುಟ್ಟುಹಬ್ಬವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯಲ್ಲಿ ಆಚರಣೆ ಮಾಡಿಕೊಂಡಿದ್ದಾರೆ. ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಜೊತೆ ಮನೆಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬ ಆಚರಣೆಯ ಒಂದಿಷ್ಟು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮುಂದೆ ಓದಿ...

ದರ್ಶನ್ ಜೊತೆ ತರುಣ್ ಹುಟ್ಟುಹಬ್ಬ ಆಚರಣೆ
ದರ್ಶನ್ ಮತ್ತು ರಾಬರ್ಟ್ ನಿರ್ಮಾಪಕ ಉಮಾಪತಿ ಸೇರಿದಂತೆ ಕೆಲವರು ಮಾತ್ರ ತರುಣ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಕೇಕ್ ಕತ್ತರಿಸಿ ಖುಷಿ ಹಂಚಿಕೊಂಡಿದ್ದಾರೆ. ತರುಣ್ ಗೆ ನಟ ದರ್ಶನ್ ಕೇಕ್ ತಿನಿಸುತ್ತಿರುವ ಫೋಟೋಗಳು ವೈರಲ್ ಆಗಿವೆ. ಇನ್ನೂ ಇಂದು ತರುಣ್ ಹುಟ್ಟುಹಬ್ಬದ ಪ್ರಯುಕ್ತ ರಾಬರ್ಟ್ ಸಿನಿಮಾದ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ.

ತರುಣ್ ಸುದೀರ್ ಗೆ ದರ್ಶನ್ ವಿಶ್
ರಾಬರ್ಟ್ ಚಿತ್ರದ ಹೊಸ ಪೋಸ್ಟರ್ ಶೇರ್ ಮಾಡಿ ದರ್ಶನ್, "A Brother from another Mother ತರುಣನಿಗೆ ನಮ್ಮ ರಾಬರ್ಟ್ ತಂಡದಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಆಶಿಸುತ್ತೇನೆ ತರುಣ್ ಸುಧೀರ್, ನಿಮ್ಮ ದಾಸ ದರ್ಶನ್" ಎಂದು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.

ರಾಬರ್ಟ್ ರಿಲೀಸ್ ಯಾವಾಗ?
ಪೋಸ್ಟರ್ ನಲ್ಲಿ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗಲಿದೆ ಎನ್ನುವ ಸುಳಿವು ನೀಡಿದ್ದಾರೆ. ಆದರೆ ಈ ವರ್ಷ ಚಿತ್ರ ರಿಲೀಸ್ ಆಗುವುದು ಅನುಮಾನ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಕ್ಟೋಬರ್ 15ರ ನಂತರ ಚಿತ್ರಮಂದಿರ ತೆರೆಯಲು ಅನುಮತಿ ನೀಡಿದ್ದರೂ, ಸ್ಟಾರ್ ನಟರ ಚಿತ್ರಗಳು ರಿಲೀಸ್ ಆಗುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿರುವ ದರ್ಶನ್
ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ದರ್ಶನ್ ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಅವತಾರವೆತ್ತಿರುವ ಈ ಪೋಸ್ಟರ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ರಾಬರ್ಟ್ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ನಟ ಜಗಪತಿ ಬಾಬು ವಿಲನ್ ಆಗಿ ಅಭಿನಯಿಸಿದ್ದಾರೆ. ಇನ್ನು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದಾರೆ.


Click it and Unblock the Notifications











