'3 ಪಾಯಿಂಟ್ ಹೇಳಿದ್ರೆ ಮಂಡ್ಯಗಿಂತ ವೈಬ್ರೆಷನ್ ಜಾಸ್ತಿ ಆಗುತ್ತೆ'
''ನನ್ನ ಸ್ನೇಹಿತರ ಕಡೆಯಿಂದ ನನಗೆ ಎಲ್ಲವೂ ಕ್ಲಿಯರ್ ಆಗಿದೆ, ಇನ್ನೇನಿದ್ರೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರಿಂದ ಸ್ಪಷ್ಟವಾಗಬೇಕಿದೆ'' ಎಂದು ನಟ ದರ್ಶನ್ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಇದಕ್ಕೆ ಪ್ರತಿಯಾಗಿ ಪ್ರೆಸ್‌ಮೀಟ್ ಮಾಡಿದ ಉಮಾಪತಿ ಶ್ರೀನಿವಾಸ್ ಗೌಡ, ''ದರ್ಶನ್ ಅವರು ನನ್ನನ್ನು ಆರೋಪಿಯನ್ನಾಗಿ ಮಾಡಿಲ್ಲ, ನಿರ್ಮಾಪಕರ ಅಂಗಳದಲ್ಲಿ ಬಾಲ್ ಇದೆ, ಉಮಾಪತಿ ಬಕ್ರಾ ಆದ್ರಾ, ಅದನ್ನು ಅವರೇ ಸ್ಪಷ್ಟಪಡಿಸಬೇಕು ಅಂತ ಹೇಳಿದ್ದಾರೆ'' ಎಂದರು.
ಈ ನಡುವೆ ಮಾತು ಮುಂದುವರಿಸಿದ ಉಮಾಪತಿ, ''ಇನ್ನು ಮೂರು ಪಾಯಿಂಟ್ ಇದೆ, ಒಂದು ವೇಳೆ ನಾನು ಇದನ್ನು ಹೇಳಿದ್ರೆ ಮಂಡ್ಯಗಿಂತ ಜಾಸ್ತಿ ವೈಬ್ರೆಷನ್ ಆಗುತ್ತೆ, ಬೇಡ ಬಿಡಿ'' ಎನ್ನುವ ಮೂಲಕ ಈ ಪ್ರಕರಣದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದರು.

''ಹರ್ಷಾ ಲೋನ್ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೆ ಉಮಾಪತಿ ಮತ್ತು ದರ್ಶನ್ ಅವರು ಶ್ಯೂರಿಟಿ ಹಾಕುತ್ತಿದ್ದಾರೆ. ಇಷ್ಟೇ ವಿಷಯ. ಆದರೆ, ನಮ್ಮ ಅರಿವಿಗೆ ಬಾರದೇ ಶ್ಯೂರಿಟಿ ಪ್ಲಾನ್ ಆಗಿದ್ದು ಹೇಗೆ ಎನ್ನುವುದೇ ಈಗ ಪ್ರಶ್ನೆಯಾಗಿದೆ'' ಎಂದು ಅನುಮಾನ ವ್ಯಕ್ತಪಡಿಸಿದರು.
ಅರುಣಾ ಕುಮಾರಿ ಸಂಬಂಧ ಬೆಂಗಳೂರಿನ ಜಯನಗರದಲ್ಲಿ ಹಾಗೂ ಮೈಸೂರಿನಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಸತ್ಯ ಹೊರಗೆ ಬರಲಿದೆ. ಅದುವರೆಗೂ ಕಾಯೋಣ ಎಂದು ಉಮಾಪತಿ ಪ್ರೆಸ್‌ಮೀಟ್ ಹೇಳಿದರು.
ಅರುಣಾ ಕುಮಾರಿ ಬಗ್ಗೆ ಮಾತಾನಾಡಿದ ದರ್ಶನ್, ''ಉಮಾಪತಿ ಅವರಿಂದಲೇ ನನಗೆ ಅರುಣಾ ಕುಮಾರಿ ಪರಿಚಯ ಆಗಿದ್ದು, ಲೋನ್ ಮಾಡಿಸುವುದು, ಶ್ಯೂರಿಟಿಗಾಗಿ ಪ್ರಾಪರ್ಟಿ ಪರಿಶೀಲನೆಗೆ ಬರುವುದು ಎಲ್ಲವೂ ತಿಳಿದ ಮೇಲೆ ನಾನು ಸ್ನೇಹಿತರನ್ನು ವಿಚಾರಿಸಿದೆ. ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ರು ನಾನು ಸುಮ್ಮನೆ ಬಿಡುವುದಿಲ್ಲ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ'' ಎಂದಿದ್ದಾರೆ.


Click it and Unblock the Notifications











