ಕಾರ್ಮಿಕರ ದಿನಾಚರಣೆಗೆ ದರ್ಶನ್ ವಿಶ್: ಕ್ಯಾಮೆರಾ ಹಿಂದಿನ ಹೀರೋಗಳಿಗೆ 'ರಾಬರ್ಟ್'ತಂಡ ಗೌರವ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾದಿಂದ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಸಿಕ್ಕಿದೆ. ಕಾರ್ಮಿಕರ ದಿನಾಚರಣೆಯ ಅಂಗವಾಗಿ ರಾಬರ್ಟ್ ಟೀಂ ಚಿತ್ರದ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಿ ಕಾರ್ಮಿಕರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.

ಸಿನಿರಂಗದಲ್ಲಿ ಕ್ಯಾಮರಾ ಹಿಂದೆ ಕೆಲಸ ಮಾಡುವ ಕಾರ್ಮಿಕರಿಗೆ ಚಿತ್ರತಂಡ ಈ ವಿಡಿಯೋ ಅರ್ಪಣೆ ಮಾಡಿದೆ. ದೇಶದ ವಿವಿದ ಭಾಗಗಳಲ್ಲಿ ಚಿತ್ರೀಕರಿಸಲಾದ ರಾಬರ್ಟ್ ಮೇಕಿಂಗ್ ವಿಡಿಯೋ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಮೇ 1ಕ್ಕೆ ರಿಲೀಸ್ ಆಗಬೇಕಿತ್ತು ರಾಬರ್ಟ್

ಮೇ 1ಕ್ಕೆ ರಿಲೀಸ್ ಆಗಬೇಕಿತ್ತು ರಾಬರ್ಟ್

ಎಲ್ಲವೂ ಅಂದುಕೊಂಡಂತ್ತೆ ಆಗಿದ್ದರೆ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಇಂದು ತೆರೆಗೆ ಬರಬೇಕಿತ್ತು. ಹೌದು, ರಾಬರ್ಟ್ ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರಲು ಸಜ್ಜಾಗಿತ್ತು, ಆದರೆ ಲಾಕ್ ಡೌನ್ ಕಾರಣ ಸಿನಿಮಾ ರಿಲೀಸ್ ಮೇ 1ಕ್ಕೆ ಎಂದು ಹೇಳಲಾಗುತ್ತಿತ್ತು. ಆದರೀಗ ಲಾಕ್ ಡೌನ್ ಮುಂದುವರೆದ ಪರಿಣಾಮ ಮೇ 1ಕ್ಕೂ ಸಿನಿಮಾ ರಿಲೀಸ್ ಆಗುತ್ತಿಲ್ಲ.

ಸಿನಿಮಾ ಬದಲು ಮೇಕಿಂಗ್ ವಿಡಿಯೋ ರಿಲೀಸ್

ಸಿನಿಮಾ ಬದಲು ಮೇಕಿಂಗ್ ವಿಡಿಯೋ ರಿಲೀಸ್

ಕಾರ್ಮಿಕರ ದಿನಾಚರಣೆ ಅಂಗವಾಗಿ ರಾಬರ್ಟ್ ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಮಾಡುವ ಮೂಲಕ ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರು ಸೇರಿದಂತೆ ಸಿನಿಮಗಾಗಿ ದುಡಿದ ಪ್ರತಿಯೊಬ್ಬ ಕಾರ್ಮಿಕರಿಗೂ ಈ ವಿಡಿಯೋ ಅರ್ಪಣೆ ಮಾಡಿದೆ ಸಿನಿಮಾತಂಡ. ಸಿನಿಮಾಗಾಗಿ ಕಾದುಕುಳಿತಿದ್ದ ಅಭಿಮಾನಿಗಳಿಗೆ ಈ ಮೇಕಿಂಗ್ ವಿಡಿಯೋ ಕೊಂಚ ನೆಮ್ಮದಿ ನೀಡಿದೆ.

ಬೆಳ್ಳಿ ಪರದೆ ಹಿಂದಿನ ನಿಜವಾದ ಮಿಂಚು ಕಾರ್ಮಿಕರು

ಬೆಳ್ಳಿ ಪರದೆ ಹಿಂದಿನ ನಿಜವಾದ ಮಿಂಚು ಕಾರ್ಮಿಕರು

"ನಮ್ಮ ಕನಸು ಸಾಕಾರಗೊಳಿಸುವ ನಿಜವಾದ ನಾಯಕರು ಬೆಳ್ಳಿ ಪರದೆ ಹಿಂದಿನ ನಿಜವಾದ ಮಿಂಚು. ರಾಬರ್ಟ್ ಚಿತ್ರತಂಡದ ತಾಂತ್ರಿಕ ವರ್ಗಕ್ಕೆ ಕಾರ್ಮಿಕರ ದಿನದ ಶುಭಾಯಗಳು" ಅಂತ ಮೇಕಿಂಗ್ ವಿಡಿಯೋದ ಕೊನೆಯಲ್ಲಿ ಶುಭಾಶಯ ತಿಳಿಸಿದೆ.

ಕಾರ್ಮಿಕರಿಗೆ ಶುಭಾಶಯ ತಿಳಿಸಿದ ದರ್ಶನ್

ಕಾರ್ಮಿಕರಿಗೆ ಶುಭಾಶಯ ತಿಳಿಸಿದ ದರ್ಶನ್

"ಸರ್ವರಿಗೂ ಕಾರ್ಮಿಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು. ಕ್ಯಾಮೆರಾ ಹಿಂದೆ ಕೆಲಸ ಮಾಡುವ ಕಾಣದ ಕೈಗಳಿಗೆ ಈ ನಮ್ಮ ರಾಬರ್ಟ್ ಚಿತ್ರದ ಮೇಕಿಂಗ್ ವಿಡಿಯೋ ಅರ್ಪಣೆ" ಎಂದು ದುಡಿಯುವ ಕಾರ್ಮಿಕರಿಗೆ ಶುಭಾಶಯ ತಿಳಿಸಿದ್ದಾರೆ.

ಅಭಿಮಾನಿಗಳ ಮೆಚ್ಚುಗೆ

ಅಭಿಮಾನಿಗಳ ಮೆಚ್ಚುಗೆ

ನಿರ್ಮಾಪಕ ಉಮಾಪತಿ ಅವರ ಉಮಾಪತಿ ಫಿಲ್ಮ್ ಯೂ ಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಿದ್ದು, ವಿಡಿಯೋ ನೋಡಿ ದರ್ಶನ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಬರ್ಟ್ ಮೇಕಿಂಗ್ ವಿಡಿಯೋವನ್ನು ಟ್ರೆಂಡ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಶೇರ್ ಮತ್ತು ಲೈಕ್ಸ್ ಪಡೆದು ರಾಬರ್ಟ್ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಮಾಡಿದೆ.

More from Filmibeat

English summary
Roberrt Kannada film Making video released for Labours day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X