For Quick Alerts
  ALLOW NOTIFICATIONS  
  For Daily Alerts

  ತರುಣ್ ಸುಧೀರ್ ಗೆ ವಿಶ್ ಮಾಡಿ 'ರಾಬರ್ಟ್' ಸಿನಿಮಾದ ಹೊಸ ಪೋಸ್ಟರ್ ಶೇರ್ ಮಾಡಿದ ದರ್ಶನ್

  |

  ಡಿ ಬಾಸ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ ತಿಂಗಳಲ್ಲೇ ರಾಬರ್ಟ್ ಬಿಡುಗಡೆಯಾಗಬೇಕಿತ್ತು. ಆದ್ರೆ, ಕೊರೊನಾ ಲಾಕ್‌ಡೌನ್ ನಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ.

  3 ಅವತಾರವೆತ್ತಿದ ಡಿ ಬಾಸ್ ದರ್ಶನ್ | Roberrt Poster | Filmibeat Kannada

  ಅಕ್ಟೋಬರ್ 15ರ ನಂತರ ಚಿತ್ರಮಂದಿರ ತೆರೆಯಲು ಅನುಮತಿ ನೀಡಿದ್ದರೂ, ಸ್ಟಾರ್ ನಟರ ಚಿತ್ರಗಳು ರಿಲೀಸ್ ಆಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಾಡುಗಳ ಮೂಲಕ ಬಹಳ ಹೈಪ್ ಕ್ರಿಯೇಟ್ ಮಾಡಿರುವ ರಾಬರ್ಟ್ ಇದೀಗ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ನೀಡಿದೆ.

  ರಾಬರ್ಟ್ ಟೀಸರ್ 50 ಲಕ್ಷ ವೀಕ್ಷಣೆ: ಧನ್ಯವಾದ ಹೇಳಿದ ನಟ ದರ್ಶನ್ರಾಬರ್ಟ್ ಟೀಸರ್ 50 ಲಕ್ಷ ವೀಕ್ಷಣೆ: ಧನ್ಯವಾದ ಹೇಳಿದ ನಟ ದರ್ಶನ್

  ಹೌದು ಇಂದು ರಾಬರ್ಟ್ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ನಿರ್ದೇಶಕ ತರುಣ್ ಸುಧೀರ್ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಈ ಬಗ್ಗೆ ಅಕ್ಟೋಬರ್ 8ರಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಇವತ್ತು 10 ಗಂಟೆಗೆ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ.

  ಕುತೂಹಲ ಮೂಡಿಸುವ ಪೋಸ್ಟರ್ ನಲ್ಲಿ ದರ್ಶನ್ ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಅವತಾರವೆತ್ತಿರುವ ಈ ಪೋಸ್ಟರ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪೋಸ್ಟರ್ ನಲ್ಲಿ ಸದ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡುವುದಾಗಿ ಹೇಳಿದ್ದಾರೆ. ಆದರೆ ರಾಬರ್ಟ್ ಸಿನಿಮಾ ಈ ವರ್ಷ ತೆರೆಗೆ ಬರುವುದು ಅನುಮಾನವಾಗಿದೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವಿಟ್ಟ ರ್ ನಲ್ಲಿ ಈ ಪೋಸ್ಟರ್ ಅನ್ನು ಶೇರ್ ಮಾಡಿ "A Brother from another Mother ತರುಣನಿಗೆ ನಮ್ಮ ರಾಬರ್ಟ್ ತಂಡದಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಆಶಿಸುತ್ತೇನೆ ತರುಣ್ ಸುಧೀರ್, ನಿಮ್ಮ ದಾಸ ದರ್ಶನ್" ಎಂದು ತರಣ್ ಸುಧೀರ್ ಗೆ ವಿಶ್ ಮಾಡಿದ್ದಾರೆ.

  ರಾಬರ್ಟ್ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ನಟ ಜಗಪತಿ ಬಾಬು ವಿಲನ್ ಆಗಿ ಅಭಿನಯಿಸಿದ್ದಾರೆ. ಇನ್ನು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದಾರೆ.

  English summary
  Darshan starrer Roberrt Movie New Poster Released on the occasion of Director Tharun Sudhir Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X