'ರಾಬರ್ಟ್' ಪ್ರದರ್ಶನಕ್ಕೂ ಮುಂಚೆ ಚಿತ್ರಮಂದಿರದಲ್ಲಿ ಸಿನಿಮಾತಂಡದಿಂದ ವಿಶೇಷ ಪೂಜೆ

ಡಿ ಬಾಸ್ ದರ್ಶನ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ರಾಬರ್ಟ್ ಹಬ್ಬಕ್ಕಾಗಿ ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಆ ಕ್ಷಣ ಬಂದೇ ಬಿಟ್ಟಿದೆ. ಈಗ ಎಲ್ಲಿ ನೋಡಿದ್ರು ದರ್ಶನ್ ರಾಬರ್ಟ್ ಸಿನಿಮಾದೆ ಹವಾ.

Recommended Video

ರಾಬರ್ಟ್ ಪ್ರದರ್ಶನಕ್ಕೂ ಮುನ್ನ ದೇವರ ಮೊರೆ ಹೋದ ಸಿನಿಮಾ ತಂಡ | Roberrt Team | Darshan | Tharun Sudhir

ಚಿತ್ರಮಂದಿರಗಳ ತುಂಬಾ ಪೋಸ್ಟರ್, ಬ್ಯಾನರ್, ಕಟೌಟ್ ಗಳೇ ರಾರಾಜಿಸುತ್ತಿವೆ. ಇಂದು (ಮಾರ್ಚ್ 11) ಬೆಳ್ಳಂಬೆಳಗ್ಗೆ ರಾಬರ್ಟ್ ಪ್ರದರ್ಶನ ಆರಂಭವಾಗಿದ್ದು, ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ. ಅಂದಹಾಗೆ ಸಿನಿಮಾ ಪ್ರಾರಂಭವಾಗುವ ಮೊದಲು ಸಿನಿಮಾತಂಡ ವಿಶೇಷ ಪೂಜೆಯನ್ನು ಸಲ್ಲಿಸಿದೆ.

ನಿರ್ದೇಶಕ ತರುಣ್ ಸುಧೀರ್, ನಾಯಕಿ ಆಶಾ ಭಟ್ ಸೇರಿದಂತೆ ಇಡೀ ಚಿತ್ರತಂಡ ಚಿತ್ರಮಂದಿರದ ಒಳಗೆ ವಿಶೇಷ ಪೂಜೆ ಮಾಡುವ ಮೂಲಕ ರಾಬರ್ಟ್ ಸಿನಿಮಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಿವರಾತ್ರಿ ಹಬ್ಬದ ದಿನ, ವಿಶೇಷ ಪೂಜೆ ಮೂಲಕ ಪ್ರದರ್ಶನ ಪ್ರಾರಂಭಿಸಿದ ರಾಬರ್ಟ್ ಸಿನಿಮಾಗೆ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವುದು ಸದ್ಯದ ಕುತೂಹಲ.

Roberrt movie team perform special pooja in theatre

ಈಗಾಗಲೇ ಬಹುತೇಕ ಚಿತ್ರಮಂದಿರಗಳಲ್ಲಿ ಬೆಳಗ್ಗೆಯಿಂದನೇ ಮೊದಲ ಪ್ರದರ್ಶನ ಪ್ರಾರಂಭವಾಗಿದ್ದು, ಪ್ರತಿಕ್ರಿಯೆ ಹೇಗಿರಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಕನ್ನಡ ಅಭಿಮಾನಿಗಳು ಮಾತ್ರವಲ್ಲದೇ ತೆಲುಗು ಅಭಿಮಾನಿಗಳು ಸಹ ರಾಬರ್ಟ್ ಕಣ್ತುಂಬಿಕೊಳ್ಳುತ್ತಿದ್ದಾರೆ.

ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ದರ್ಶನ್ ಸಿನಿಮಾ ಪರಭಾಷೆಯಲ್ಲಿ ತೆರೆಗೆ ಬರುತ್ತಿದೆ. ಹಾಗಾಗಿ ತೆಲುಗು ಅಭಿಮಾನಿಗಳು ಕನ್ನಡ ರಾಬರ್ಟ್ ಅನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂದು ಕಾದು ನೋಡಬೇಕು.

More from Filmibeat

English summary
Roberrt movie team perform special pooja in theatre. Darshan starrer Roberrt movie release in Karnataka and Andhra Pradesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X