twitter
    For Quick Alerts
    ALLOW NOTIFICATIONS  
    For Daily Alerts

    ವಿಶೇಷ ಭಾನುವಾರ: ಮನೋರಂಜನಾ ಲೋಕದಲ್ಲಿ 'ಮದ-ಗಜ'ಗಳ ಕಾದಾಟ

    By ಫಿಲ್ಮಿಬೀಟ್ ಡೆಸ್ಕ್
    |

    ಮನರಂಜನಾ ಲೋಕದಲ್ಲಿ ಈ ಭಾನುವಾರ ಹಬ್ಬದ ವಾತಾವರಣ ಉಂಟಾಗಿದೆ. ಕನ್ನಡದ ಟಾಪ್ ಇಬ್ಬರು ನಟರು ಕನ್ನಡ ಕಲಾಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಒಂದು ಕಡೆ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಟ ದರ್ಶನ್ 'ರಾಬರ್ಟ್' ಆಗಿ ಅಬ್ಬರಿಸುತ್ತಿದ್ದಾರೆ. ಈ ಕಡೆ ಬಿಡದಿಯ ಇನ್ನೋವೆಟಿವ್ ಫಿಲಂ ಸಿಟಿಯಲ್ಲಿ 'ಬಿಗ್ ಬಾಸ್' ಸುದೀಪ್ ಜಬರ್‌ದಸ್ತ್ ಎಂಟ್ರಿ ಕೊಡಲಿದ್ದಾರೆ.

    ಮನರಂಜನೆ ದೃಷ್ಟಿಯಿಂದ ಈ ಎರಡು ಕಾರ್ಯಕ್ರಮಗಳು ಭಾನುವಾರದ ಬಾಡೂಟ. ಇನ್ನೊಂದು ಆಯಾಮದಲ್ಲಿ ಗಮನಿಸಿದರೆ ಇದು 'ಮದ-ಗಜ' ಕಾದಾಟವಿದ್ದಂತಿದೆ. ಸ್ಯಾಂಡಲ್‌ವುಡ್‌ನ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ನಾವಾ-ನೀವಾ ಎಂದು ಜಿದ್ದಾಜಿದ್ದಿಗೆ ಬಿದ್ದಂತಿದೆ. ರಾಬರ್ಟ್ ಪ್ರಿ-ರಿಲೀಸ್ ಕಾರ್ಯಕ್ರಮ ಹಾಗೂ ಬಿಗ್ ಬಾಸ್ ಓಪನಿಂಗ್ ಕಾರ್ಯಕ್ರಮ ಒಂದೇ ದಿನಕ್ಕೆ ನಿಗದಿಯಾಗಿರುವುದು ಕಾಕತಾಳೀಯವೋ ಅಥವಾ ಉದ್ದೇಶಿತವೂ ಎಂಬ ಅನಿರೀಕ್ಷಿತ ಚರ್ಚೆಯೂ ಸೋಶಿಯಲ್ ಮೀಡಿಯಾದಲ್ಲಿ ಕಾಣುತ್ತಿದೆ.

    ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಯ ವಿಶೇಷತೆಗಳೇನು?ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಯ ವಿಶೇಷತೆಗಳೇನು?

    ಸುದೀಪ್ ಮತ್ತು ದರ್ಶನ್ ಸ್ನೇಹದಲ್ಲಿ ಅಂತರ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರ ಅಭಿಮಾನಿಗಳು ಅದೇ ಅಂತರ ಕಾಯ್ದುಕೊಂಡಿದ್ದಾರೆ. ಹೀಗಿರುವಾಗ, ಒಂದೇ ದಿನ ಈ ಎರಡು ಶೋ ಆಯೋಜನೆಯಾಗಿದ್ದಾದರೂ ಹೇಗೆ, ಈ ನಿರ್ಧಾರದ ಹಿಂದಿನ ಅಸಲಿ ಕಾರಣ ಏನಿರಬಹುದು ಎಂಬ ಕುತೂಹಲ ಕಾಡ್ತಿದೆ...

    ಭಾನುವಾರ ಸಂಜೆ ಬಿಗ್ ಬಾಸ್ ಓಪನಿಂಗ್

    ಭಾನುವಾರ ಸಂಜೆ ಬಿಗ್ ಬಾಸ್ ಓಪನಿಂಗ್

    ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಫೆಬ್ರವರಿ 28 ರಂದು ಭಾನುವಾರ ಅದ್ಧೂರಿಯಾಗಿ ಆರಂಭವಾಗಲಿದೆ ಎನ್ನುವುದು ಬಹಳ ದಿನದಿಂದಲೂ ಚರ್ಚೆಯಲ್ಲಿತ್ತು. ಭಾನುವಾರ ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಶುರುವಾದರೇ ರಾತ್ರಿ 1೦ ಗಂಟೆ ಅಥವಾ 11 ಗಂಟೆಯವರೆಗೂ ಟಿವಿಯಲ್ಲಿ ಪ್ರಸಾರವಾಗಲಿದೆ. ಕಿರುತೆರೆ ಇತಿಹಾಸ ನೋಡಿದ್ರೆ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಎಪಿಸೋಡ್‌ಗೆ ಅತಿ ಹೆಚ್ಚು ವೀಕ್ಷಕರಿದ್ದಾರೆ.

    ಹುಬ್ಬಳಿಯಲ್ಲಿ ರಾಬರ್ಟ್ ಕಾರ್ಯಕ್ರಮ

    ಹುಬ್ಬಳಿಯಲ್ಲಿ ರಾಬರ್ಟ್ ಕಾರ್ಯಕ್ರಮ

    ಬಿಗ್ ಬಾಸ್ ಆರಂಭದ ದಿನವೇ ದರ್ಶನ್ ನಟನೆಯ ರಾಬರ್ಟ್ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಎಂದು ಪ್ರಕಟವಾಯಿತು. ಈ ಮೂಲಕ ಫೆಬ್ರವರಿ 28ರ ಭಾನುವಾರ ಸಂಜೆ ಮನರಂಜನಾ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ಎನ್ನುವುದು ಖಾತ್ರಿಯಾಯಿತು. ಆದರೆ, ಇಬ್ಬರು ಸ್ಟಾರ್ ನಟರ ಕಾರ್ಯಕ್ರಮ ಒಂದೇ ದಿನ ಏಕೆ ಎಂಬ ಪ್ರಶ್ನೆಯೂ ಬಿಸಿಬಿಸಿಯಾಗಿ ಚರ್ಚೆಯಲ್ಲಿದೆ.

    ಹುಬ್ಬಳ್ಳಿಯಲ್ಲಿ ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು, ಪೊಲೀಸರಿಂದ ಲಾಠಿಚಾರ್ಜ್ಹುಬ್ಬಳ್ಳಿಯಲ್ಲಿ ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು, ಪೊಲೀಸರಿಂದ ಲಾಠಿಚಾರ್ಜ್

    ಯಾರ ಕಡೆ ಪ್ರೇಕ್ಷಕರ ನಡೆ?

    ಯಾರ ಕಡೆ ಪ್ರೇಕ್ಷಕರ ನಡೆ?

    ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಓಪನಿಂಗ್ ಪ್ರಸಾರವಾಗಲಿದೆ. ರಾಬರ್ಟ್ ಪ್ರಿ-ರಿಲೀಸ್ ಕಾರ್ಯಕ್ರಮ ಶ್ರೇಯಸ್ ಮಿಡಿಯಾ ಡಿಜಿಟಲ್ ವೇದಿಕೆ (ಯ್ಯೂಟ್ಯೂಬ್) ಹಾಗೂ ಸಾಮಾಜಿಕ ಜಾಲತಾಣದಲ್ಲಿ ನೋಡಲು ಲಭ್ಯವಾಗಿರುತ್ತದೆ. ಬಹುತೇಕ ಒಂದೇ ಸಮಯದಲ್ಲಿ ಹುಬ್ಬಳ್ಳಿ ಡಿ ಬಾಸ್, ಬಿಡದಿಯಲ್ಲಿ ಕಿಚ್ಚ ದರ್ಬಾರ್ ಮಾಡಲಿದ್ದಾರೆ.

    6 ಗಂಟೆಗೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'

    6 ಗಂಟೆಗೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'

    ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಆರಂಭ, ರಾಬರ್ಟ್ ಪ್ರೀ-ರಿಲೀಸ್ ಕಾರ್ಯಕ್ರಮದ ನಡುವೆ ಜೀ ಕನ್ನಡದಲ್ಲಿ ಪ್ರಸಾರವಾಗುವ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋ ಈ ವಾರ ಸ್ವಲ್ಪಮಟ್ಟಿಗೆ ಗಲಿಬಿಲಿಗೊಂಡಂತಿದೆ. ಸಂಜೆ 6 ಗಂಟೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳು ಮಹಾಸಂಗಮ ವಿಶೇಷ ಸಂಚಿಕೆ ಶೋ ಪ್ರಸಾರವಾಗಲಿದ್ದು, ಇಬ್ಬರು ಸ್ಟಾರ್ ನಟರ ಅಬ್ಬರದ ನಡುವೆ ಈ ಕಾರ್ಯಕ್ರಮ ವೀಕ್ಷಕರನ್ನು ಉಳಿಸಕೊಳ್ಳಬೇಕಿದೆ.

    Recommended Video

    ಉ.ಕರ್ನಾಟಕದ ಜನ ಮಾಡಿದ ಸಹಾಯ ನೆನಪಿಸಿಕೊಂಡ ಡಿ ಬಾಸ್ | Roberrt Pre Release Event Hubli | Filmibeat Kannada

    English summary
    Super Sunday: Roberrt Pre Release Event held on Hubli today and Bigg Boss Kannada 8 starts from today onwards.
    Sunday, February 28, 2021, 11:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X