ರಾಬರ್ಟ್ ಚಿತ್ರತಂಡದಿಂದ ಆಶಾ ಭಟ್‌ಗೆ ಭರ್ಜರಿ ಉಡುಗೊರೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ರಾಬರ್ಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡುತ್ತಿರುವ ನಟಿ ಆಶಾ ಭಟ್‌ಗೆ ಚಿತ್ರತಂಡ ಭರ್ಜರಿ ಉಡುಗೊರೆ ನೀಡಲು ಯೋಜಿಸಿದೆ.

Recommended Video

Sanjjanaa Galrani ಮಾಧ್ಯಮದವರ ಮೇಲೆ ಗರಂ ಆಗಿದ್ದೇಕೆ ? | Filmibeat Kannada

ಮೂಲತಃ ಕನ್ನಡದ ಹುಡುಗಿಯೇ ಆಗಿದ್ದರೂ ಮಾಡಲಿಂಗ್ ಹಾಗೂ ಬಾಲಿವುಡ್ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಆಶಾ ಭಟ್, ಇದೇ ಮೊದಲ ಸ್ಯಾಂಡಲ್‌ವುಡ್ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಡಿ ಬಾಸ್ ಗೆ ನಾಯಕಿಯಾಗಿರುವ ಆಶಾ ಭಟ್ ಪಾತ್ರದ ಬಗ್ಗೆ ಪ್ರೇಕ್ಷಕರಿಗೆ ಹೆಚ್ಚು ನಿರೀಕ್ಷೆ ಇದೆ. ಇದುವರೆಗೂ ಅಂತಹ ಮಾಹಿತಿ ಏನೂ ಹೊರಬಿದ್ದಿಲ್ಲ. ಇದೀಗ, ಸೆಪ್ಟೆಂಬರ್ 5 ರಂದು ನಿರ್ದೇಶಕ ತರುಣ್ ಸುಧೀರ್ ವಿಶೇಷವಾದ ಉಡುಗೊರೆ ನೀಡುತ್ತಿದ್ದಾರೆ. ಮುಂದೆ ಓದಿ...

ಬರ್ತಡೇ ಗಿಫ್ಟ್

ಬರ್ತಡೇ ಗಿಫ್ಟ್

ಸೆಪ್ಟೆಂಬರ್ 5 ರಂದು ನಟಿ ಆಶಾ ಭಟ್ ಅವರ ಹುಟ್ಟುಹಬ್ಬ. ಬರ್ತಡೇ ವಿಶೇಷವಾಗಿ ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಆಶಾ ಭಟ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ಅವರೇ ಮಾಹಿತಿ ನೀಡಿದ್ದಾರೆ.

ಕಾಯುತ್ತಿರುವ ಆಶಾ ಭಟ್

ಕಾಯುತ್ತಿರುವ ಆಶಾ ಭಟ್

ತರುಣ್ ಸುಧೀರ್ ಕಡೆಯಿಂದ ಇಂತಹದೊಂದು ಸುದ್ದಿ ಹೊರಬೀಳುತ್ತಿದ್ದಂತೆ ಆಶಾ ಭಟ್ ಬಹಳ ಎಕ್ಸೈಟ್ ಆಗಿದ್ದಾರೆ. ಮತ್ತು ಕಾತುರದಿಂದ ಕಾಯುತ್ತಿರುವೆ ಎಂದು ಹೇಳಿದ್ದಾರೆ. ''ನನ್ನ ಸಂತೋಷ ಮತ್ತು ಕೃತಜ್ಞತೆ ಹೇಳಲು ಪದಗಳು ಸಾಲುತ್ತಿಲ್ಲ. ನನಗೂ ಇದು ಬಹಳ ಸರ್ಪ್ರೈಸ್'' ಎಂದು ಆಶಾ ಭಟ್ ಸಹ ಟ್ವೀಟ್ ಮಾಡಿದ್ದಾರೆ.

ಆಶಾ ಭಟ್ ಮೊದಲ ಚಿತ್ರ

ಆಶಾ ಭಟ್ ಮೊದಲ ಚಿತ್ರ

ಬಾಲಿವುಡ್‌ನ ಜಂಗ್ಲಿ ಚಿತ್ರದ ನಾಯಕಿಯಾಗಿ ನಟಿಸಿರುವ ಆಶಾ ಭಟ್, ದೋಸ್ತಾನ 2 ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈ ಕಡೆ ರಾಬರ್ಟ್ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ. 2014ರ ಮಿಸ್ ಸುಪ್ರಾನ್ಯಾಷನಲ್ ಪ್ರಶಸ್ತಿ ಗೆದ್ದಿದ್ದಾರೆ.

ರಾಬರ್ಟ್ ಯಾವಾಗ?

ರಾಬರ್ಟ್ ಯಾವಾಗ?

ದರ್ಶನ್ ನಾಯಕನಾಗಿ ಅಭಿನಯಿಸಿರುವ 'ರಾಬರ್ಟ್' ಸಂಪೂರ್ಣವಾಗಿ ಶೂಟಿಂಗ್ ಮುಗಿಸಿದೆ. ಕೊರೊನಾ ವೈರಸ್ ಭೀತಿ ಇಲ್ಲದೇ ಲಾಕ್‌ಡೌನ್ ಆಗಿಲ್ಲ ಅಂದಿದ್ದರೆ ಏಪ್ರಿಲ್ ತಿಂಗಳಲ್ಲೇ ಸಿನಿಮಾ ಬಿಡುಗಡೆಯಾಗುತ್ತಿತ್ತು. ಆದ್ರೀಗ, ಪರಿಸ್ಥಿತಿ ಬೇರೆ ಇದೆ. ಇನ್ನು ಚಿತ್ರಮಂದಿರ ತೆರೆಯಲು ಸರ್ಕಾರ ಅನುಮತಿ ನೀಡಿಲ್ಲ.

More from Filmibeat

English summary
Roberrt's Leading Lady Asha Bhat's First look poster will release on tomorrow (September 5th) at 10am.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X