For Quick Alerts
  ALLOW NOTIFICATIONS  
  For Daily Alerts

  ಸಂಕ್ರಾಂತಿಗೆ ರಾಬರ್ಟ್ ಚಿತ್ರತಂಡದಿಂದ ಬಂಪರ್: ಡಿ ಬಾಸ್ ಫ್ಯಾನ್ಸ್ ಸಂಭ್ರಮ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಚಿತ್ರೀಕರಣ ಹಂತದಲ್ಲೇ ಭಾರಿ ಚರ್ಚೆಗೆ ಕಾರಣವಾಗಿರುವ ರಾಬರ್ಟ್ ಕ್ರಿಸ್ಮಸ್ ಹಬ್ಬಕ್ಕೆ ಮೊದಲ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದರು.

  'ರಾಬರ್ಟ್' ಫಸ್ಟ್ ಲುಕ್ ಆರ್ಭಟ: ಇಲ್ಲೂ ಇದೆ ಆ 'ಸಾಮಾನ್ಯ ಅಂಶ''ರಾಬರ್ಟ್' ಫಸ್ಟ್ ಲುಕ್ ಆರ್ಭಟ: ಇಲ್ಲೂ ಇದೆ ಆ 'ಸಾಮಾನ್ಯ ಅಂಶ'

  ಸಿನಿಮಾದಲ್ಲಿ ಡಿ ಬಾಸ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಅಧಿಕೃತವಾಗಿ ಬಹಿರಂಗಪಡಿಸಿದ್ದರು. ಅದಾದ ಬಳಿಕ ಹೊಸ ವರ್ಷಕ್ಕೆ ರಾಬರ್ಟ್ ಚಿತ್ರದ ಮತ್ತೊಂದು ಹೊಸ ಫೋಟೋ ಹೊರಬಿದ್ದಿತ್ತು. ಮುಂದೆ ರಾಬರ್ಟ್ ಟೀಸರ್ ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಈಗ ನಿರ್ದೇಶಕ ತರುಣ್ ಸುಧೀರ್ ಸರ್ಪ್ರೈಸ್ ನೀಡಿದ್ದಾರೆ. ಏನದು? ಮುಂದೆ ಓದಿ...

  ಸೆಕೆಂಡ್ ಪೋಸ್ಟರ್

  ಸೆಕೆಂಡ್ ಪೋಸ್ಟರ್

  ಕ್ರಿಸ್ಮಸ್ ಹಬ್ಬಕ್ಕೆ ಮೊದಲ ಲುಕ್ ನ ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಸಿನಿರಸಿಕರ ನಾಡಿಮಿಡಿತ ಹೆಚ್ಚಿಸಿದ್ದ ನಿರ್ದೇಶಕ ತರುಣ್, ಈಗ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಡಿ ಬಾಸ್ ಅಭಿಮಾನಿಗಳ ವಲಯದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಹೆಚ್ಚಾಗಿದೆ.

  ಡಿ ಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ: 'ರಾಬರ್ಟ್' ರಿಲೀಸ್ ಡೇಟ್ ಫಿಕ್ಸ್?ಡಿ ಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ: 'ರಾಬರ್ಟ್' ರಿಲೀಸ್ ಡೇಟ್ ಫಿಕ್ಸ್?

  ಆಶಾ ಭಟ್ ಗೆ ಸ್ಪೆಷಲ್

  ಆಶಾ ಭಟ್ ಗೆ ಸ್ಪೆಷಲ್

  ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೆಕೆಂಡ್ ಮೋಷನ್ ಪೋಸ್ಟರ್ ಬರುತ್ತೆ ಎಂದು ತರುಣ್ ಸುಧೀರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್, ಈ ಸಂಕ್ರಾಂತಿ ತುಂಬಾ ವಿಶೇಷ' ಎಂದು ಖುಷಿ ಹಂಚಿಕೊಂಡಿದ್ದಾರೆ.

  ಡಿ ಬಾಸ್ 'ರಾಬರ್ಟ್'ಗೆ ಸಾಥ್ ನೀಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಡಿ ಬಾಸ್ 'ರಾಬರ್ಟ್'ಗೆ ಸಾಥ್ ನೀಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

  ಹೇಗಿರಲಿದೆ ಎರಡನೇ ಪೋಸ್ಟರ್

  ಹೇಗಿರಲಿದೆ ಎರಡನೇ ಪೋಸ್ಟರ್

  ರಾಬರ್ಟ್ ಚಿತ್ರಕ್ಕೆ ಸಂಬಂಧಿಸಿದಂತೆ ಇದುವರೆಗೂ ದರ್ಶನ್ ಅವರ ಒಂದೇ ಪೋಸ್ಟರ್ ವೈರಲ್ ಆಗಿರುವುದು. ಬೈಕ್ ಮೇಲೆ ಇರುವುದು ಮತ್ತು ವಿನೋದ್ ಪ್ರಭಾಕರ್ ಜೊತೆ ಬೈಕ್ ಮೇಲೆ ಕುಳಿತಿದ್ದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಫೋಟೋಗಳನ್ನು ಬಿಟ್ಟು ಬೇರೆ ಯಾವ ಪೋಸ್ಟರ್ ಪ್ರೇಕ್ಷಕರೆದುರು ಬರಬಹುದು ಎಂಬ ಕಾತುರ ಈಗ ಕಾಡುತ್ತಿದೆ.

  ಡಿ ಬಾಸ್ 'ರಾಬರ್ಟ್' ಹೊಸ ಲುಕ್ ಗೆ ಅಭಿಮಾನಿಗಳು ಫಿದಾಡಿ ಬಾಸ್ 'ರಾಬರ್ಟ್' ಹೊಸ ಲುಕ್ ಗೆ ಅಭಿಮಾನಿಗಳು ಫಿದಾ

  ಏಪ್ರಿಲ್ನಲ್ಲಿ ರಾಬರ್ಟ್ ಎಂಟ್ರಿ!

  ಏಪ್ರಿಲ್ನಲ್ಲಿ ರಾಬರ್ಟ್ ಎಂಟ್ರಿ!

  ತರುಣ್ ಸುಧೀರ್ ಈ ಚಿತ್ರ ನಿರ್ದೇಶನ ಮಾಡಿದ್ದು, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸಿದ್ದಾರೆ. ದರ್ಶನ್ ಜೊತೆ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಜಗಪತಿ ಬಾಬು ವಿಲನ್ ಆಗಿದ್ದಾರೆ. ಆಶಾ ಭಟ್ ನಾಯಕಿ. ಸದ್ಯದ ಮಾಹಿತಿ ಪ್ರಕಾರ ಏಪ್ರಿಲ್ ತಿಂಗಳ ಎರಡನೇ ವಾರ ರಾಬರ್ಟ್ ತೆರೆಗೆ ಬರಲಿದೆಯಂತೆ.

  English summary
  Challenging star darshan starrer Robot movie second look will release in occasion of sankranthi festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X