ಕೊರೊನಾ ಎಫೆಕ್ಟ್: ಚಿತ್ರೀಕರಣ ಜಾಗ ಬದಲಾಯಿಸಿದ 'ರಾಬರ್ಟ್' ಟೀಂ

ಡಿ-ಬಾಸ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಬರ್ಟ್‌ ಮೇಲೆ ಕೊರೊನಾ ವೈರಸ್ ನ ಕರಿನೆರಳು ಬಿದ್ದಿದೆ. ಹಾಡಿನ ಚಿತ್ರೀಕರಣಕ್ಕಾಗಿ ರಾಬರ್ಟ್ ಟೀಂ ಸ್ಪೇನ್‌ ಗೆ ಹೋಗಬೇತ್ತು. ಆದರೆ ತಂಡ ಅಂತಿಮ ಗಳಿಗೆಯಲ್ಲಿ ಯೋಜನೆ ಬದಲಾಯಿಸಿದೆ. ವಿಶ್ವದಾದ್ಯಂತ ಹೆಚ್ಚುತ್ತಿರುವ ಕೊರೊನಾ ಭೀತಿಯ ಹಿನ್ನಲೆ, ವಿದೇಶಿ ಚಿತ್ರೀಕರಣ ಕ್ಯಾನ್ಸಲ್ ಮಾಡಿತ್ತು ಚಿತ್ರತಂಡ.

ಅಂದ್ಹಾಗೆ ವಿದೇಶಿ ಚಿತ್ರೀಕರಣದ ಬದಲು ಚಿತ್ರತಂಡ ಈಗ ಭಾರತದಲ್ಲಿಯೇ ಚಿತ್ರೀಕರಣ ಮಾಡಲು ನಿರ್ಧರಿಸಿದೆಯಂತೆ. ಹೌದು, ಚಿತ್ರತಂಡ ಈಗ ಗುಜರಾತ್ ನಲ್ಲಿ ಚಿತ್ರದ ಸುಂದರ ಹಾಡುಗಳನ್ನು ಸೆರೆಹಿಡಿಯಲು ಪ್ಲಾನ್ ಮಾಡಿದೆಯಂತೆ. ಈಗಾಗಲೆ ಗುಜರಾತ್ ನ ಕಚ್ ನಲ್ಲಿ ಸುಂದರ ತಾಣವನ್ನು ಹುಡುಕಿರುವ ಚಿತ್ರತಂಡ ಅಲ್ಲಿಯೇ ಸಿನಿಮಾ ಹಾಡನ್ನು ಸೆರೆಹಿಡಿಯಲಿದೆಯಂತೆ.

ಚಿತ್ರದ ಪ್ರಮುಖ ರೋಮ್ಯಾಂಟಿಕ್ ಹಾಡು ಇದಾಗಿದ್ದು ಈ ಹಾಡಿಗಾಗಿ ವಿದೇಶಕ್ಕೆ ಹಾರಲು ಪ್ಲಾನ್ ಮಾಡಿತ್ತು ಚಿತ್ರತಂಡ. ಕೊರೊನಾ ವೈರಸ್ ಕಾರಣ ವಿದೇಶಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಿರುವ ಹಿನ್ನಲೆ ಸಿನಿಮಾ ರಿಲೀಸ್ ಕೂಡ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು.

Roberrt Team Cancelled Foreign Tour And Shoot The Song In India

ವಿದೇಶಿ ಲೊಕೇಶನ್ ಹಾಗೆಯೆ ಭಾರತದಲ್ಲಿಯೇ ಲೊಕೇಶನ್ ಸಿಕ್ಕಿದೆಯಂತೆ. ಹಾಗಾಗಿ ಇಲ್ಲಿಯೆ ಚಿತ್ರೀಕರಣ ಮಾಡಲು ನಿರ್ಧರಿಸಿದೆ. ಈಗಾಗಲೆ ಟೀಸರ್ ಮತ್ತು ಹಾಡಿನ ಮೂಲಕ ಸದ್ದು ಮಾಡುತ್ತಿರುವ ರಾಬರ್ಟ್ ಸಿನಿಮಾ ಏಪ್ರಿಲ್ 9ಕ್ಕೆ ತೆರೆಗೆ ಬರಲಿದೆ.

More from Filmibeat

English summary
Kannada Actor Darshan starrer Roberrt film team Cancelled foreign tour and shoot the song in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X