For Quick Alerts
  ALLOW NOTIFICATIONS  
  For Daily Alerts

  ಧ್ರುವ ಸಿನಿಮಾ ನೋಡೋಕೆ ಹೋದವರಿಗೆ ಸರ್ಪ್ರೈಸ್ ದರ್ಶನ ನೀಡಿದ ಡಿ ಬಾಸ್

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಬೆಳಗ್ಗೆಯಿಂದಲೇ ಶೋ ಆರಂಭವಾಗಿದೆ. ಧ್ರುವ ಸರ್ಜಾ ನೋಡೋಕೆ ಹೋದವರಿಗೆ ಡಿ ಬಾಸ್ ಸರ್ಪ್ರೈಸ್ ದರ್ಶನ ನೀಡಿದ್ದಾರೆ. ಇದನ್ನು ಕಂಡ ಡಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ.

  ಥಿಯೇಟರ್ ನಲ್ಲಿ ಡಿ ಬಾಸ್ ನೋಡಿ ಅಭಿಮಾನಿಗಳು ಫುಲ್ ಹ್ಯಾಪಿ | Filmibeat Kannada

  ಧ್ರುವ ಸಿನಿಮಾದ ಪ್ರದರ್ಶನದ ವೇಳೆ ದರ್ಶನ್ ನಟನೆಯ ರಾಬರ್ಟ್ ಚಿತ್ರದ ಟ್ರೈಲರ್ ಪ್ರದರ್ಶನವಾಗಿದೆ. ರಾಜ್ಯದ ಕೆಲವು ಕಡೆ ರಾಬರ್ಟ್ ಟ್ರೈಲರ್ ಇಂಟರ್‌ವಲ್‌ನಲ್ಲಿ ಪ್ರಸಾರವಾಗಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಫೆಬ್ರವರಿ 20 ರಂದು ರಾಬರ್ಟ್ ಚಿತ್ರದ ಹೊಸ ಹಾಡು ರಿಲೀಸ್ಫೆಬ್ರವರಿ 20 ರಂದು ರಾಬರ್ಟ್ ಚಿತ್ರದ ಹೊಸ ಹಾಡು ರಿಲೀಸ್

  ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಫೆಬ್ರವರಿ 16 ರಂದು ರಾಬರ್ಟ್ ಟ್ರೈಲರ್ ಬಿಡುಗಡೆಯಾಗಿತ್ತು. ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದ್ದ ರಾಬರ್ಟ್ ಟ್ರೈಲರ್ ಪ್ರಸ್ತುತ 8 ಮಿಲಿಯನ್ (8,344,046) ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ.

  ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಾಬರ್ಟ್ ಸಿನಿಮಾ ತೆರೆಕಾಣಲಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಯಾಗಿದೆ. ಖ್ಯಾತ ವಿತರಕರು ರಾಬರ್ಟ್ ಚಿತ್ರವನ್ನು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

  ಇನ್ನು ಫೆಬ್ರವರಿ 20 ರಂದು ಸಂಜೆ 4.05 ನಿಮಿಷಕ್ಕೆ 'ಕಣ್ಣು ಹೊಡೆಯೋಕಾ.....' ಎಂಬ ಹಾಡಿನ ಲಿರಿಕಲ್ ವಿಡಿಯೋ ಬರಲಿದೆ. ಇದು ದರ್ಶನ್ ಮತ್ತು ನಟಿ ಆಶಾ ಭಟ್ ನಡುವಿನ ಡ್ಯುಯೆಟ್ ಹಾಡಾಗಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಈ ಹಾಡು ಮೂಡಿಬರಲಿದೆ.

  ಡಿ-ಬಾಸ್ ದರ್ಶನ್ ಬರ್ತಡೇ ಪಾರ್ಟಿಯಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಇದ್ದರು?ಡಿ-ಬಾಸ್ ದರ್ಶನ್ ಬರ್ತಡೇ ಪಾರ್ಟಿಯಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಇದ್ದರು?

  ಇನ್ನುಳಿದಂತೆ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸಿದ್ದಾರೆ. ಜಗಪತಿ ಬಾಬು, ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Challenging star Darshan starrer Roberrt Trailer telecasted in Pogaru Show Time in some theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X