ಇಂದು ಸಂಜೆ 'ರಾಬರ್ಟ್' ಹೀರೋಯಿನ್ ಘೋಷಣೆ: ರೇಸ್ ನಲ್ಲಿ ಯಾರಿದ್ದಾರೆ?

Recommended Video

Robert movie : ಇಂದು ಸಂಜೆ 'ರಾಬರ್ಟ್' ಹೀರೋಯಿನ್ ಘೋಷಣೆ | Oneindia Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ 'ರಾಬರ್ಟ್' ಚಿತ್ರ ನಾಯಕಿ ವಿಚಾರಕ್ಕೆ ಭಾರಿ ಸದ್ದು ಮಾಡುತ್ತಿದೆ. ಡಿ ಬಾಸ್ 53ನೇ ಚಿತ್ರಕ್ಕೆ ಯಾರೂ ಹೀರೋಯಿನ್ ಆಗಬಹುದು ಎಂಬ ಕಾತುರ ಅಭಿಮಾನಿಗಳಲ್ಲಿ ಹೆಚ್ಚಿದೆ.

ದರ್ಶನ್ ಅವರ ಫಸ್ಟ್ ಲುಕ್ ಬಂದ ಮೇಲಂತೂ 'ರಾಬರ್ಟ್' ಬಗ್ಗೆ ನಿರೀಕ್ಷೆ ಗಗನಕ್ಕೇರಿದೆ. ಹಾಗಾಗಿ, ದರ್ಶನ್ ಜೊತೆ ಯಾರು ನಟಿಸಬಹುದು ಎಂಬ ಪ್ರಶ್ನೆ ಟಾಕ್ ಆಫ್ ದಿ ಗಾಂಧಿನಗರ ಆಗಿದೆ.

ಇಂದು ಸಂಜೆ 4.02 ಗಂಟೆಗೆ ನಿರ್ದೇಶಕ ತರುಣ್ ಸುಧೀರ್ ರಾಬರ್ಟ್ ಗೆ ಯಾರು ನಾಯಕಿ ಎಂದು ಅಧಿಕೃತವಾಗಿ ಘೋಷಿಸಲಿದ್ದಾರೆ. ಹಾಗಿದ್ರೆ, ನಾಯಕಿ ಪಟ್ಟಿಯಲ್ಲಿ ಯಾರ ಹೆಸರುಗಳಿವೆ? ಮುಂದೆ ಓದಿ....

ಮೆಹರೀನ್ ಪಿರ್ಜಾದಾ ಪಕ್ಕಾ.!

ಮೆಹರೀನ್ ಪಿರ್ಜಾದಾ ಪಕ್ಕಾ.!

ರಾಬರ್ಟ್ ಚಿತ್ರಕ್ಕಾಗಿ ಪರಭಾಷೆ ತಾರೆಯೊಬ್ಬರು ಕನ್ನಡಕ್ಕೆ ಬರುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ಪಟ್ಟಿಯಲ್ಲಿ ಬರುವ ಮೊದಲ ಹೆಸರು ಮೆಹರೀನ್ ಪಿರ್ಜಾದಾ. ಮೂಲಗಳ ಪ್ರಕಾರ, ಮೆಹರೀನ್ ನಾಯಕಿಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಮೆಹರೀನ್ ಬಿಟ್ಟರೆ ಯಾರು?

ಮೆಹರೀನ್ ಬಿಟ್ಟರೆ ಯಾರು?

ಕೊನೆ ಘಳಿಗೆಯಲ್ಲಿ ಮೆಹರೀನ್ ಬಿಟ್ಟು ಬೇರೆ ಯಾರಾದರೂ ಆ ಜಾಗಕ್ಕೆ ಬಂದರೆ ಎಂಬ ಪ್ರಶ್ನೆಯೂ ಕಾಡುತ್ತಿದೆ. ಹಾಗ್ನೋಡಿದ್ರೆ, ಕೀರ್ತಿ ಸುರೇಶ್ ಅವರ ಹೆಸರು ಈ ಪಟ್ಟಿಯಲ್ಲಿ ಬರಬಹುದು. ಯಾಕಂದ್ರೆ ಕೀರ್ತಿ ಕನ್ನಡಕ್ಕೆ ಬರ್ತಾರೆ ಎಂಬ ವಿಷಯ ಈಗಾಗಲೇ ಸದ್ದು ಮಾಡಿದೆ. ಇದೇ ಚಿತ್ರಕ್ಕೆ ಯಾಕೆ ಆಗಿರಬಹುದು.

ಕನ್ನಡ ನಟಿಯರು ಅನುಮಾನ

ಕನ್ನಡ ನಟಿಯರು ಅನುಮಾನ

'ರಾಬರ್ಟ್' ಚಿತ್ರಕ್ಕೆ ಕನ್ನಡ ನಟಿ ಆಯ್ಕೆಯಾಗುವುದು ಬಹುತೇಕ ಅನುಮಾನ ಎಂಬ ಸುದ್ದಿ ಹರಿದಾಡಿದೆ. ಸ್ಯಾಂಡಲ್ ವುಡ್ ಸ್ಟಾರ್ ನಟಿಯರ ಪೈಕಿ ಹೆಚ್ಚಿನ ಹೀರೋಯಿನ್ ಗಳು ಈಗಾಗಲೇ ಸ್ಕ್ರೀನ್ ಶೇರ್ ಮಾಡಿದ್ದಾರೆ. ಹಾಗಾಗಿ, ಫ್ರೆಶ್ ಪೇರ್ ಮೂಲಕ ಪ್ರೇಕ್ಷಕರೆದುರು ಬರಲು ಚಿತ್ರತಂಡ ತೀರ್ಮಾನಿಸಿದೆ.

ಹೊಸ ನಟಿ ಬಂದ್ರೆ?

ಹೊಸ ನಟಿ ಬಂದ್ರೆ?

ಈ ಎಲ್ಲಾ ಸಾಧ್ಯತೆಗಳಿಗೆ ಅಚ್ಚರಿ ನೀಡುವಂತೆ ಹೊಸ ಕಲಾವಿದೆಯನ್ನ ಕರೆತಂದರೆ ಎಂಬ ಆಯ್ಕೆಯೂ ಇದೆ. ಹೌದು, ಈಗಾಗಲೇ 'ಒಡೆಯ' ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಹೊಸ ಹುಡುಗಿ ನಟಿಸಿದ್ದಾರೆ. ರಾಬರ್ಟ್ ಚಿತ್ರಕ್ಕೂ ಪ್ರಯತ್ನ ಮಾಡೋಣ ಎಂದು ಹೊಸ ಕಲಾವಿದೆಯನ್ನ ಆಯ್ಕೆ ಮಾಡಿದ್ರೂ ಮಾಡಬಹುದು. ಇದಕ್ಕೆಲ್ಲ ಸಂಜೆ 4.02 ಗಂಟೆಗೆ ಉತ್ತರ ಸಿಗಲಿದೆ.

More from Filmibeat

English summary
Official announcement of heroine for Roberrt will be done today at 4.02pm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X