'ರಾಬರ್ಟ್' ನಾಯಕಿಯ ಗಾಯನ: ಆಶಾ ಭಟ್ ಮಧುರ ಕಂಠಕ್ಕೆ ಅಭಿಮಾನಿಗಳು ಫಿದಾ
ಕೊರೊನಾ ಲಾಕ್ ಡೌನ್ ನಿಂದ ಸೆಲೆಬ್ರಿಟಿಗಳು ಕುಟುಂಬ ಜೊತೆ ಕಾಲಕಳೆಯುತ್ತಿದ್ದಾರೆ. ಮನೆಯಲ್ಲಿಯೇ ಇರುವ ಸ್ಟಾರ್ಸ್ ಫಿಟ್ ನೆಸ್, ಓದುವುದು, ಅಡುಗೆ ಮಾಡುವುದು ಹೀಗೆ ಒಂದಲ್ಲೊಂದು ಕೆಲಸದಲ್ಲಿ ಎಂಗೇಜ್ ಆಗಿದ್ದಾರೆ.
Recommended Video
ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡುತ್ತಿರುತ್ತಾರೆ. ಇದೀಗ ರಾಬರ್ಟ್ ಸುಂದರಿ ಆಶಾ ಭಟ್ ಹಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಮಾಡಲಿಂಗ್, ಅಭಿನಯ, ಡ್ಯಾನ್ಸ್ ಅಂತ ಬ್ಯುಸಿಯಾಗಿರುವ ಆಶಾ ಈಗ ಗಾಯಕಿಯಾಗಿದ್ದಾರೆ. ಆಶಾ ಗಾಯನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮುಂದೆ ಓದಿ...

'ಅಮೃತವರ್ಷಿಣಿ' ಹಾಡಿಗೆ ಧ್ವನಿಯಾದ ಆಶಾ ಭಟ್
ಸ್ಯಾಂಡಲ್ ವುಡ್ ನಟ ರಮೇಶ್ ಅರವಿಂದ್ ಮತ್ತು ಸುಹಾಸಿನಿ ಅಭಿನಯದ ಅಮೃತವರ್ಷಿಣಿ ಚಿತ್ರದ ಪ್ರಸಿದ್ಧ ಗೀತೆ 'ತುಂತುರು ಅಲ್ಲಿ ನೀರ ಹಾಡು..' ಹಾಡನ್ನು ಆಶಾ ಭಟ್ ಹಾಡಿದ್ದಾರೆ. ಈ ಹಾಡನ್ನು ಆಶಾ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

ಆಶಾ ಭಟ್ ಸುಮಧುರ ಸ್ವರಕ್ಕೆ ಅಭಿಮಾನಿಗಳು ಫಿದಾ
ನಟಿ ಆಶಾ ಭಟ್ ಸುಮಧುರ ಕಂಠಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಮೆಚ್ಚುಗೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. "ನಿಮ್ಮ ಧ್ವನಿ ಅದ್ಭುತವಾಗಿದೆ", "ನಿಮ್ಮ ಕನ್ನಡ ಪ್ರೀತಿಗೆ ನಾವು ಫಿದಾ ಆಗಿದ್ದೀವಿ", "ಕನ್ನಡ ತಾಯಿ ನಿಮಗೆ ದೊಡ್ಡ ಯಶಸ್ಸು ಕೊಡುತ್ತಾಳೆ" ಎಂದೆಲ್ಲ ಕಾಮೆಂಟ್ ಮಾಡಿ ಹಾಡಿ ಹೊಗಳುತ್ತಿದ್ದಾರೆ.
ಇದು ನನ್ನಿಷ್ಟದ ಹಾಡು..
'ತುಂತುರು...' ಹಾಡು ಆಶಾ ಭಟ್ ಅವರ ನೆಚ್ಚಿನ ಹಾಡಂತೆ. ಹಾಗಾಗಿ ಈ ಹಾಡನ್ನು ಹಾಡಿದ್ದಾರೆ. "ಹಾಡು ಹಾಡುವುದು ನನಗೆ ತುಂಬಾ ಖುಷಿ ನೀಡುತ್ತೆ. ಕಂಫರ್ಟ್ ಫೀಲ್ ಕೊಡುತ್ತೆ. ನನ್ನ ಮೆಚ್ಚಿನ ಹಾಡನ್ನು ಹಾಡುವ ಪ್ರಯತ್ನ ಮಾಡಿದ್ದೀನಿ. ನೀವು ಈ ಹಾಡನ್ನು ಕೇಳಿ ಇಷ್ಟಪಡುತ್ತೀರಿ ಎಂದು ಭಾವಿಸುತ್ತೇನೆ. ಜಾಗುರೂಕತೆಯಿಂದ ಹಾಡನ್ನು ಕೇಳಿ" ಎಂದು ಹಾಡನ್ನು ಹಾಡಿ ಬರೆದುಕೊಂಡಿದ್ದಾರೆ.

ರಾಬರ್ಟ್ ಸಿನಿಮಾದಲ್ಲಿ ಅಭಿನಯ
ಕನ್ನಡದ ನಟಿ ಆಶಾ ಭಟ್ ಹಿಂದಿಯ ಜಂಗ್ಲಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಆ ನಂತರ ರಾಬರ್ಟ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾಯಕಿಯಾಗಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ರಿಲೀಸ್ ಗೂ ಮೊದಲೆ ಅಭಿಮಾನಿಗಳ ಅಪಾರ ಪ್ರೀತಿ ಗಳಿಸಿರುವ ಆಶಾ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ ಎನ್ನುವುದು ಸದ್ಯದ ಕುತೂಹಲ.


Click it and Unblock the Notifications











