For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಸಿನಿಮಾದ ರಿಲೀಸ್ ಪ್ಲಾನ್ ರೆಡಿಯಾಗಿದೆ

  |
  ದರ್ಶನ್ ಹೊಸ ಸಿನಿಮಾ ರಾಬರ್ಟ್ ಸೆಟ್ಟೇರಲು ಸಿದ್ದ | Filmibeat Kannada

  ನಟ ದರ್ಶನ್ 'ಯಜಮಾನ' ಸಿನಿಮಾದ ಗೆಲುವಿನ ಬಳಿಕ ಮಂಡ್ಯದ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಅತ್ತ ಚುನಾವಣೆ ಹಾಗೂ ಇತ್ತ ಸಿನಿಮಾಗಳ ಕೆಲಸಗಳು ಒಟ್ಟೊಟ್ಟಿಗೆ ನಡೆಯುತ್ತಿದೆ.

  ದರ್ಶನ್ ಮುಂದಿನ ಸಿನಿಮಾಗಳ ಲಿಸ್ಟ್ ದೊಡ್ಡದಿದೆ. ಈ ಸಿನಿಮಾಗಳ ಪೈಕಿ ಬಹಳ ನಿರೀಕ್ಷೆ ಹುಟ್ಟಿಸಿರುವ ಚಿತ್ರ ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್'. 'ರಾಬರ್ಟ್' ಈಗಾಗಲೇ ಪೋಸ್ಟರ್ ಮೂಲಕ ದರ್ಶನ್ ಅಭಿಮಾನಿಗಳ ಪ್ರೀತಿ ಪಡೆದುಕೊಂಡಿದೆ. ಹಂತ ಹಂತವಾಗಿ ಸಿನಿಮಾ ಸದ್ದು ಮಾಡಲು ಪ್ರಾರಂಭ ಮಾಡಿದೆ.

  'ರಾಬರ್ಟ್'ಗೆ ಸಂಭಾಷಣೆ ಬರೀತಿರೋದು ಒಬ್ಬರಲ್ಲ ಇಬ್ಬರು!

  ಈ ಸಿನಿಮಾ ಯಾವಾಗ ಬರುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇದೆ. ಅಂದಹಾಗೆ, 'ರಾಬರ್ಟ್' ಸಿನಿಮಾದ ಚಿತ್ರೀಕರಣ ಶುರು ಆಗುವ ಮುಂಚೆಯೇ ಚಿತ್ರದ ಬಿಡುಗಡೆಯ ಪ್ಲಾನ್ ಮಾಡಲಾಗಿದೆ. ಮುಂದೆ ಓದಿ...

  2020ರ ಬೇಸಿಗೆಗೆ ರಿಲೀಸ್

  2020ರ ಬೇಸಿಗೆಗೆ ರಿಲೀಸ್

  'ರಾಬರ್ಟ್' ಸಿನಿಮಾ ಮುಂದಿನ ವರ್ಷ ಬೇಸಿಗೆ ವೇಳೆಗೆ ಬಿಡುಗಡೆಯಾಗಲಿದೆ. 2020ಕ್ಕೆ ಚಿತ್ರವನ್ನು ತೆರೆಗೆ ತರುವ ಪ್ಲಾನ್ ಹೊಂದಿದ್ದು, ಏಪ್ರಿಲ್ 19 ರಿಂದ ಶೂಟಿಂಗ್ ಶುರು ಆಗುತ್ತಿದೆ. ಚುನಾವಣಾ ಪ್ರಚಾರಗಳ ಬಳಿಕ ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಶೂಟಿಂಗ್ ಶುರು ಆದ ಒಂದು ವರ್ಷಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

  ಮೊದಲ ಹಂತದ ಚಿತ್ರೀಕರಣ

  ಮೊದಲ ಹಂತದ ಚಿತ್ರೀಕರಣ

  ಸಿನಿಮಾದ ಮೊದಲ ಹಂತದ ಚಿತ್ರೀಕರಣ 45 ದಿನಗಳ ಕಾಲ ನಡೆಯಲಿದೆ. ಬೆಂಗಳೂರು, ಹೈದರಾಬಾದ್, ವಿಶಾಖಪಟ್ಟಣಂ ಹಾಗೂ ಚೆನ್ನೈನಲ್ಲಿ ಶೂಟಿಂಗ್ ಸಾಗಲಿದೆ. ಒಂದುವರೆ ತಿಂಗಳ ನಂತರ ಎರಡನೇ ಹಂತದ ಚಿತ್ರೀಕರಣ ಪ್ರಾರಂಭ ಆಗಲಿದೆ. ಮೊದಲು ಬೆಂಗಳೂರಿನಲ್ಲಿ ಶುರು ಮಾಡಿ ನಂತರ ಉಳಿದ ಭಾಗಕ್ಕೆ ಚಿತ್ರೀಕರಣ ಮುಂದುವರೆಯಲಿದೆ.

  ಸಂದರ್ಶನ : ಆಗ 'ಮಜಾ ಟಾಕೀಸ್'ಗೆ ಪಿಲ್ಲರ್, ಈಗ 'ರಾಬರ್ಟ್'ಗೆ ರೈಟರ್

  ಕಲಾವಿದರ ಆಯ್ಕೆ ನಡೆಯುತ್ತಿದೆ

  ಕಲಾವಿದರ ಆಯ್ಕೆ ನಡೆಯುತ್ತಿದೆ

  'ರಾಬರ್ಟ್' ಸಿನಿಮಾದ ಕಲಾವಿದ ಆಯ್ಕೆ ಸದ್ಯ ನಡೆಯುತ್ತಿದೆ. ದರ್ಶನ್ ಬಿಟ್ಟರೆ ಚಿತ್ರದಲ್ಲಿ ನಟಿಸುವ ಉಳಿದ ಕಲಾವಿದರ ಹೆಸರು ಇನ್ನು ಬಹಿರಂಗ ಆಗಿಲ್ಲ. ಚಿತ್ರದ ನಾಯಕಿ ಸೇರಿದಂತೆ, ಯಾವ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ಕುತೂಹಲ ಹಾಗೆಯೇ ಇದೆ.

  ತರುಣ್ ಸುಧೀರ್ ಎರಡನೇ ಸಿನಿಮಾ

  ತರುಣ್ ಸುಧೀರ್ ಎರಡನೇ ಸಿನಿಮಾ

  'ರಾಬರ್ಟ್' ನಿರ್ದೇಶಕ ತರುಣ್ ಸುಧೀರ್ ನಟನೆಯ ಎರಡನೇ ಸಿನಿಮಾವಾಗಿದೆ. 'ಚೌಕ' ಚಿತ್ರದ ಯಶಸ್ಸಿನ ಬಳಿಕ ಡಿ ಬಾಸ್ ಜೊತೆಗೆ ತರುಣ್ ಸಿನಿಮಾ ಮಾಡುತ್ತಿದ್ದಾರೆ. 'ಹೆಬ್ಬುಲಿ' ಖ್ಯಾತಿಯ ಉಮಾಪತಿ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ರಾಜಶೇಖರ್ ಕೆ ಎಲ್ ಹಾಗೂ ಚಂದ್ರಮೌಳಿ ಇಬ್ಬರು ಡೈಲಾಗ್ ಬರೆಯುತ್ತಿದ್ದಾರೆ.

  English summary
  Challenging Star Darshan's 'Robert' kannada movie planning to release on 2020 march. The movie will be directed by Tharun Sudhir.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X