'ರಾಬರ್ಟ್' ಸಿನಿಮಾ ಈ ವರ್ಷ ಬಿಡುಗಡೆ ಆಗುವುದಿಲ್ಲ

Recommended Video

Shakib Al Hasan banned for 2 years by ICC | Oneindia Kannada

ನಟ ದರ್ಶನ್ ಮುಂದಿನ ಸಿನಿಮಾಗಳ ಪೈಕಿ ಬಹು ನಿರೀಕ್ಷೆ ಹುಟ್ಟಿಸಿರುವ ಚಿತ್ರ 'ರಾಬರ್ಟ್'. ಈ ಸಿನಿಮಾ ಯಾವಾಗ ಬಿಡುಗಡೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ಸಿನಿಮಾ ಈ ವರ್ಷ ಬಿಡುಗಡೆ ಆಗುತ್ತಿಲ್ಲ.

ಈ ವರ್ಷ ಈಗಾಗಲೇ ದರ್ಶನ್ ನಟನೆಯ 'ಯಜಮಾನ' ಸಿನಿಮಾ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಆಗಿತ್ತು. ಆ ನಂತರ ಆಗಸ್ಟ್ ತಿಂಗಳಲ್ಲಿ 'ಕುರುಕ್ಷೇತ್ರ' ಸಿನಿಮಾ ತೆರೆಗೆ ಬಂತು. ಈ ಎರಡು ಚಿತ್ರಗಳ ನಂತರ 'ಒಡೆಯ' ಸಿನಿಮಾ ರಿಲೀಸ್ ಆಗಲಿದೆ.

'ಒಡೆಯ' ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ವರ್ಷ ಮುಗಿಯಲು ಎರಡೇ ತಿಂಗಳು ಬಾಕಿ ಇದ್ದು, 'ರಾಬರ್ಟ್' ಸಿನಿಮಾ ಬರಲು ಅವಕಾಶವೇ ಇಲ್ಲ. ಮತ್ತೊಂದು ಕಡೆ ಸಿನಿಮಾದ ಚಿತ್ರೀಕರಣ ಕೂಡ ಮುಕ್ತಾಯವಾಗಿಲ್ಲ.

Roberrt Kannada Movie Will Be Releasing on 2020

ಹೊಸ ವರ್ಷಕ್ಕೆ ಮಿಸ್ ಆದ್ರೆ, ಸಂಕ್ರಾಂತಿಗೆ 'ಒಡೆಯ' ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾದ ಬಂದ ನಂತರ ಮೂರ್ನಾಲ್ಕು ತಿಂಗಳುಗಳ ಅಂತರದಲ್ಲಿ 'ರಾಬರ್ಟ್' ತೆರೆಗೆ ತರುವ ಯೋಜನೆ ಇದೆ. ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿಯಲು ಇನ್ನು ಸಮಯ ಬೇಕಿದೆ.

'ರಾಬರ್ಟ್' ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ. ಉಮಾಪತಿ ಬಂಡವಾಳ ಹಾಕಿದ್ದಾರೆ. ಆಶಾ ಭಟ್ ಚಿತ್ರದ ನಾಯಕಿ. ಅರ್ಜುನ್ ಜನ್ಯ ಹಾಡುಗಳಿಗೆ ಸಂಗೀತ ಹಾಗೂ ಹರಿಕೃಷ್ಣ ಹಿನ್ನಲೆ ಸಂಗೀತ ನೀಡುತ್ತಿದ್ದಾರೆ.

ಅಂದಹಾಗೆ, ಕನ್ನಡ ರಾಜ್ಯೋತ್ಸವದ ವಿಶೇಷವಾಗಿ 'ಒಡೆಯ' ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ.

More from Filmibeat

English summary
Robert kannada movie will be releasing on on 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X