ಸಂಕ್ರಾಂತಿಗೆ ಬರ್ತಿವೆ ಸ್ಟಾರ್ ನಟರ ಚಿತ್ರಗಳ ಪೋಸ್ಟರ್: ಅಭಿಮಾನಿಗಳಲ್ಲಿ ಸಂಭ್ರಮ

ಈ ವರ್ಷ ಸಂಕ್ರಾಂತಿಗೆ ಸ್ಯಾಂಡಲ್ ವುಡ್ ನಲ್ಲಿ ಯಾವುದೆ ಸಿನಿಮಾಗಳಿಲ್ಲ. ಹಬ್ಬ ಮತ್ತು ವಿಶೇಷ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡಬೇಕೆಂದು ನಿರ್ಮಾಪಕರು ಕಾಯುತ್ತಿರುತ್ತಾರೆ. ಆದರೆ ಸ್ಯಾಂಡಲ್ ವುಡ್ ನಲ್ಲಿ ಈ ಬಾರಿ ಸಂಕ್ರಾಂತಿಗೆ ಯಾರು ತಲೆಕೆಡಿಸಿಕೊಂಡಿಲ್ಲ ಅಂತ ಕಾಣುತ್ತೆ. ಯಾವ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ.

ಈ ವರ್ಷ ಸಂಕ್ರಾಂತಿಗೆ ಸ್ಯಾಂಡಲ್ ವುಡ್ ಪರಭಾಷೆಯ ಚಿತ್ರಗಳಿಗೆ ಅವಕಾಶ ಮಾಡಿಕೊಟ್ಟಿದೆ. ಈ ಬಾರಿ ಪಕ್ಕದ ರಾಜ್ಯದ ಸ್ಟಾರ್ ನಟರ ಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ರಾರಾಜಿಸುತ್ತಿವೆ. ಸಿನಿಮಾಗಳು ಇಲ್ಲದಿದ್ದರು ಈ ಬಾರಿ ಸ್ಟಾರ್ ಚಿತ್ರಗಳ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ಸ್ ರಿಲೀಸ್ ಮಾಡಲು ಸಜ್ಜಾಗಿದ್ದಾರೆ. ಹಾಗಾದರೆ ಯಾವೆಲ್ಲ ಸಿನಿಮಾಗಳ ಪೋಸ್ಟರ್ಸ್ ಮತ್ತು ಮೋಷನ್ ಪೋಸ್ಟರ್ಸ್ ರಿಲೀಸ್ ಆಗಲಿವೆ ಎನ್ನುವುದನ್ನು ನೀವೆ ನೋಡಿ..

ರಾಬರ್ಟ್ ಸೆಕೆಂಡ್ ಪೋಸ್ಟರ್

ರಾಬರ್ಟ್ ಸೆಕೆಂಡ್ ಪೋಸ್ಟರ್

ಕ್ರಿಸ್ಮಸ್ ಹಬ್ಬಕ್ಕೆ ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಸಿನಿರಸಿಕರ ನಾಡಿಮಿಡಿತ ಹೆಚ್ಚಿಸಿದ್ದ ನಿರ್ದೇಶಕ ತರುಣ್, ಈಗ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಬಾರಿ ಸಂಕ್ರಾಂತಿಗೆ ರಾಬರ್ಟ್ ಚಿತ್ರದ ಪೋಸ್ಟರ್ ರಿಲೀಸ್ ಆಗತ್ತಿದೆ. ಈ ಮೂಲಕ ಡಿ ಬಾಸ್ ಅಭಿಮಾನಿಗಳ ವಲಯದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಹೆಚ್ಚಾಗಿದೆ.

ಏಪ್ರಿಲ್ ಗೆ ಬರ್ತಿದೆ ರಾಬರ್ಟ್

ಏಪ್ರಿಲ್ ಗೆ ಬರ್ತಿದೆ ರಾಬರ್ಟ್

ತರುಣ್ ಸುಧೀರ್ ನಿರ್ದೇಶನ ಮತ್ತು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ರಾಬರ್ಟ್ ಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ದರ್ಶನ್ ಜೊತೆ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಜಗಪತಿ ಬಾಬು ವಿಲನ್ ಆಗಿದ್ದಾರೆ. ಆಶಾ ಭಟ್ ನಾಯಕಿಯಾಗಿ ಮಿಂಚಿದ್ದಾರೆ.

ಕೋಟಿಗೊಬ್ಬ-3 ಮೋಷನ್ ಪೋಸ್ಟರ್

ಕೋಟಿಗೊಬ್ಬ-3 ಮೋಷನ್ ಪೋಸ್ಟರ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ. ಈ ಬಾರಿ ಸಂಕ್ರಾಂತಿಗೆ ಕಿಚ್ಚನ ಅಭಿಮಾನಿಗಳಲ್ಲಿಯೂ ಸಂಭ್ರಮ ಮನೆ ಮಾಡಿದೆ. ಇದೆ ತಿಂಗಳು 14ಕ್ಕೆ ಸಂಜೆ 6 ಗಂಟೆಗೆ ಬಹುನಿರೀಕ್ಷೆಯ ಚಿತ್ರದ ಮೋಷನ್ ಪೋಸ್ಟರ್ ತೆರೆಗೆ ಬರುತ್ತಿದೆ.

ಶಿವಣ್ಣ ಅಭಿಮಾನಿಗಳಿಗೂ ಸಂಭ್ರಮ

ಶಿವಣ್ಣ ಅಭಿಮಾನಿಗಳಿಗೂ ಸಂಭ್ರಮ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳಲ್ಲಿಯೂ ಸಂಭ್ರಮ ಜೋರಾಗಿ ಇರಲಿದೆ. ಶಿವಣ್ಣ ಅಭಿನಯದ ಭಜರಂಗಿ-2 ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಂಕ್ರಾಂತಿಗೆ ತೆರೆಗೆ ಬರುತ್ತಿದೆ. ಜನವರಿ 14 ಸಂಜೆ 5 ಗಂಟೆಗೆ ಭಜರಂಗಿ-2 ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗುತ್ತಿದೆ. ಭಜರಂಗಿ-2 ಹರ್ಷ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ.

More from Filmibeat

English summary
Darshan starrer Robert, Sudeep starrer Kotigobba-3 and Shivaraj Kumar starrer Bhajarangi-2 posters will release in Sankranti.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X