For Quick Alerts
  ALLOW NOTIFICATIONS  
  For Daily Alerts

  ದಸರಾ ಹಬ್ಬಕ್ಕೆ ಶುಭಾಶಯ ಕೋರಿದ ರಾಬರ್ಟ್, ಕೋಟಿಗೊಬ್ಬ

  |

  ನವರಾತ್ರಿ ಹಬ್ಬ ನಿಧಾನಕ್ಕೆ ಕಳೆಕಟ್ಟುತ್ತಿದೆ. ಕೊರೊನಾ ಸಂಕಷ್ಟದ ನಡುವೆಯೂ ನವರಾತ್ರಿ ಹಬ್ಬವನ್ನು ದೇಶದಾದ್ಯಂತ ಶ್ರದ್ಧೆ ಭಕ್ತಿಗಳಿಂದ ಆಚರಿಸಲಾಗುತ್ತಿದೆ.

  ರಾಜ್ಯದಲ್ಲೂ ಸಹ ಶ್ರದ್ಧಾ-ಭಕ್ತಿಗಳಿಂದ ಹಬ್ಬ ಆಚರಣೆ ಮಾಡಲಾಗುತ್ತಿದೆ. ದಸರಾ ಹಬ್ಬಕ್ಕೆ ಹಲವು ಸಿನಿಮಾ ತಂಡಗಳು ಪ್ರೇಕ್ಷಕರಿಗೆ ಶುಭಾಶಯ ಕೋರಿವೆ. ಕೆಲವು ಸಿನಿಮಾಗಳು ಸಿನಿಮಾದ ಪೋಸ್ಟರ್ ಟ್ರೇಲರ್‌ಗಳನ್ನು ಸಹ ಬಿಡುಗಡೆ ಮಾಡಿವೆ.

  ಯುವರತ್ನ ಹೊಸ ಪೋಸ್ಟರ್: ಸಖತ್ ಲುಕ್‌ನಲ್ಲಿ ಪುನೀತ್ ರಾಜ್‌ಕುಮಾರ್

  ರಾಜ್ಯದ ಬಹುನಿರೀಕ್ಷಿತ ಸಿನಿಮಾಗಳಾದ ಯುವರತ್ನ, ರಾಬರ್ಟ್, ಕೋಟಿಗೊಬ್ಬ3 ಸಿನಿಮಾಗಳು ಅಭಿಮಾನಿಗಳಿಗೆ ದಸರಾ ಶುಭಾಶಯ ತಿಳಿಸಿವೆ. ಯುವರತ್ನ, ರಾಬರ್ಟ್, ಕೋಟಿಗೊಬ್ಬ ತಂಡಗಳು ಹೊಸ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿವೆ.

  ರಾಬರ್ಟ್ ಸಿನಿಮಾವು ಪೋಸ್ಟರ್ ಬಿಡುಗಡೆ ಮಾಡಿದೆ

  ರಾಬರ್ಟ್ ಸಿನಿಮಾವು ಪೋಸ್ಟರ್ ಬಿಡುಗಡೆ ಮಾಡಿದೆ

  ರಾಬರ್ಟ್ ಸಿನಿಮಾವು ದಸರಾ ಹಬ್ಬದ ಅಂಗವಾಗಿ ವಿಶೇಷ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ದೇವಿಯ ಚಿತ್ರವುಳ್ಳ ಪೋಸ್ಟರ್ ಇದಾಗಿದ್ದು, ಪೋಸ್ಟರ್‌ ಮೂಲಕ ಸಮಸ್ತ ಜನರಿಗೆ ದಸರಾ ಹಬ್ಬದ ಶುಭಾಶಯ ಕೋರಿದೆ ರಾಬರ್ಟ್ ಚಿತ್ರತಂಡ.

  ಕೋಟಿಗೊಬ್ಬ 3 ಪೋಸ್ಟರ್ ಬಿಡುಗಡೆ

  ಕೋಟಿಗೊಬ್ಬ 3 ಪೋಸ್ಟರ್ ಬಿಡುಗಡೆ

  ಕೋಟಿಗೊಬ್ಬ 3 ಸಿನಿಮಾ ತಂಡ ಸಹ ಹೊಸ ಪೋಸ್ಟರ್‌ ಬಿಡುಗಡೆ ಮಾಡಿದೆ. ಸುದೀಪ್ ಅವರ ಚಿತ್ರವುಳ್ಳ ಪೋಸ್ಟರ್ ಇದಾಗಿದ್ದು, ಪೋಸ್ಟರ್‌ನಲ್ಲಿ ಸುದೀಪ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಮೂಲಕ ವಿಜಯದಶಮಿ ಹಬ್ಬದ ಶುಭಾಶಯ ಕೋರಿದೆ ಚಿತ್ರತಂಡ.

  ಯುವರತ್ನ ಪೋಸ್ಟರ್ ಬಿಡುಗಡೆ

  ಯುವರತ್ನ ಪೋಸ್ಟರ್ ಬಿಡುಗಡೆ

  ಇನ್ನು ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ ಸಹ ಪುನೀತ್ ಅವರ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಹೊಸ ಪೋಸ್ಟರ್‌ನಲ್ಲಿ ಬಿಯರ್ಡ್ ಲುಕ್‌ನಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ ನಟ ಪುನೀತ್ ರಾಜ್‌ಕುಮಾರ್.

  Celebrities Dasara Special : ಭರ್ಜರಿ ಆಯುಧ ಪೂಜೆ ಮಾಡಿದ ತಾರೆಯರು | Filmibeat Kannada
  ದಸರಾ ಹಬ್ಬದ ಶುಭಾಶಯ ಕೋರಿದ್ದಾರೆ

  ದಸರಾ ಹಬ್ಬದ ಶುಭಾಶಯ ಕೋರಿದ್ದಾರೆ

  ಹಲವು ನಟ-ನಟಿಯರು ದಸರಾ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಹಲವು ಸಿನಿಮಾಗಳು ಇಂದು ಟ್ರೇಲರ್, ಟೀಸರ್ ಬಿಡುಗಡೆ ಸಹ ಮಾಡಿವೆ. ಹಲವು ಸಿನಿಮಾಗಳು ಪೋಸ್ಟರ್ ಮೂಲಕ ದಸರಾ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

  English summary
  Kannada movie Robert, Kotigobba, Yuvarathna movie poster released on Dasara festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X