'ರಾಬರ್ಟ್' ಚಿತ್ರದ ಸಂಭಾಷಣೆಕಾರ ಈಗ ಸ್ಟಾರ್ ನಟನ ಚಿತ್ರಕ್ಕೆ ಡೈರೆಕ್ಟರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರಕ್ಕೆ ಇಬ್ಬರು ಯುವ ಪ್ರತಿಭೆಗಳು ಸಂಭಾಷಣೆ ಬರೆದಿದ್ದಾರೆ. ಈ ಹಿಂದೆ ಕೆಜಿಎಫ್ ಚಿತ್ರಕ್ಕೆ ಸಂಭಾಷಣೆ ರಚಿಸಿದ್ದ ಚಂದ್ರಮೌಳಿ ಹಾಗೂ 'ಮಜಾ ಟಾಕೀಸ್' ಖ್ಯಾತಿಯ ರಾಜಶೇಖರ್ ಡಿ-ಬಾಸ್ ಚಿತ್ರದಲ್ಲಿ ತಮ್ಮ ಡೈಲಾಗ್ ವರಸೆ ತೋರಿಸಿದ್ದಾರೆ.

Recommended Video

'ಮಳೆ' ಚಿತ್ರದಲ್ಲಿನ Sadhu Kokila , Prem , Amulya behind the scenes

ಈ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ. ಅಷ್ಟರಲ್ಲೇ ರಾಬರ್ಟ್ ಚಿತ್ರಕ್ಕೆ ಸಂಭಾಷಣೆ ರಚಿಸಿರುವ ರಾಜಶೇಖರ್ ಡೈರೆಕ್ಟರ್ ಆಗಿ ಪ್ರಮೋಟ್ ಆಗಿದ್ದಾರೆ. ಸ್ಟಾರ್ ನಿರ್ಮಾಪಕನ ಜೊತೆ ಸೇರಿ ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಯಾವುದು ಆ ಚಿತ್ರ? ಮುಂದೆ ಓದಿ....

ಕೋಮಲ್‌ಗೆ ರಾಜಶೇಖರ್ ಆಕ್ಷನ್ ಕಟ್

ಕೋಮಲ್‌ಗೆ ರಾಜಶೇಖರ್ ಆಕ್ಷನ್ ಕಟ್

ಕೆಂಪೇಗೌಡ-2 ಸಿನಿಮಾದ ಬಳಿಕ ಕೋಮಲ್ ಹೊಸ ಚಿತ್ರ ಕೈಗೆತ್ತಿಕೊಂಡಿದ್ದು, ಈ ಚಿತ್ರಕ್ಕೆ ನವನಿರ್ದೇಶಕ ರಾಜಶೇಖರ್ ಆಕ್ಟನ್ ಕಟ್ ಹೇಳುತ್ತಿದ್ದಾರೆ. ಮಜಾ ಟಾಕೀಸ್ ಹಾಗೂ ದರ್ಶನ್ ನಟನೆಯ ರಾಬರ್ಟ್ ಚಿತ್ರಕ್ಕೆ ಸಂಭಾಷಣೆ ಬರೆದಿರುವ ರಾಜಶೇಖರ್ ಕಾಮಿಡಿ ಸ್ಕ್ರಿಪ್ಟ್ ಇಟ್ಕೊಂಡು ಕೋಮಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ರಾಜ್ ಶೇಖರ್ ಅವರು ಈಗಾಗಲೇ ಅಮ್ಮ ಐ ಲವ್ ಯೂ, ವಿಕ್ಟರಿ 2 ಚಿತ್ರದಲ್ಲೂ ಕೆಲಸ ಮಾಡಿದ್ದಾರೆ.

ಚಂದ್ರಶೇಖರ್ ನಿರ್ಮಾಪಕ

ಚಂದ್ರಶೇಖರ್ ನಿರ್ಮಾಪಕ

ಚಮಕ್, ಅಯೋಗ್ಯ ಚಿತ್ರಗಳ ನಂತರ ಬುದ್ದಿವಂತ 2 ಹಾಗೂ ಶೋಕಿವಾಲ ಅಂತಹ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಖ್ಯಾತ ನಿರ್ಮಾಪಕ ಟಿಆರ್ ಚಂದ್ರಶೇಖರ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಇದೇ ಮೊದಲ ಕೋಮಲ್ ಜೊತೆ ಚಂದ್ರಶೇಖರ್ ಸಿನಿಮಾ ಮಾಡುತ್ತಿರುವುದರಿಂದ ನಿರೀಕ್ಷೆ ಹೆಚ್ಚಿದೆ.

More from Filmibeat

English summary
Robert Movie Dialogue writter Rajashekar directing new movie for Komal kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X