'ರಾಬರ್ಟ್' ಚಿತ್ರದ ಬಿಗ್ ಅಪ್ ಡೇಟ್: 'ಬಾ ಬಾ ಬಾ ನಾ ರೇಡಿ...' ಮಾರ್ಚ್ 3ಕ್ಕೆ
ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಿಂದ ಬಿಗ್ ಅನೌನ್ಸ್ ಮೆಂಟ್ ಇದೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿತ್ತು ಚಿತ್ರತಂಡ. ನಿನ್ನೆಯಿಂದ ಡಿ ಬಾಸ್ ಅಭಿಮಾನಿಗಳು ಏನಿದು ಅನೌನ್ಸ್ ಮೆಂಟ್ ಎಂದು ಕಾತರದಿಂದ ಕಾಯುತ್ತಿದ್ದರು.
ಆದರೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ನಿರ್ದೇಶಕ ತರುಣ್ ಸುಧೀರ್ ಚಿತ್ರದ ಬಗ್ಗೆ ಅಪ್ ಡೇಟ್ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ತರುಣ್ ಸುಧೀರ್ ಚಿತ್ರದ ಮೊದಲ ಹಾಡು ಮಾರ್ಚ್ 3ಕ್ಕೆ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಮಾರ್ಚ್ 3 ಸಂಜೆ 5 ಗಂಟೆಗೆ ಹಾಡು ರಿಲೀಸ್ ಆಗಲಿದ್ದು ಅಭಿಮಾನಿಗಳಿಗೆ ಫುಲ್ ಟ್ರೀಟ್ ಸಿಗಲಿದೆ ಎಂದು ಹೇಳಿದ್ದಾರೆ.

ಇನ್ನು ಹೆಚ್ಚಿನ ಮಾಹಿತಿಯನ್ನು ನಾಳೆ ಸಂಜೆ 5ಕ್ಕೆ ನೀಡುವುದಾಗಿ ಹೇಳಿ ಮತ್ತೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದ್ದಾರೆ. ಅಂದ್ಹಾಗೆ ಮಾರ್ಚ್ 3ಕ್ಕೆ ತೆರೆಗೆ ಬರುತ್ತಿರುವ ಹಾಡು ಬಾ ಬಾ ಬಾ ನಾ ರೇಡಿ...ಹಾಡು ರಿಲೀಸ್ ಆಗುತ್ತಿದೆ.
ಅಂದ್ಹಾಗೆ ರಾಬರ್ಟ್ ಚಿತ್ರದ ಹಾಡುಗಳು ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿವೆ. ಈಗಾಗಲೆ ಪೋಸ್ಟರ್ ಮತ್ತು ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಮಾರ್ಚ್ 3ಕ್ಕೆ ರಿಲೀಸ್ ಆಗುತ್ತಿರುವ ಮೊದಲ ಹಾಡು ಹೇಗಿರಲಿದೆ ಎನ್ನುವ ನಿರೀಕ್ಷೆ ಡಿ ಬಾಸ್ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಇನ್ನು ರಾಬರ್ಟ್ ಸಿನಿಮಾ ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ತೆರೆಗೆ ಬರುತ್ತಿದೆ. ಎರಡು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದ್ದು, ಏಪ್ರಿಲ್ 10ಕ್ಕೆ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲ ಹಾಡು ತೆಲುಗಿನಲ್ಲಿಯೂ ತೆರೆಗೆ ಬರುತ್ತಾ ಎನ್ನುವುದು ಗೊತ್ತಾಗಬೇಕಿದೆ. ಸದ್ಯ ಅಭಿಮಾನಿಗಳ ಗಮನ ಚಿತ್ರದ ಮೊದಲ ಹಾಡಿನ ಮೇಲಿದೆ.


Click it and Unblock the Notifications











