For Quick Alerts
  ALLOW NOTIFICATIONS  
  For Daily Alerts

  ರಾಕ್‌ಸ್ಟಾರ್ ಅವತಾರದಲ್ಲಿ ನಟ ದರ್ಶನ್, ಅಭಿಮಾನಿಗಳಿಗೆ ಖುಷಿ

  |

  ನಟ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಹೊಸ ಪೋಸ್ಟರ್‌ನಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ದರ್ಶನ್.

  ದರ್ಶನ್ ಅಭಿಮಾನಿಗಳು ಫುಲ್ ಹ್ಯಾಪಿ | Roberrt Poster | Filmibeat Kannada

  ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಗೌಡ ಅವರ ಹುಟ್ಟುಹಬ್ಬ ಇಂದು. ಇದೇ ಸಂದರ್ಭದಲ್ಲಿ ರಾಬರ್ಟ್ ಸಿನಿಮಾದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.

  ಕೊರೊನಾ ನಿಯಮ ಉಲ್ಲಂಘನೆ: ದರ್ಶನ್ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿಕೊರೊನಾ ನಿಯಮ ಉಲ್ಲಂಘನೆ: ದರ್ಶನ್ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ

  ಹೊಸ ಪೋಸ್ಟರ್‌ನಲ್ಲಿ ಕೈಯಲ್ಲಿ ಸಿಗಾರ್ ಹಿಡಿದು ಚಿನ್ನದ ಬಣ್ಣದಲ್ಲಿ ಮಿರಿ-ಮಿರಿ ಮಿಂಚುತ್ತಿದ್ದಾರೆ ನಟ ದರ್ಶನ್. ಈ ಹೊಸ ಲುಕ್ ಮಾಸ್‌ ಗೆ ಬದಲಾಗಿ ಹೆಚ್ಚು ಸ್ಟೈಲಿಶ್ ಆಗಿದೆ. ದರ್ಶನ್ ಸಹ ಸಖತ್ತಾಗಿ ಕಾಣ್ತಿದ್ದಾರೆ.

  ರಾಕ್‌ಸ್ಟಾರ್ ಅವತಾರದಲ್ಲಿ ದರ್ಶನ್

  ರಾಕ್‌ಸ್ಟಾರ್ ಅವತಾರದಲ್ಲಿ ದರ್ಶನ್

  ರಾಬರ್ಟ್ ಸಿನಿಮಾದ ಹೊಸ ಪೋಸ್ಟರ್‌ನಲ್ಲಿ ರಾಕ್‌ಸ್ಟಾರ್ ಅವತಾರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಅವರ ಮುಂದೆ ಒಂದು ಮೈಕು ನೇತುಬಿದ್ದಿದೆ. ಹಿಂದೆ ಒಂದು ಸ್ಟಾರ್‌ ಇದೆ. ಪಕ್ಕದಲ್ಲಿ ಸೈಕಲ್ ಚೈನ್ ಬೇರಿಂಗ್‌ಗಳಿಂದ ಮಾಡಿದ ಗಿಟಾರ್ ಇದೆ. ಇವು ದರ್ಶನ್‌ಗೆ ರಾಕ್‌ಸ್ಟಾರ್ ಲುಕ್ ನೀಡಿದೆ.

  ಸಖತ್ ವೈರಲ್ ಆಗಿದೆ ಹೊಸ ಪೋಸ್ಟರ್

  ಸಖತ್ ವೈರಲ್ ಆಗಿದೆ ಹೊಸ ಪೋಸ್ಟರ್

  ಹೊಸ ಪೋಸ್ಟರ್ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಇದು ವೈರಲ್ ಆಗಿದೆ. ಹಲವಾರು ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣ ಖಾತೆಗೆ ರಾಬರ್ಟ್ ಹೊಸ ಪೋಸ್ಟರ್ ಅನ್ನು ಡಿಪಿ ಮಾಡಿಕೊಂಡಿದ್ದಾರೆ. ಪೋಸ್ಟರ್ ಚೆನ್ನಾಗಿದೆ ಎಂದು ಕಮೆಂಟ್ ಸಹ ಮಾಡಿದ್ದಾರೆ.

  ದರ್ಶನ್ ವಿಷಯ ಕೆದಕಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಕಾರ್ಪೊರೇಟರ್ದರ್ಶನ್ ವಿಷಯ ಕೆದಕಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಕಾರ್ಪೊರೇಟರ್

  ಏಪ್ರಿಲ್ 9 ರಂದು ಬಿಡುಗಡೆ ಆಗಬೇಕಿತ್ತು

  ಏಪ್ರಿಲ್ 9 ರಂದು ಬಿಡುಗಡೆ ಆಗಬೇಕಿತ್ತು

  ರಾಬರ್ಟ್ ಸಿನಿಮಾ ಏಪ್ರಿಲ್ 9 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಲಾಕ್‌ಡೌನ್ ಸ್ಥಿತಿಯಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ. ಚಿತ್ರಮಂದಿರಗಳು ತೆರೆದ ಮೇಲೆ ಸಿನಿಮಾ ಬಿಡುಗಡೆ ಆಗಲಿದೆ.

  ಕೋಟ್ಯಂತರ ಡೀಲ್ ಕೈಬಿಟ್ಟ ನಿರ್ಮಾಪಕ

  ಕೋಟ್ಯಂತರ ಡೀಲ್ ಕೈಬಿಟ್ಟ ನಿರ್ಮಾಪಕ

  ರಾಬರ್ಟ್ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರನ್ನು ಒಟಿಟಿಯ ವ್ಯವಸ್ಥಾಪಕ ಮಂಡಳಿ ಸಂಪರ್ಕ ಮಾಡಿತ್ತು. ಆದರೆ ನಿರ್ಮಾಪಕ ಉಮಾಪತಿ ಅವರು ಸಿನಿಮಾವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಗಳ ಡೀಲ್‌ ಅನ್ನು ಕೈಬಿಟ್ಟರು.

  ದುಬಾರಿ ಕಾರು ಬಿಟ್ಟು ರೈತ ಮಿತ್ರ ಟ್ರ್ಯಾಕ್ಟರ್ ಓಡಿಸುತ್ತಿರುವ ಡಿ ಬಾಸ್ ದರ್ಶನ್ದುಬಾರಿ ಕಾರು ಬಿಟ್ಟು ರೈತ ಮಿತ್ರ ಟ್ರ್ಯಾಕ್ಟರ್ ಓಡಿಸುತ್ತಿರುವ ಡಿ ಬಾಸ್ ದರ್ಶನ್

  English summary
  On July 27 Darshan's Robert movie's new poster released. Darshan seen in rock star look in new poster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X