ಜುಲೈ 27 ಕ್ಕೆ ರಾಬರ್ಟ್ ತಂಡದಿಂದ ದರ್ಶನ್ ಅಭಿಮಾನಿಗಳಿಗೆ ಉಡುಗೊರೆ

ದರ್ಶನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ರಾಬರ್ಟ್‌ ಸಿನಿಮಾ ಬಿಡುಗಡೆ ಕೊರೊನಾ ಕಾರಣದಿಂದ ಮುಂದಕ್ಕೆ ಹೋಗುತ್ತಲೇ ಇದೆ.

Recommended Video

ದರ್ಶನ್ ಅಭಿಮಾನಿಗಳು ಫುಲ್ ಹ್ಯಾಪಿ | Roberrt Poster | Filmibeat Kannada

ಏಪ್ರಿಲ್ 9 ಕ್ಕೆ ರಾಬರ್ಟ್ ಸಿನಿಮಾ ಬಿಡುಗಡೆ ಆಗಬೇಕಿತ್ತು, ಆದರೆ ಕೊರೊನಾ ಕಾರಣದಿಂದ ಮುಂದಕ್ಕೆ ಹೋಗುತ್ತಲೇ ಇದೆ. ಚಿತ್ರವು ಬಿಡುಗಡೆಗೆ ಸರ್ವ ಸನ್ನಧ್ಧವಾಗಿದೆ ಆದರೆ ಚಿತ್ರಮಂದಿರಗಳು ತೆರೆಯುವ ವರೆಗೂ ಕಾಯಲೇಬೇಕು.

ಆದರೆ ರಾಬರ್ಟ್‌ ಸಿನಿಮಾದಿಂದ ಅಭಿಮಾನಿಗಳ ಗಮನ ಬೇರೆಡೆ ಹರಿಯದಂತೆ ಆಗಿದ್ದಾಂಗೆ ಸಿನಿಮಾದ ಬಗ್ಗೆ ಏನಾದರೂ ಅಪ್‌ಡೇಟ್‌ಗಳನ್ನು ನೀಡುತ್ತಲೇ ಇದೆ ಚಿತ್ರತಂಡ.

ಎರಡು ಹಾಡುಗಳು ಬಿಡುಗಡೆ ಆಗಿವೆ

ಎರಡು ಹಾಡುಗಳು ಬಿಡುಗಡೆ ಆಗಿವೆ

ಈಗಾಗಲೇ ರಾಬರ್ಟ್ ಸಿನಿಮಾದ ಎರಡು ಹಾಡುಗಳನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಎರಡೂ ಹಾಡುಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ರಾಬರ್ಟ್‌ ಇನ್‌ಟ್ರೊಡಕ್ಷನ್ ಹಾಡಂತೂ ಸಖತ್ ಮಜವಾಗಿದೆ.

ಎರಡನೇ ಪೋಸ್ಟರ್ ಬಿಡುಗಡೆ ಆಗಲಿದೆ

ಎರಡನೇ ಪೋಸ್ಟರ್ ಬಿಡುಗಡೆ ಆಗಲಿದೆ

ಇದೀಗ ರಾಬರ್ಟ್‌ ಸಿನಿಮಾದ ಎರಡನೇ ಪೋಸ್ಟರ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದೆ. ಜುಲೈ 27 ಕ್ಕೆ ಸಿನಿಮಾದ ಎರಡನೇ ಪೋಸ್ಟರ್ ಬಿಡುಗಡೆ ಆಗಲಿದೆ. ಜುಲೈ 27 ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಹುಟ್ಟುಹಬ್ಬ ಹಾಗಾಗಿ ಅದೇ ದಿನ ಪೋಸ್ಟರ್ ಬಿಡುಗಡೆ ಆಗಲಿದೆ.

ರಾಬರ್ಟ್ ಚಿತ್ರದ ಪೋಸ್ಟರ್‌ಗಳು ಹರಿದಾಡ್ತಿವೆ

ರಾಬರ್ಟ್ ಚಿತ್ರದ ಪೋಸ್ಟರ್‌ಗಳು ಹರಿದಾಡ್ತಿವೆ

ರಾಬರ್ಟ್ ಸಿನಿಮಾದ ಕೆಲವು ಪೋಸ್ಟರ್‌ಗಳು ಈಗಾಗಲೇ ಹರಿದಾಡುತ್ತಿದ್ದು, ಕಪ್ಪು ಬಣ್ಣದ ಸ್ಟೈಲಿಶ್ ವಸ್ತ್ರ ಧರಿಸಿ ಕೈಯಲ್ಲಿ ಗನ್ ಹಿಡಿದು ನಿಂತಿರುವ ದರ್ಶನ್, ಹಾಗೂ ಇನ್ನೊಂದು ಪೋಸ್ಟರ್‌ನಲ್ಲಿ ಬೈಕ್ ಮೇಲೆ ಕುಳಿತಿರುವ ಚಿತ್ರಗಳು ಸಖತ್ ವೈರಲ್ ಆಗಿವೆ.

ಆಶಾ ಭಟ್ ನಾಯಕಿ

ಆಶಾ ಭಟ್ ನಾಯಕಿ

ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಜೊತೆಗೆ ಕನ್ನಡತಿ ಆಶಾ ಭಟ್ ಅಭಿನಯಿಸುತ್ತಿದ್ದಾರೆ. ಜೊತೆಗೆ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಸಹ ಸಿನಿಮಾದಲ್ಲಿದ್ದಾರೆ. ನಿರ್ದೇಶನವನ್ನು ತರುಣ್ ಸುಧೀರ್ ಮಾಡಿದ್ದಾರೆ.

More from Filmibeat

English summary
Darshan's starer Robert movie second poster will release on July 27.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X