ದರ್ಶನ್ ಅಭಿಮಾನಿಗಳಿಗೆ ನಿರಾಸೆಯಾಗದಂತೆ ರಾಬರ್ಟ್‌ ತಂಡ ನೀಡಲಿದೆ ಉಡುಗೊರೆ

ದರ್ಶನ್ ಅಭಿಮಾನಿಗಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬ ಬೇಸರ. ಇನ್ನೇನು ರಾಬರ್ಟ್ ಸಿನಿಮಾ ಬಿಡುಗಡೆ ಆಗುತ್ತದೆ ಎನ್ನುವ ಹೊತ್ತಿಗೆ ಲಾಕ್‌ಡೌನ್ ಆಗಿ ಚಿತ್ರಮಂದಿರಗಳು ಬಂದ್ ಆಗಿ ಬಿಟ್ಟವು.

Recommended Video

RockLine Venkatesh Hospitalized,ಆಸ್ಪತ್ರೆಗೆ ದಾಖಲಾದ ರಾಕ್ ಲೈನ್ ವೆಂಕಟೇಶ್ | Filmibeat Kannada

ಇದೀಗ ಪರಿಸ್ಥಿತಿ ನೋಡಿದರೆ ಇನ್ನೂ ಮೂರು-ನಾಲ್ಕು ತಿಂಗಳು ಚಿತ್ರಮಂದಿರಗಳು ತೆರೆಯುವಂತೆ ಕಾಣುತ್ತಿಲ್ಲ, ಹಾಗಾಗಿ ದರ್ಶನ್ ಸಿನಿಮಾಗಾಗಿ ಅಭಿಮಾನಿಗಳು ಇನ್ನಷ್ಟು ದಿನ ಕಾಯಬೇಕಾದ ಪರಿಸ್ಥಿತಿ ಇದೆ.

ರಾಬರ್ಟ್ ಸಿನಿಮಾ ಬಿಡುಗಡೆ ತಡವಾಗುತ್ತಿರುವುದಕ್ಕೆ ದರ್ಶನ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ದರ್ಶನ್ ಅಭಿಮಾನಿಗಳಿಗೆ ಬೇಸರವಾಗದಂತೆ, ರಾಬರ್ಟ್ ಸಿನಿಮಾ ಮೇಲೆ ಆಸಕ್ತಿ ಕಡಿಮೆ ಆಗದಂತೆ ನೋಡಿಕೊಳ್ಳುವ ಕಾರಣದಿಂದ ರಾಬರ್ಟ್‌ ತಂಡವು ಅಭಿಮಾನಿಗಳಿಗೆ ಉಡುಗೊರೆಯೊಂದನ್ನು ನೀಡಲು ಸಜ್ಜಾಗಿದೆ.

ರಾಬರ್ಟ್‌ ಸಿನಿಮಾದ ಟೀಸರ್ ಒಂದು ಬಿಡುಗಡೆ ಆಗಿದೆ

ರಾಬರ್ಟ್‌ ಸಿನಿಮಾದ ಟೀಸರ್ ಒಂದು ಬಿಡುಗಡೆ ಆಗಿದೆ

ರಾಬರ್ಟ್ ಸಿನಿಮಾದ ಒಂದು ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಟೀಸರ್‌ ಜನರ ಗಮನಸೆಳೆದಿದೆ. ಟೀಸರ್‌ನಲ್ಲಿದ್ದ ಹಾಡನ್ನಂತು ದರ್ಶನ್ ಅಭಿಮಾನಿಗಳು ಸಂತೋಷದಿಂದ ಸ್ವೀಕರಿಸಿದ್ದಾರೆ.

ರಾಬರ್ಟ್ ತಂಡದಿಂದ ಮತ್ತೊಂದು ಟೀಸರ್

ರಾಬರ್ಟ್ ತಂಡದಿಂದ ಮತ್ತೊಂದು ಟೀಸರ್

ಈಗ ಮತ್ತೊಂದು ಟೀಸರ್‌ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ. ರಾಬರ್ಟ್ ಸಿನಿಮಾ ಬಿಡುಗಡೆ ತಡವಾಗಿದ್ದರಿಂದ ಅಭಿಮಾನಿಗಳ ನಿರಾಸೆ ನೀಗಿಸಲು ಟೀಸರ್‌ ಮೂಲಕ ಸಿನಿಮಾದ ಸಣ್ಣ ಝಲಕ್ ಅನ್ನು ನೀಡಲು ಚಿತ್ರತಂಡ ನಿರ್ಧರಿಸಿದೆ.

ಆಗಸ್ಟ್ ತಿಂಗಳಲ್ಲಿ ಮತ್ತೊಂದು ಟೀಸರ್

ಆಗಸ್ಟ್ ತಿಂಗಳಲ್ಲಿ ಮತ್ತೊಂದು ಟೀಸರ್

ಆಗಸ್ಟ್ ತಿಂಗಳಲ್ಲಿ ರಾಬರ್ಟ್ ಸಿನಿಮಾದ ಎರಡನೇಯ ಟೀಸರ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಮೊದಲ ಟೀಸರ್‌ ಮಾದರಿಯಲ್ಲಿಯೇ 'ದರ್ಶನ್ ಮಯವಾದ' ಟೀಸರ್ ಅನ್ನು ಹಾಡಿನೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಬೇಕಿತ್ತು

ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಬೇಕಿತ್ತು

ರಾಬರ್ಟ್ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಸಿನಿಮಾ ಮೇ ನಲ್ಲಿಯೇ ಬಿಡುಗಡೆ ಆಗಬೇಕಿತ್ತು ಆದರೆ ಕೊರೊನಾ ಕಾರಣದಿಂದ ಬಿಡುಗಡೆ ಮುಂದಕ್ಕೆ ಹೋಗಿದೆ. ಚಿತ್ರಮಂದಿರ ಪುನರ್ ಪ್ರಾರಂಭವಾದ ಬಳಿಕವಷ್ಟೆ ಸಿನಿಮಾ ಬಿಡುಗಡೆ ಆಗಲಿದೆ.

More from Filmibeat

English summary
Darshan's Robert movie's second teaser may release in August month. First teaser released already.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X