For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಶೂಟಿಂಗ್ ಮುಗಿತು: ದಾಸನಿಂದ ತಂಡದ ಸದಸ್ಯರಿಗೆ ಉಡುಗೊರೆ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಸುಮಾರು 108 ದಿನಗಳ ಕಾಲ ರಾಬರ್ಟ್ ಶೂಟಿಂಗ್ ಮಾಡಲಾಗಿದ್ದು, ಯಶಸ್ವಿಯಾಗಿ ಅಂದುಕೊಂಡಂತೆ ಸಿನಿಮಾ ಮುಗಿಸಿದ್ದಾರೆ. ರಾಬರ್ಟ್ ಶೂಟಿಂಗ್ ಕೊನೆಯ ದಿನ ಚಿತ್ರತಂಡದ ಸದಸ್ಯರಿಗೆ ದಾಸನಿಂದ ವಿಶೇಷವಾದ ಉಡುಗೊರೆ ನೀಡಿದ್ದಾರೆ.

  ಕಳೆದ ಜೂನ್ ತಿಂಗಳಲ್ಲಿ ಸೆಟ್ಟೇರಿದ್ದ ಸಿನಿಮಾ ಬೆಂಗಳೂರು, ಮೈಸೂರು, ಹೈದರಾಬಾದ್, ಪುದುಚೇರಿ, ವಾರಣಾಸಿ, ಲಕ್ನೋ ಸುತ್ತಮುತ್ತಾ ಚಿತ್ರೀಕರಣ ಮಾಡಲಾಗಿದೆ.

  ಆಂಜನೇಯನ ಅವತಾರವೆತ್ತಲು ಮಾಂಸಾಹಾರ ತ್ಯಜಿಸಿದ್ದ 'ರಾಬರ್ಟ್' ದರ್ಶನ್.!ಆಂಜನೇಯನ ಅವತಾರವೆತ್ತಲು ಮಾಂಸಾಹಾರ ತ್ಯಜಿಸಿದ್ದ 'ರಾಬರ್ಟ್' ದರ್ಶನ್.!

  ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸುತ್ತಿದ್ದು, ಆದಷ್ಟೂ ಬೇಗ ಮಾಸ್ಟರ್ ಕಾಪಿ ಸಿದ್ಧ ಮಾಡಲು ಚಿತ್ರತಂಡ ನಿರ್ಧರಿಸಿದೆ. ಸಮ್ಮರ್ ವಿಶೇಷವಾಗಿ ತೆರೆಗೆ ಬರಲು ಚಿಂತಿಸಿರುವ ರಾಬರ್ಟ್ ದೊಡ್ಡ ಬಜೆಟ್ ಚಿತ್ರ ಎನ್ನುವುದು ಗಮನಿಸಬೇಕಾದ ಸಂಗತಿ.

  'ರಾಬರ್ಟ್' ಪೋಸ್ಟರ್ ನಲ್ಲಿ ಕಣ್ಣಿಗೆ ಬಿದ್ದ ಮತ್ತೊಬ್ಬ ಸ್ಟಾರ್ ನಟ: ಯಾರು ಗುರುತಿಸಿ?'ರಾಬರ್ಟ್' ಪೋಸ್ಟರ್ ನಲ್ಲಿ ಕಣ್ಣಿಗೆ ಬಿದ್ದ ಮತ್ತೊಬ್ಬ ಸ್ಟಾರ್ ನಟ: ಯಾರು ಗುರುತಿಸಿ?

  ವಿಭಿನ್ನ ಶೇಡ್ ಗಳಲ್ಲಿ ದರ್ಶನ್ ನಟಿಸಿದ್ದು ಈಗಾಗಲೇ ಎರಡು ಲುಕ್ ಬಹಿರಂಗವಾಗಿದೆ. ಖುದ್ದು ನಿರ್ದೇಶಕ ತರುಣ್ ಸುಧೀರ್ ಕೂಡ ಸಿನಿಮಾದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ''ಅಂದುಕೊಂಡಂತೆ ಸಿನಿಮಾ ಆಗಿದೆ. ಅದಕ್ಕೆ ನಿರ್ಮಾಪಕ ಉಮಾಪತಿ ಶ್ರೀನಿನಾಸ್ ಗೌಡ ಮತ್ತು ದರ್ಶನ್ ಕಾರಣ'' ಎಂದಿದ್ದಾರೆ.

  ದರ್ಶನ್ ಜೊತೆ ಅಶಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ತೆಲುಗು ನಟ ಜಗಪತಿ ಬಾಬು ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ವಿನೋದ್ ಪ್ರಭಾಕರ್, ಚಿಕ್ಕಣ್ಣ, ಸೋನಾಲ್, ರವಿ ಕಿಶನ್, ಶಿವರಾಜ್ ಕೆ ಆರ್ ಪೇಟೆ ಅಂತಹ ಕಲಾವಿದರು ರಾಬರ್ಟ್ ಚಿತ್ರದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದ್ದು, ಸದ್ಯದಲ್ಲೇ ಟ್ರೈಲರ್ ಬರುವ ಸಾಧ್ಯತೆ ಇದೆ.

  English summary
  Challenging star darshan starrer Robert movie shooting complete said director tharun sudhir.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X