ಇಂದಿನಿಂದ ಹೈದರಾಬಾದ್ ನಲ್ಲಿ 'ರಾಬರ್ಟ್' ಶೂಟಿಂಗ್
Recommended Video
ಬೆಂಗಳೂರು ಸುತ್ತಾಮುತ್ತಾ ಚಿತ್ರೀಕರಣ ಮಾಡುತ್ತಿದ್ದ ರಾಬರ್ಟ್ ಈಗ ಹೈದರಾಬಾದ್ ಗೆ ಶಿಫ್ಟ್ ಆಗಿದೆ. ನಿನ್ನೆ ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ಸಂಭಾಷಣೆಕಾರ ರಾಜಶೇಖರ್ ಹೈದರಾಬಾದ್ ಗೆ ಪ್ರಯಾಣ ಬೆಳೆಸಿದ್ದರು. ಇಂದಿನಿಂದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.
ರಾಬರ್ಟ್ ಚಿತ್ರದ ಮುಖ್ಯವಾದ ಭಾಗಗಳನ್ನ ಹೈದರಾಬಾದ್ ನಲ್ಲಿ ಶೂಟ್ ಮಾಡಲು ಪ್ಲಾನ್ ಮಾಡಲಾಗಿದೆ. ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್ ಈ ಚಿತ್ರವನ್ನ ನಿರ್ಮಿಸುತ್ತಿದ್ದು, ತರುಣ್ ಸುಧೀರ್ ನಿರ್ದೇಶನವಿದೆ.
ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮತ್ತು ಡಿ ಬಾಸ್ ಅವರ ಸ್ಟೈಲಿಶ್ ಗೆಟಪ್ ಮೂಲಕ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ. ಹಲವು ವಿಶೇಷತೆಗಳೊಂದಿಗೆ ತಯಾರಾಗುತ್ತಿರುವ ಈ ಚಿತ್ರ ಸ್ಯಾಂಡಲ್ ವುಡ್ ಭಾರಿ ನಿರೀಕ್ಷೆ ಮೂಡಿಸಿದೆ.

ಇತ್ತೀಚಿಗಷ್ಟೆ ರಾಬರ್ಟ್ ಚಿತ್ರದ ನಾಯಕಿಯನ್ನ ಬಹಿರಂಗಪಡಿಸಲಾಗಿತ್ತು. 2014ರ ಮಿಸ್ ಸುಪ್ರಾನ್ಯಾಷನಲ್ ಆಗಿದ್ದ ಭದ್ರಾವತಿ ಹುಡುಗಿ ಆಶಾ ಭಟ್ ಡಿ ಬಾಸ್ ಗೆ ಜೋಡಿಯಾಗಿದ್ದಾರೆ. ಆಶಾ ಭಟ್ ಕೂಡ ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ಕುರುಕ್ಷೇತ್ರದ ಯಶಸ್ಸಿನಲ್ಲಿರುವ ದರ್ಶನ್ ಒಡೆಯ ಸಿನಿಮಾವನ್ನ ಮುಗಿಸಿದ್ದಾರೆ. ಈ ವರ್ಷದ ಅಂತ್ಯಕ್ಕೆ ಒಡೆಯ ತೆರೆಕಾಣಬಹುದು. ರಾಬರ್ಟ್ ಸಿನಿಮಾ ಮುಂದಿನ ವರ್ಷಕ್ಕೆ ಚಿತ್ರಮಂದಿರಕ್ಕೆ ಬರಲಿದೆ.


Click it and Unblock the Notifications











