ಕಾಶಿಗೆ ಹೊರಟ 'ರಾಬರ್ಟ್' ಅಂಡ್ ಟೀಮ್
Recommended Video
ನಟ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದ ಚಿತ್ರೀಕರಣದ ಕೆಲವೇ ದಿನಗಳ ಬಾಕಿ ಇದೆ. ಶೂಟಿಂಗ್ ಗಾಗಿ ಇದೀಗ ಚಿತ್ರತಂಡ ಕಾಶಿಗೆ ತೆರಳಿದೆ.
ಇಂದು (ಡಿಸೆಂಬರ್ 16) ಬೆಂಗಳೂರು ವಿಮಾನ ನಿಲ್ದಾಣದಿಂದ ಚಿತ್ರತಂಡ ಹೊರಟಿದೆ. ದರ್ಶನ್, ಹಾಸ್ಯ ನಟ ಚಿಕ್ಕಣ್ಣ, ನಿರ್ಮಾಪಕ ಉಮಾಪತಿ, ಚಿತ್ರದ ಪೋಸ್ಟರ್ ಡಿಸೈನ್ ಮಾಡಿದ್ದ ಪರಿವರ್ತನ್, ನಿರ್ದೇಶಕ ತರುಣ್ ಸುಧೀರ್ ಹಾಗೂ ತಂತ್ರಜ್ಞರ ತಂಡ ಕಾಶಿಗೆ ಪ್ರವಾಸ ಬೆಳೆಸಿದೆ. ವಾರಣಾಸಿಯಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ.
'ರಾಬರ್ಟ್' ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಇದಾಗಿದೆ. ಕೆಲವು ದೃಶ್ಯಗಳು ಹಾಗೂ ಹಾಡಿನ ಚಿತ್ರೀಕರಣ ಬಾಕಿ ಇದೆ. ಚಿತ್ರೀಕರಣ ಮುಗಿದ ನಂತರ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು, ಡಬ್ಬಿಂಗ್ ಪ್ರಾರಂಭವಾಗಲಿದೆ. ಯುಗಾದಿಗೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

'ಒಡೆಯ' ಸಿನಿಮಾದ ನಂತರ 'ರಾಬರ್ಟ್' ತೆರೆಗೆ ಬರುತ್ತಿದೆ. 2020ರಲ್ಲಿ ಬಿಡುಗಡೆಯಾಗುವ ದರ್ಶನ್ ರ ಮೊದಲ ಸಿನಿಮಾ ಇದಾಗಲಿದೆ. 'ಗಂಡುಗಲಿ ಮದಕರಿ ನಾಯಕ' ಸಿನಿಮಾದ ನಿರ್ಮಾಣಕ್ಕೆ ಬಹಳ ಸಮಯ ಬೇಕಾಗಿದ್ದು, 'ರಾಬರ್ಟ್' ಮುಂದಿನ ವರ್ಷ ಬರುವುದು ಪಕ್ಕಾ.
ಅಂದಹಾಗೆ, ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ವಿನೋದ್ ಪ್ರಭಾಕರ್ ಒಂದು ಪಾತ್ರ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಹಾಡುಗಳು ಹಾಗೂ ಹರಿಕೃಷ್ಣ ಹಿನ್ನಲೆ ಸಂಗೀತ ಇರಲಿದೆ.


Click it and Unblock the Notifications











