twitter
    For Quick Alerts
    ALLOW NOTIFICATIONS  
    For Daily Alerts

    ಕಾಶಿಗೆ ಹೊರಟ 'ರಾಬರ್ಟ್' ಅಂಡ್ ಟೀಮ್

    |

    Recommended Video

    ಕಾಶಿಯಲ್ಲಿ ನಡೆಯಲಿದೆ ರಾಬರ್ಟ್ ದರ್ಬಾರ್ | DARSHAN | ROBERT | FILMIBEAT KANNADA

    ನಟ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದ ಚಿತ್ರೀಕರಣದ ಕೆಲವೇ ದಿನಗಳ ಬಾಕಿ ಇದೆ. ಶೂಟಿಂಗ್ ಗಾಗಿ ಇದೀಗ ಚಿತ್ರತಂಡ ಕಾಶಿಗೆ ತೆರಳಿದೆ.

    ಇಂದು (ಡಿಸೆಂಬರ್ 16) ಬೆಂಗಳೂರು ವಿಮಾನ ನಿಲ್ದಾಣದಿಂದ ಚಿತ್ರತಂಡ ಹೊರಟಿದೆ. ದರ್ಶನ್, ಹಾಸ್ಯ ನಟ ಚಿಕ್ಕಣ್ಣ, ನಿರ್ಮಾಪಕ ಉಮಾಪತಿ, ಚಿತ್ರದ ಪೋಸ್ಟರ್ ಡಿಸೈನ್ ಮಾಡಿದ್ದ ಪರಿವರ್ತನ್, ನಿರ್ದೇಶಕ ತರುಣ್ ಸುಧೀರ್ ಹಾಗೂ ತಂತ್ರಜ್ಞರ ತಂಡ ಕಾಶಿಗೆ ಪ್ರವಾಸ ಬೆಳೆಸಿದೆ. ವಾರಣಾಸಿಯಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ.

    ರಾಬರ್ಟ್, ಮದಕರಿ ನಾಯಕ ಬಳಿಕ ಡಿ-ಬಾಸ್ ಕೈಯಲ್ಲಿ 4 ಚಿತ್ರ, ಯಾವುದು ಮೊದಲು?ರಾಬರ್ಟ್, ಮದಕರಿ ನಾಯಕ ಬಳಿಕ ಡಿ-ಬಾಸ್ ಕೈಯಲ್ಲಿ 4 ಚಿತ್ರ, ಯಾವುದು ಮೊದಲು?

    'ರಾಬರ್ಟ್' ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಇದಾಗಿದೆ. ಕೆಲವು ದೃಶ್ಯಗಳು ಹಾಗೂ ಹಾಡಿನ ಚಿತ್ರೀಕರಣ ಬಾಕಿ ಇದೆ. ಚಿತ್ರೀಕರಣ ಮುಗಿದ ನಂತರ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು, ಡಬ್ಬಿಂಗ್ ಪ್ರಾರಂಭವಾಗಲಿದೆ. ಯುಗಾದಿಗೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

    Robert Movie Team Flys To Varanasi

    'ಒಡೆಯ' ಸಿನಿಮಾದ ನಂತರ 'ರಾಬರ್ಟ್' ತೆರೆಗೆ ಬರುತ್ತಿದೆ. 2020ರಲ್ಲಿ ಬಿಡುಗಡೆಯಾಗುವ ದರ್ಶನ್ ರ ಮೊದಲ ಸಿನಿಮಾ ಇದಾಗಲಿದೆ. 'ಗಂಡುಗಲಿ ಮದಕರಿ ನಾಯಕ' ಸಿನಿಮಾದ ನಿರ್ಮಾಣಕ್ಕೆ ಬಹಳ ಸಮಯ ಬೇಕಾಗಿದ್ದು, 'ರಾಬರ್ಟ್' ಮುಂದಿನ ವರ್ಷ ಬರುವುದು ಪಕ್ಕಾ.

    'ರಾಬರ್ಟ್' ಚಿತ್ರದ ಒಂದು ಗೀತೆಯಲ್ಲಿ 20 ಗಾಯಕರ ಸಮಾಗಮ'ರಾಬರ್ಟ್' ಚಿತ್ರದ ಒಂದು ಗೀತೆಯಲ್ಲಿ 20 ಗಾಯಕರ ಸಮಾಗಮ

    ಅಂದಹಾಗೆ, ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ವಿನೋದ್ ಪ್ರಭಾಕರ್ ಒಂದು ಪಾತ್ರ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಹಾಡುಗಳು ಹಾಗೂ ಹರಿಕೃಷ್ಣ ಹಿನ್ನಲೆ ಸಂಗೀತ ಇರಲಿದೆ.

    English summary
    Robert kannada movie team flys to varanasi.
    Monday, December 16, 2019, 16:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X