ರಾಬರ್ಟ್ ಸಿನಿಮಾ ಬಿಡುಗಡೆ ಯಾವಾಗ: ದರ್ಶನ್ ಹೇಳಿದ್ದು ಹೀಗೆ?
ನಟ ದರ್ಶನ್ ಇಂದು ಫೇಸ್‌ಬುಕ್‌ನಲ್ಲಿ ಲೈವ್ ಬಂದು ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು. ಒಟಿಟಿ, ತಮ್ಮ ಹುಟ್ಟುಹಬ್ಬ, ಕೊರೊನಾ, ಮುಂದಿನ ಸಿನಿಮಾಗಳು ಎಲ್ಲದರ ಜೊತೆಗೆ ಅತ್ಯಂತ ಮುಖ್ಯ ವಿಷಯ ರಾಬರ್ಟ್ ಸಿನಿಮಾದ ಬಿಡುಗಡೆ ಬಗ್ಗೆಯೂ ಮಾತನಾಡಿದರು ದರ್ಶನ್.
ಲೈವ್ ಪ್ರಾರಂಭವಾದಾಗಿನಿಂದಲೂ 'ರಾಬರ್ಟ್ ಬಿಡುಗಡೆ ಯಾವಾಗ' ಎಂಬ ಪ್ರಶ್ನೆಯನ್ನು ಹಲವಾರು ಮಂದಿ ಅಭಿಮಾನಿಗಳು ಕಮೆಂಟ್‌ನಲ್ಲಿ ಕೇಳುತ್ತಿದ್ದರು.
ಈ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಮಾರ್ಚ್ ತಿಂಗಳಲ್ಲಿ ರಾಬರ್ಟ್ ಸಿನಿಮಾ ಬಿಡುಗಡೆ ಪಕ್ಕಾ ಆಗಲಿದೆ. ವಿಶೇಷವಾಗಿ ಮಾರ್ಚ್ 11 ರಂದೇ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬುದು ನಮ್ಮ ಬಯಕೆ. ಎಲ್ಲಾ ಸರಿಹೋದರೆ ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದರು ದರ್ಶನ್.

'ರಾಬರ್ಟ್' ಸಿನಿಮಾ ತೆಲುಗಿನಲ್ಲಿ ಬಿಡುಗಡೆ ಆಗುತ್ತಿರುವ ಬಗ್ಗೆ ಮಾತನಾಡಿದ ದರ್ಶನ್, ಹೌದು ರಾಬರ್ಟ್ ಸಿನಿಮಾದ ತೆಲುಗು ಡಬ್ಬಿಂಗ್ ಕಾರ್ಯ ಮುಗಿಯುತ್ತಾ ಬಂದಿದೆ. ಜನವರಿ 26 ರಿಂದ ರಾಬರ್ಟ್ ಸಿನಿಮಾದ ತೆಲುಗು ವರ್ಷನ್‌ನ ಪ್ರಚಾರ ಕಾರ್ಯಗಳು ಆರಂಭವಾಗಲಿವೆ ಎಂದರು.
ರಾಬರ್ಟ್ ಸಿನಿಮಾ 2020 ರ ಏಪ್ರಿಲ್‌ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಸಿನಿಮಾದ ಬಿಡುಗಡೆ ಒಂದು ವರ್ಷ ತಡವಾಗಿ ಆಗುತ್ತಿದೆ. ಕನ್ನಡದಲ್ಲಿ ಮಾತ್ರವೇ ಅಲ್ಲದೆ ತೆಲುಗಿನಲ್ಲಿಯೂ ರಾಬರ್ಟ್ ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











