For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿ 11 ರಂದು ರಾಬರ್ಟ್ ಚಿತ್ರತಂಡದಿಂದ ಡಬಲ್ ಧಮಾಕ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ಕನ್ನಡ-ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ತೆಲುಗು ಮತ್ತು ಕನ್ನಡದಲ್ಲಿ ರಾಬರ್ಟ್ ಕ್ರೇಜ್ ಹೆಚ್ಚಾಗಿದ್ದು, ಡಿ ಬಾಸ್ ಎಂಟ್ರಿಗೆ ಅಭಿಮಾನಿಗಳು ಕಾಯ್ದಿದ್ದಾರೆ.

  ಇದೀಗ, ಫೆಬ್ರವರಿ 11 ರಂದು ರಾಬರ್ಟ್ ಚಿತ್ರಕ್ಕೆ ಸಂಬಂಧಿಸಿದಂತೆ ಎರಡು ಪ್ರಮುಖ ಘೋಷಣೆ ಮಾಡಲಿದ್ದೇವೆ ಎಂದು ನಿರ್ದೇಶಕ ತರುಣ್ ಸುಧೀರ್ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ತರುಣ್ ''ನಾಳೆ ರಾಬರ್ಟ್ ಚಿತ್ರದ ಎರಡು ಪ್ರಮುಖ ಪ್ರಕಟಣೆ, ಏನಾದರೂ ಊಹೆ ಮಾಡ್ತೀರಾ?'' ಎಂದು ಪೋಸ್ಟ್ ಹಾಕಿದ್ದಾರೆ.

  ರಾಬರ್ಟ್ ಬಿಡುಗಡೆಗೆ ಮುನ್ನ ತಿರುಪತಿಗೆ ಭೇಟಿ ನೀಡಿದ ದರ್ಶನ್-ಉಮಾಪತಿ ರಾಬರ್ಟ್ ಬಿಡುಗಡೆಗೆ ಮುನ್ನ ತಿರುಪತಿಗೆ ಭೇಟಿ ನೀಡಿದ ದರ್ಶನ್-ಉಮಾಪತಿ

  ತರುಣ್ ಸುಧೀರ್ ಪೋಸ್ಟ್ ಗಮನಿಸಿದ ಫ್ಯಾನ್ಸ್ ರಾಬರ್ಟ್ ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕ ಹೇಳ್ತೀರಾ ಎಂದು ಗೆಸ್ ಮಾಡುತ್ತಿದ್ದಾರೆ. ಅದರ ಜೊತೆಗೆ ಜೈ ಶ್ರೀರಾಮ್ ಹಾಡಿನ ತೆಲುಗು ವರ್ಷನ್ ಬಿಡುಗಡೆ ದಿನಾಂಕ ಹೇಳಬಹುದು ಎಂದು ಊಹಿಸುತ್ತಿದ್ದಾರೆ.

  ಅಂದ್ಹಾಗೆ, ಫೆಬ್ರವರಿ 16 ರಂದು ನಟ ದರ್ಶನ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆ ರಾಬರ್ಟ್ ಚಿತ್ರತಂಡ ಡಿ ಬಾಸ್ ಅವರ ಬರ್ತಡೇಯನ್ನು ಸ್ಪೆಷಲ್ ಆಗಿಸಲು ಟ್ರೈಲರ್ ಅಥವಾ ಇನ್ನೊಂದು ಟೀಸರ್ ರಿಲೀಸ್ ಮಾಡಬಹುದು ಎಂದು ಹೇಳಲಾಗುತ್ತಿದೆ.

  ಕನ್ನಡ ಹೀರೋಗಳನ್ನು ಕಂಡು ಹೆದರಿತಾ ತೆಲುಗು ಚಿತ್ರರಂಗ? ಡಿ ಬಾಸ್ ಹೇಳಿದ್ದರ ಅರ್ಥವೇನು? ಕನ್ನಡ ಹೀರೋಗಳನ್ನು ಕಂಡು ಹೆದರಿತಾ ತೆಲುಗು ಚಿತ್ರರಂಗ? ಡಿ ಬಾಸ್ ಹೇಳಿದ್ದರ ಅರ್ಥವೇನು?

  ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್ ಅವರು ಇಂದು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ತಿರುಮಲ ದರ್ಶನದ ಬಳಿಕ ಆಂಧ್ರ ಹಾಗೂ ತೆಲಂಗಾಣದಲ್ಲಿ ರಾಬರ್ಟ್ ಪ್ರಮೋಷನ್ ಶುರು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

  ಟಾಪ್ ಟಾಪ್ ಟಾಪ್ ಟಕ್ಕರ್ ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ | Top Tucker /Filmibeat kannada
  English summary
  Challenging star Darshan starrer Roberrt movie team will announce two big update on February 11th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X