For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಫ್ಯಾಮಿಲಿ ರಾಕಿಂಗ್ ದೀಪಾವಳಿ ಪೋಸ್ಟ್ ದಾಖಲೆ: ಇನ್ನು 'ಯಶ್19' ಅಪ್‌ಡೇಟ್ ಸಿಕ್ಕರೆ?

  |

  ನಾಡಿನೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ತಾರೆಯರ ಮನೆಮನಗಳಲ್ಲಿ ಬೆಳಕಿನ ಹಬ್ಬದ ಸಡಗರ ತುಂಬಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಮಕ್ಕಳ ಜೊತೆ ಅದ್ಧೂರಿಯಾಗಿ ಹಬ್ಬ ಆಚರಿಸಿದ್ದಾರೆ. ಮಕ್ಕಳ ಜೊತೆ ದಂಪತಿ ಪಟಾಕಿ ಹೊಡೆಯುತ್ತಿರುವ ಫೋಟೊಗಳನ್ನು ಶೇರ್ ಮಾಡಿದ್ದು, ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ವೀವ್ಸ್ ಸಾಧಿಸಿ ವೈರಲ್ ಆಗಿದೆ.

  'KGF' ಸರಣಿ ಸಿನಿಮಾಗಳ ನಂತರ ಯಶ್ ಕ್ರೇಜ್ ಯಾವಮಟ್ಟಿಗಿದೆ ಎಂದು ಬಿಡಿಸಿ ಹೇಳುವುದು ಬೇಕಾಗಿಲ್ಲ. ಯಶ್ ನಿಂತ್ರು ಕುಂತ್ರು ಸುದ್ದಿ ಆಗುತ್ತದೆ. ತಮ್ಮ ಅಫೀಷಿಯಲ್ ಸೋಷಿಯಲ್ ಮೀಡಿಯಾ ಪೇಕ್‌ನಲ್ಲಿ ಯಾವುದೇ ಪೋಸ್ಟ್ ಮಾಡಿದರೂ ಸಖತ್ ಸದ್ದು ಮಾಡುತ್ತದೆ. ಯಶ್ ಸದ್ಯ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಯಶ್ ವೈಯಕ್ತಿಕ ವಿಚಾರಗಳು ಹಾಗೂ ಸಿನಿಮಾ ವಿಚಾರಗಳನ್ನು ತಿಳಿದುಕೊಳ್ಳಲು ದೇಶ ವಿದೇಶದ ಅಭಿಮಾನಿಗಳು ಕಾಯುತ್ತಿರುತ್ತಾರೆ. ದಕ್ಷಿಣಭಾರತದ ರಾಜ್ಯಗಳಲ್ಲಿ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ಇನ್‌ಸ್ಟಾಗ್ರಾಮ್‌ನಲ್ಲಿ 11 ಮಿಲಿಯನ್, ಟ್ವಿಟ್ಟರ್‌ನಲ್ಲಿ 1 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದಾರೆ.

  ಆಸ್ಕರ್‌ ಮೇಲೆ ಕಣ್ಣಿಟ್ಟ ವಿಕ್ರಂ- ಪಾ. ರಂಜಿತ್ ತಮಿಳು KGF ಟೀಸರ್ ಹೇಗಿದೆ? ಸತ್ಯಕಥೆಗೆ ಇಟ್ಟ ಟೈಟಲ್ ಏನು?ಆಸ್ಕರ್‌ ಮೇಲೆ ಕಣ್ಣಿಟ್ಟ ವಿಕ್ರಂ- ಪಾ. ರಂಜಿತ್ ತಮಿಳು KGF ಟೀಸರ್ ಹೇಗಿದೆ? ಸತ್ಯಕಥೆಗೆ ಇಟ್ಟ ಟೈಟಲ್ ಏನು?

  ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ದೀಪಾವಳಿ ಸಂಭ್ರಮದಲ್ಲಿ ಬ್ರೇಕಿಂಗ್ ನ್ಯೂಸ್ ಸಿಗುತ್ತೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

  ಯಶ್ ಮನೆಯಲ್ಲಿ ದೀಪಾವಳಿ ಜೋರು

  ಯಶ್ ಮನೆಯಲ್ಲಿ ದೀಪಾವಳಿ ಜೋರು

  ಪ್ರೆಸ್ಟೀಜ್​ ಗಾಲ್ಫ್​ ಅಪಾರ್ಟ್​​ಮೆಂಟ್‌ನಲ್ಲಿರುವ ಫ್ಲಾಟ್‌ನಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಮಕ್ಕಳ ಜೊತೆ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಯಶ್ ಮನೆಯಲ್ಲಿ ಎಲ್ಲಾ ಹಬ್ಬಗಳು ಜೋರಾಗಿತ್ತದೆ. ರಾಕಿಂಗ್ ಸ್ಟಾರ್ ಎಷ್ಟೇ ಬ್ಯುಸಿ ಇದ್ದರೂ ಹಬ್ಬದ ಸಮಯಕ್ಕೆ ಮನೆಗೆ ಬಂದುಬಿಡುತ್ತಾರೆ. ಹಬ್ಬ ಆಚರಣೆಯ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಈ ಬಾರಿ ಐರಾ ಹಾಗೂ ಯಥರ್ವ್ ಜೊತೆ ರಾಕಿಂಗ್ ಜೋಡಿ ಪಟಾಕಿ ಸಿಡಿಸಿ ಖುಷಿಪಟ್ಟಿದ್ದಾರೆ. ಸುರಸುರ ಬತ್ತಿ, ಹೂವಿನ ಬತ್ತಿ ಹಚ್ಚಿ ಮಕ್ಕಳು ಸಂಭ್ರಮಿಸಿದ್ದಾರೆ.

  ಅಪ್ಪು-ಯಶ್ ದೋಸ್ತಿ ನಿನ್ನೆ ಮೊನ್ನೆಯದ್ದಲ್ಲ; ಅಪ್ಪು ಎಂದರೆ ಯಶ್‌ಗೆ ಅಂದು ಇಂದು ಎಂದೆಂದೂ ಅದೇ ಗೌರವಅಪ್ಪು-ಯಶ್ ದೋಸ್ತಿ ನಿನ್ನೆ ಮೊನ್ನೆಯದ್ದಲ್ಲ; ಅಪ್ಪು ಎಂದರೆ ಯಶ್‌ಗೆ ಅಂದು ಇಂದು ಎಂದೆಂದೂ ಅದೇ ಗೌರವ

  ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ಲೈಕ್ಸ್

  ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ಲೈಕ್ಸ್

  "ಬಹಳ ಮುಖ್ಯವಾದ ಕ್ಷಣಗಳು. ದೀಪಾವಳಿ ಹಬ್ಬದ ಶುಭಾಶಯಗಳು" ಎಂದು ಬರೆದು ಯಶ್ ಇನ್‌ಸ್ಟಾಗ್ರಾಂ, ಫೇಸ್ಬುಕ್ ಹಾಗೂ ಟ್ವಿಟ್ಟರ್‌ನಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಪೋಸ್ಟ್ 49 ನಿಮಿಷಗಳಲ್ಲಿ 10 ಲಕ್ಷ ಲೈಕ್ಸ್ ಗಿಟ್ಟಿಸಿ ದಾಖಲೆ ಬರೆದಿದೆ. ಬಹಳ ಕಡಿಮೆ ಸಮಯದಲ್ಲಿ ಪೋಸ್ಟ್‌ವೊಂದಕ್ಕೆ ಇಷ್ಟು ಲೈಕ್ಸ್ ಸಿಕ್ಕಿರುವುದು ವಿಶೇಷ. "ವರ್ಷವೆಲ್ಲಾ ಬೆಳಕು ಹಾಗೂ ಸಂತೋಷದಿಂದ ತುಂಬಿರಲಿ, ಎಲ್ಲರಿಗೂ ದೀಪಾವಳಿಯ ಶುಭಾಶಯಗಳು" ಎಂದು ಬರೆದು ರಾಧಿಕಾ ಪಂಡಿತ್ ಮತ್ತಷ್ಟು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

  ಯಶ್‌ 19 ಸಿನಿಮಾ ಕಥೆ ಏನಾಯ್ತು?

  ಯಶ್‌ 19 ಸಿನಿಮಾ ಕಥೆ ಏನಾಯ್ತು?

  'KGF' - 2 ನಂತರ ಯಶ್ ಯಾವ ಚಿತ್ರದಲ್ಲಿ ನಟಿಸ್ತಾರೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ. ಬಾಲಿವುಡ್ ಮಂದಿ ಕೂಡ ಈ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. 'KGF' ಚಾಪ್ಟರ್- 2 ಸಿನಿಮಾ ರಿಲೀಸ್ ಆಗಿ 6 ತಿಂಗಳು ಕಳೆದರೂ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಯಶ್ ನಟನೆಯ 19ನೇ ಸಿನಿಮಾ ಅಪ್‌ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಸಮಯ ಬಂದಾಗ ಗೊತ್ತಾಗುತ್ತದೆ ಎಂದು ಹೇಳಿ ಯಶ್ ಸುಮ್ಮನಾಗಿದ್ದಾರೆ. ಈ ಹಿಂದೆ ನರ್ತನ್ ನಿರ್ದೇಶನದ ಚಿತ್ರದಲ್ಲಿ ಯಶ್ ನಟಿಸೋ ಮಾತುಗಳು ಕೇಳಿಬಂದಿತ್ತು. ಆದರೆ ಕಥೆ ಇಷ್ಟವಾಗದೇ ಮತ್ತಷ್ಟು ತಿದ್ದಿ ತೀಡುವ ಪ್ರಯತ್ನ ನಡೀತಿದೆಯಂತೆ.

  ಬರ್ತ್‌ಡೇಗೆ ಹೊಸ ಸಿನಿಮಾ ಘೋಷಣೆ?

  ಬರ್ತ್‌ಡೇಗೆ ಹೊಸ ಸಿನಿಮಾ ಘೋಷಣೆ?

  'KGF' ಸರಣಿ ಸಕ್ಸಸ್ ನಂತರ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಗೊಂದಲ, ಒತ್ತಡ ಯಶ್ ಅವರಿಗೂ ಇದೆ. ಹಾಗಾಗಿ ಅಷ್ಟು ಸುಲಭವಾಗಿ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಸದ್ಯ ಸಾಕಷ್ಟು ಕಥೆಗಳು ಚರ್ಚೆಯ ಹಂತದಲ್ಲಿದ್ದು, ಯಶ್ ಹುಟ್ಟಿಹಬ್ಬದ ಸಂಭ್ರಮದಲ್ಲಿ ಸಿನಿಮಾ ಘೋಷಿಸುವ ಸಾಧ್ಯೆತಿದೆ. ಅಂದರೆ ಜನವರಿ 8ಕ್ಕೆ ಯಶ್‌19 ಅಪ್‌ಡೇಟ್ ಸಿಗುವ ಸುಳಿವು ಸಿಗುತ್ತಿದೆ.

  English summary
  Sandalwood Rocking Couple Yash and Radhika Pandit Celebrate Diwali with Kids Ayra and Yatharv Photos Goes Viral. Within 49 minutes of his upload, Yash's post got over 1 million likes and several comments. Know More.
  Tuesday, October 25, 2022, 13:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X