For Quick Alerts
  ALLOW NOTIFICATIONS  
  For Daily Alerts

  ರಾಜ್ಯದಾದ್ಯಂತ 'ರಾಜಾಹುಲಿ' ಘರ್ಜನೆ ಆರಂಭ

  By Rajendra
  |

  ಕನ್ನಡಿಗರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ತೆರೆಗೆ ತಂದಿರುವ ಚಿತ್ರ ರಾಜಾಹುಲಿ. ಈ ಚಿತ್ರ ತಮಿಳಿನ ಸುಂದರಪಾಂಡ್ಯನ್ ರೀಮೇಕ್ ಆದರೂ ಕನ್ನಡಿಗರ ನೇಟಿವಿಟಿಗೆ ತಕ್ಕಂತೆ ಇದೆ ಎಂದು ಚಿತ್ರದ ನಾಯಕ ನಟ ರಾಕಿಂಗ್ ಸ್ಟಾರ್ ಯಶ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

  ಈ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಇರುವುದು ಇನ್ನೊಂದು ಹೈಲೈಟ್. ಈ ಚಿತ್ರಕ್ಕೆ ಯಶ್ ಹುಲಿಯಾದರೆ ನಾನು ರಾಜ ಎಂದು ಚಿತ್ರದ ನಿರ್ಮಾಪಕ ಕೆ ಮಂಜು ಅವರು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದು ಮಂಡ್ಯ ಭಾಷೆಯನ್ನು ಬಳಸಿಕೊಳ್ಳಲಾಗಿದೆ.

  ಈ ಚಿತ್ರದ ಶೇ.60ರಷ್ಟು ಕಥೆ ಬಸ್ ನಲ್ಲೇ ನಡೆಯುತ್ತದೆ. ಶೀರ್ಷಿಕೆ ಗೀತೆಗೆ ಹಂಸಲೇಖಾ ಅವರು ಸಂಗೀತ ಸಂಯೋಜಿಸಿದ್ದು ಚಿತ್ರ ಖಂಡಿತ ನಿರಾಸೆಪಡಿಸಲ್ಲ ಎಂದಿದ್ದಾರೆ ಚಿತ್ರದ ನಿರ್ದೇಶಕ ಗುರು ದೇಶಪಾಂಡೆ. ಮೇಘನಾ ರಾಜ್ ಚಿತ್ರದ ನಾಯಕಿ.

  ಯಶ್ ಅವರ ಹುಲಿಯಂತಹ ಕಲ್ಲಿಮೀಸೆ, ವಿಭಿನ್ನ ಗೆಟಪ್ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅವರು ಇಲ್ಲಿಯವರೆಗೂ ಮಾಡದೇ ಇರುವಂತಹ ಪಾತ್ರ ಇದು ಎನ್ನುತ್ತಾರೆ ನಿರ್ದೇಶಕರು. ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಇರುವುದು ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷಿಸುವಂತಾಗಿದೆ.

  ಇದೇ ಮೊದಲ ಸಲ ಯಶ್ ಗೆ ಸುಂದರ್ ರಾಜ್ ಹಾಗೂ ಪ್ರಮಿಳ ಜೋಸೈ ಅವರ ಪುತ್ರಿ ಮೇಘನ ರಾಜ್ ನಾಯಕಿ ಆಗಿದ್ದಾರೆ. ತಾರಾಗಣದಲ್ಲಿ ಚಿಕ್ಕಣ್ಣ, ಅಶ್ವಿನಿ ಚರಣ್ ರಾಜ್ ಮುಂತಾದವರು ಇದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Rocking Star Yash and Meghana Raj starer Kannada movie Raja Huli will be releasing all over Karnataka in over 100 theaters on 1st November.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X